ಪುತ್ತೂರು ವಸತಿಯುತ ಶಾಲೆಯಿಂದ ನಾಪತ್ತೆಯಾದ ವಿದ್ಯಾರ್ಥಿಗಳಿಬ್ಬರು ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಪತ್ತೆ

0

ಪುತ್ತೂರು: ನ.7 ರಂದು ಸಂಜೆ ಪುತ್ತೂರು ವಸತಿಯುತ ಶಾಲೆಯೊಂದರಿಂದ ನಾಪತ್ತೆಯಾದ ವಿದ್ಯಾರ್ಥಿಗಳಿಬ್ಬರು ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.
ನ.7 ರಂದು ವಿದ್ಯಾರ್ಥಿಗಳಿಬ್ಬರು ವಸತಿಯುತ ಶಾಲೆಯಿಂದ ಸಂಜೆ ವೇಳೆ ನಾಪತ್ತೆಯಾಗಿರುವ ಕುರಿತು ನ.8 ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸುತ್ತಿದ್ದಂತೆ ವಿದ್ಯಾರ್ಥಿಗಳಿಬ್ಬರು ಪುತ್ತೂರು ರೈಲ್ವೇ ನಿಲ್ದಾಣದಕ್ಕೆ ಬಂದಿರುವ ಮಾಹಿತಿ ಲಭ್ಯವಾಗಿತ್ತು. ಈ ನಿಟ್ಟಿನಲ್ಲಿನ ಕಾಣೆಯಾದ ವಿದ್ಯಾರ್ಥಿಗಳಿಬ್ಬರ ಪತ್ತೆಯ ಬಗ್ಗೆ ದ.ಕ ಜಿಲ್ಲೆ ಪೊಲೀಸ್‌ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ದ.ಕ ಜಿಲ್ಲೆರವರ ನಿರ್ದೇಶನದಲ್ಲಿ, ಮಾನ್ಯ ಪೊಲೀಸ್‌ ಉಪಾಧೀಕ್ಷಕರು, ಪುತ್ತೂರು ಉಪವಿಭಾಗರವರ ಮಾರ್ಗದರ್ಶನದಲ್ಲಿ ದ.ಕ ಮಹಿಳಾ ಪೊಲೀಸ್‌ ಠಾಣೆ ಪುತ್ತೂರಿನ ಅಧಿಕಾರಿ ಮತ್ತು ಎಸ್.ಐ ಸೇಸಮ್ಮ, ಸಿಬ್ಬಂದಿಗಳಾದ ಸುಚಿನ್‌, ರಮೇಶ್‌, ದಿವ್ಯಶ್ರೀ ಹಾಗೂ ಪುತ್ತೂರು ನಗರ ಠಾಣೆಯ ಸಿಬ್ಬಂದಿಗಳಾದ ಉದಯ ಮತ್ತು ಸ್ಕರಿಯರವರು ಪುತ್ತೂರಿನಲ್ಲಿ ಸಿಸಿ ಕ್ಯಾಮರ ಆಧರಿಸಿ ಮಾಹಿತಿ‌ಪಡೆದಂತೆ ಇನ್ನೊಂದು ತಂಡದಲ್ಲಿ ಎಎಸ್‌ಐ ಚಂದ್ರಹಾಸ ಶೆಟ್ಟಿ ಮತ್ತು ಸಿಬ್ಬಂದಿ ಕುಮಾರಸ್ವಾಮಿಯವರು ಸಕಲೇಶಪುರ, ಮೈಸೂರು, ಬೆಂಗಳೂರು ಎಂಬಲ್ಲಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿದ್ದರು.‌ ಇದರ ಜೊತೆಗೆ ರೈಲ್ವೇ ಪೊಲೀಸ್‌, ಸಿಆರ್‌ಪಿಎಫ್‌, ರೈಲ್ವೇ ಅಧಿಕಾರಿಗಳಿಗೆ ನೀಡಲಾಗಿತ್ತು. ನ.10 ರಂದು ದಿನ ವಿದ್ಯಾರ್ಥಿಗಳಿಬ್ಬರು ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪೊಲೀಸರಿಗೆ ಪತ್ತೆಯಾಗಿದ್ದಾರೆ. ವಿದ್ಯಾರ್ಥಿಗಳನ್ನು ಬೆಂಗಳೂರು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ.

LEAVE A REPLY

Please enter your comment!
Please enter your name here