ಮಕ್ಕಳ ದಿನಾಚರಣೆಯ ಸಂಭ್ರಮ ಹೆಚ್ಚಿಸಲು ಬರುತ್ತಿದೆ ‘ಪರ್ಲ್ ಸಿಟಿ ಮುದ್ದು ಪುಟಾಣಿ’

0

ಪುತ್ತೂರು: ಮಕ್ಕಳ ದಿನಾಚರಣೆಯ ಸಂಭ್ರಮವನ್ನು ಪುಟ್ಟ ಮಕ್ಕಳ ತೊದಲು ನುಡಿಗಳು, ತುಂಟಾಟಗಳೊಂದಿಗೆ ಸಂಭ್ರಮಿಸಲು ’ಪರ್ಲ್ ಸಿಟಿ’ ಮುದ್ದು ಪುಟಾಣಿ ಎನ್ನುವ ಕಾಂಟೆಸ್ಟ್ ನ್ನು ಸುದ್ದಿ ಚಾನೆಲ್ ವತಿಯಿಂದ ಆಯೋಜಿಸಲಾಗಿದೆ.


ನ.14ರಿಂದ 19ರವರೆಗೆ ಈ ಕಾರ್ಯಕ್ರಮವು ಸುದ್ದಿ ಚಾನಲ್, ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ ನಲ್ಲಿ  ಮೂಡಿಬರಲಿದೆ. ಪ್ರಥಮ ಹಂತದಲ್ಲಿ ತಾಲೂಕಿನ ವಿದ್ಯಾಕೇಂದ್ರಗಳಿಂದ ಆಯ್ದ ಪುಟಾಣಿಗಳ ನಡುವೆ ಕಿರು ಸ್ಪರ್ಧೆ ಆಯಾ ಶಿಕ್ಷಣ ಸಂಸ್ಥೆಗಳಲ್ಲೇ ನಡೆಯಲಿದ್ದು, ಪ್ರಥಮ ಹಂತದಲ್ಲಿ ವಿಜೇತರಾದ ಓರ್ವ ಪುಟಾಣಿ ಎರಡನೇ ಅಂದರೆ ಫೈನಲ್ ಹಂತಕ್ಕೆ ತೇರ್ಗಡೆಯಾಗಲಿದೆ. ಫೈನಲ್ ಸ್ಪರ್ಧೆಯು ಸುದ್ದಿ ಚಾನೆಲ್ ಸ್ಟುಡಿಯೋದಲ್ಲಿ ನಡೆಯಲಿದೆ. ಇಲ್ಲಿ ವಿಜೇತ ಪುಟಾಣಿ ’ ಪರ್ಲ್ ಸಿಟಿ ಮುದ್ದು ಪುಟಾಣಿ ’ ಟೈಟಲ್ ವಿಜೇತರಾಗಲಿದ್ದಾರೆ. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ಪುಟಾಣಿ ಗಳು ಫಸ್ಟ್ ರನ್ನರ್ ಮತ್ತು ಸೆಕೆಂಡ್ ರನ್ನರ್ ಅಪ್ ಸ್ಥಾನ ಗಳಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here