ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟ

0

 14 ರ ವಯೋಮಾನದ ಬಾಲಕ/ಬಾಲಕಿಯರ ವಿಭಾಗದಲ್ಲಿ ಕೊಣಾಲು ಸರಕಾರಿ ಶಾಲೆಗೆ ಸಮಗ್ರ ಪ್ರಶಸ್ತಿ

ನೆಲ್ಯಾಡಿ: ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟದ 14ರ ವಯೋಮಾನದ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ 40 ಅಂಕ ಪಡೆಯುವುದರೊಂದಿಗೆ ಕೊಣಾಲು ಸರಕಾರಿ ಹಿ.ಪ್ರಾ.ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ಶಾಲೆಯ ಸಂಜನ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡಿದ್ದಾರೆ.


ಬಾಲಕಿಯರ ವಿಭಾಗದಲ್ಲಿ 7ನೇ ತರಗತಿಯ ಸಂಜನ 200, 400 ಹಾಗೂ 600 ಮೀ.ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 7ನೇ ತರಗತಿಯ ಮಿಶ್ರೀಯಾ 400, 600 ಮೀ.ತೃತೀಯ, ರಿಲೇಯಲ್ಲಿ ದ್ವಿತೀಯ, ರಶ್ಮಿಯಾ, ಶ್ರಾವ್ಯ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ 7ನೇ ತರಗತಿಯ ನೇಹಲ್ ಪಿ.ಜೆ. 100 ಮೀ.ತೃತೀಯ, 200 ಮೀ.ದ್ವಿತೀಯ, ರಿಲೇಯಲ್ಲಿ ದ್ವಿತೀಯ, ಪೂರ್ಣೇಶ್ 400 ಮೀ.ಪ್ರಥಮ, 600 ಮೀ.ದ್ವಿತೀಯ, ರಿಲೇ ದ್ವಿತೀಯ, ಸಮರ್ಥ್ ರಿಲೇ ದ್ವಿತೀಯ ಹಾಗೂ 6 ನೇ ತರಗತಿಯ ಚಿಂತನ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಬಿ.,ಅವರು ತರಬೇತಿ ನೀಡಿದರು. ವಿಜೇತ ವಿದ್ಯಾರ್ಥಿಗಳಿಗೆ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕೆ.ಕೆ.ರವರು ಗೌರವಧನ ನೀಡಿ ಗೌರವಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ರಫೀಕ್ ಕೋಲ್ಪೆ, ಸದಸ್ಯರಾದ ಜೇಮ್ಸ್, ಅಶ್ರಫ್, ಶಾಲಾ ಮುಖ್ಯಗುರು ಗಿರಿಜಾ ಪಿ.,ಸಹಶಿಕ್ಷಕರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

LEAVE A REPLY

Please enter your comment!
Please enter your name here