ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು  ವತಿಯಿಂದ ಕೆಪಿಎಲ್ ಸೀಸನ್ 2 ಕ್ರಿಕೆಟ್ ಪಂದ್ಯಾಟ ಉದ್ಘಾಟನಾ ಸಮಾರಂಭ

0

ಕೆಯ್ಯೂರು:  ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್  ಕೆಯ್ಯೂರುವತಿಯಿಂದ ಕೆಪಿಎಲ್ ಸೀಸನ್ 2 ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭ  ನ.11ರಂದು ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರಿನಲ್ಲಿ ನಡೆಯಿತು.  ಕರುಣಾಕರ ರೈ ಸಣಂಗಳ ನಡುಮನೆ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ,  ತೆಂಗಿನಕಾಯಿ ಒಡೆಯುದರ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಗೌರವ ಸಲಹೆಗಾರ ಸದಾಶಿವ ಭಟ್ ಎ, ಹುಸೈನಾರ್ ಸಂತೋಷ್ ನಗರ, ತಂಡದ ನಾಯಕರಾದ ಸಹಜ್ ರೈ ಬಳಜ್ಜ, ಸಂದೀಪ್ ರೈ ನಂಜೆ,  ಮನೋಜ್ ರೈ ಮಾಡಾವು, ದೀಪಕ್ ರೈ ಮಾಡಾವು, ಸತೀಶ್ ರೈ ದೇವಿನಗರ, ಚಂದ್ರಶೇಖರ ರೈ ಸಣಂಗಳ, ಸುರೇಶ್ ರೈ ಪಿದಪಟ್ಲ, ಶರತ್ ಕುಮಾರ್ ಮಾಡಾವು, ಪ್ರಸನ್ನ ಕುಮಾರ್ ಎಂ.ಪಿ ಮಾಡಾವು, ಅನೀಸ್ ಸಂತೋಷ್ ನಗರ, ನಾಸಿರ್ ಮಾಡಾವು, ಅಶ್ವಥ್ ಕೆ.ಎಸ್ ಕಣಿಯಾರು, ಅಶೋಕ್ ಕೆ.ಎಸ್ ಕಣಿಯಾರು, ರವೀಂದ್ರ ಕೆ.ಎಸ್ ಕಣಿಯಾರು, ಕೃಷ್ಣ ಪ್ರಸಾದ್ ರೈ ಕಣಿಯಾರು, ವೀನಿತ್ ರೈ ದೇರ್ಲ, ಶರತ್ ಕುಮಾರ್ ರೈ ದೇರ್ಲ, ದಿನೇಶ್ ಕೆ.ಎಸ್, ದೀಪಕ್ ಕೆ.ಎಸ್, ಪ್ರಶಾಂತ್ ಕುಮಾರ್ ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು. ಕ್ಲಬ್ ನ ಗೌರವ ಸಲಹೆಗಾರ ತಾರಾನಾಥ ರೈ ಕೊಡಂಬು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here