ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳ ಜೈವಿಕ ಸಿಮೆಂಟು ಮಾದರಿ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ನೆಲ್ಯಾಡಿ: ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಜ್ಯೆವಿಕ ಸಿಮೆಂಟು ವಿಜ್ಞಾನ ಮಾದರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
INSEF Indian Science and Engineering Fair ಪ್ರಶಸ್ತಿಗೆ ಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿನಿಯರಾದ ಸಾಧ್ವಿ ಮಾರ್ಲ, ಆದ್ಯತಾ ರಾವ್ ಆಯ್ಕೆಯಾಗಿದ್ದಾರೆ. ಕಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ರಕ್ಷಿತಾರವರು ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈ ಮಾದರಿಯು ಸಂಪೂರ್ಣವಾಗಿ ಜ್ಯೆವಿಕವಾಗಿದ್ದು ಪರ್ಷಿಯ ಮಕ್ರಾಂತ ಮತ್ತು ಗ್ರೇವ್ಯ ಸೆರ್ಲೇಟ್ ಎಂಬ ಮರದ ತೊಗಟೆಯನ್ನು ನೀರಲ್ಲಿ ನೆನೆಸಿಟ್ಟಾಗ ಸಿಗುವ ಅಂಟು ಪದಾರ್ಥವನ್ನು ಸಣ್ಣ ಮರಳಿನೊಂದಿಗೆ ಬೆರೆಸಿ ಜ್ಯೆವಿಕ ಸಿಮೆಂಟನ್ನು ತಯಾರಿಸಲಾಗುತ್ತದೆ. ಈ ಮಾದರಿ ತಯಾರಿಕೆಗೆ ಸಂಸ್ಥೆಯ ವಿಜ್ಞಾನ ಶಿಕ್ಷಕಿಯರಾದ ಪೂರ್ಣಿಮ ಹರೀಶ್, ಪ್ರಣವಿ ಮತ್ತು ಸೋನು ಸಹರಿಸಿದ್ದರು. ಇವರಿಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ವಂದನೀಯ ಗುರುಗಳಾದ ತೋಮಸ್ ಬಿಜಿಲಿ OIC ಹಾಗೂ ಶಿಕ್ಷಕರು ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here