ಪುತ್ತೂರು : ಸುದಾನ ಶಾಲೆಯಲ್ಲಿ ನ 4 ರಂದು,ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲ ಸಂಘ ಪುತ್ತೂರು, ಜಿಲ್ಲಾ ಮತ್ತು ತಾಲೂಕು ಶಿಕ್ಷಣ ಸಂಪನ್ಮೂಲಗಳ ಕೇಂದ್ರ ಪುತ್ತೂರು, ಹಾಗೂ ಸುದಾನ ವಸತಿ ಶಾಲೆ ಪುತ್ತೂರು ಇವರ ವತಿಯಿಂದ ‘ಮಕ್ಕಳ ಮಾಸೋತ್ಸವ’ ಪ್ರಯುಕ್ತ ಪೋಕ್ಸೋಕಾಯ್ದೆಯ ಬಗ್ಗೆ ಸುದಾನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿ ಅರ್ಚನಾ ಕೆ ಉಣ್ಣಿತಾನ್‌ರವರು ಕಾನೂನು ಎಂದರೇನು? ಅದರ ರಕ್ಷಣೆಯನ್ನು ಹೇಗೆ ಮತ್ತು ಯಾಕೆ ಮಾಡಬೇಕು ಎಂದು ವಿವರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಕೀಲೆ ಹೀರಾ ಉದಯ್‌ರವರು ಪೋಕ್ಸೋ ಕಾನೂನಿನ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಪುತ್ತೂರಿನ ವಕೀಲರ ಸಂಘದ ಅಧ್ಯಕ್ಷ ಮನೋಹರ್‌ಕೆ. ವಿರವರು ಮುಖ್ಯ ಅಭ್ಯಾಗತರಾಗಿ ಆಗಮಿಸಿ ಮಾತನಾಡುತ್ತಾ ಸ್ವಯಂರಕ್ಷಣೆಗಾಗಿ ಕಾನೂನಿನ ರಕ್ಷಣೆಯನ್ನು ಹೇಗೆ ಮಾಡಬೇಕು ಎಂದು ವಿವರಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದರೆ. ವಿಜಯ ಹಾರ್ವಿನ್‌ರವರು ಮಕ್ಕಳ ಹಿತ ರಕ್ಷಣೆ ಮಾಡುತ್ತಿರುವ ಇಲಾಖೆ ಮತ್ತು ವಕೀಲರ ಸಂಘದ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಪುತ್ತೂರಿನ ಶಿಕ್ಷಣ ಸಂಪನ್ಮೂಲದ ಅಧ್ಯಕ್ಷ್ಯೆ ವಕೀಲರು ಆಗಿರುವ ಹರಿಣಾಕ್ಷಿ ಜೆ. ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳಲ್ಲಿ ಮಕ್ಕಳ ಮಾಸೋತ್ಸವದ ಕಾರ್ಯ ವೈಖರಿ ಹಾಗೂ ವಿದ್ಯಾರ್ಥಿ ದೆಸೆಯಲ್ಲಿ ಜಾಗರೂಕತೆಯ ಜವಾಬ್ದಾರಿಗಳನ್ನು ವಿವರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್‌ರವರು ಸ್ವಾಗತಿಸಿದರು.ನಯನಾರೈ (ಅಧ್ಯಕ್ಷರು, ಶಿಕ್ಷಣ ಸಂಪನ್ಮೂಲಗಳ ಒಕ್ಕೂಟ ರಿ. ದ.ಕ ಪ್ಯಾರಾ ಲೀಗಲ್ ವಾಲೆಂಟಿಯರ್, ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು),ಇವರೂ, ಕಾರ್ಯಕ್ರಮವನ್ನು ಆಯೋಜಿಸಿದ್ದ ಎಲ್ಲಾ ಸಂಘಗಳ ಸದಸ್ಯರೂ ಉಪಸ್ಥಿತರಿದ್ದರು. ಸುದಾನ ಶಾಲೆಯ ಮಕ್ಕಳ ಸುರಕ್ಷಾ ಸಮಿತಿ ಈ ಕಾರ್ಯಕ್ರಮವನ್ನು ಸಂಯೋಜಿಸಿತ್ತು.