ಕಾಣಿಯೂರಿನಲ್ಲಿ ಬೃಹತ್ ಹಿಂದೂ ಜಾಗೃತಿ ಸಮಾವೇಶ

0

  • ಹಿಂದೂ ಸಮಾಜ ದೇಶದ ಆತ್ಮ, ಸತ್ಯ ಧರ್ಮ ನ್ಯಾಯದಡಿಯಲ್ಲಿ ಮುನ್ನಡೆಯುತ್ತಿದೆ – ಸಾದ್ವಿ ಶ್ರೀ ಮಾತಾನಂದಮಯಿ
  • ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಶಕ್ತಿಗಳನ್ನು ಧಮನಿಸಲು ಸಿದ್ದ – ರಘು ಸಕಲೇಶಪುರ

2047ನೇ ಇಸವಿಗೆ ಭಾರತ ದೇಶವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಕೇವಲ 25 ಶೇಕಡಾ ಇರುವ ಮುಸಲ್ಮಾನರು ಹೇಳುತ್ತಾರೆ ಎಂದಾದರೆ ಶೇಕಡಾ 75ರಷ್ಟು ಇರುವ ಹಿಂದೂ ಸಮಾಜಕ್ಕೆ ಇನ್ನು ಎಷ್ಟೋ ಗತ್ತು ಇರಬೇಕು. ಎಸ್‌ಡಿಪಿಐ, ಕೆಎಫ್, ಪಿಎಫ್ಐ ಸಂಘಟನೆಗಳು ಕೇವಲ ಸಂಘಟನೆಗಳು ಅಲ್ಲ. ಅದೊಂದು ಭಯೋತ್ಪಾದಕ ಸಂಘಟನೆ ಎಂದು ಇಡೀ ದೇಶದಲ್ಲಿ ಸಾಬೀತು ಆಗಿದೆ. ಈ ಬಗ್ಗೆ ರಾಷ್ತ್ರೀಯ ತನಿಖಾ ತಂಡವೇ ಹೇಳಿಕೆಯನ್ನು ನೀಡಿವೆ. ನಾವು ಖರೀದಿಸುವ ಪ್ರತಿಯೊಂದು ಸಾಮಾಗ್ರಿಗಳನ್ನು ಎಲ್ಲಿಂದ ತೆಗೆದುಕೊಳ್ಳಬೇಕು ಎಂದು ನಾವು ಇವತ್ತಿನಿಂದಲೇ ಸಂಕಲ್ಪ ಮಾಡಿಕೊಳ್ಳಬೇಕು. ನಮ್ಮ ಸಂಕಲ್ಪದಲ್ಲಿ ಇಚ್ಛಾಶಕ್ತಿ ಇದ್ದಾಗ ಹಿಂದೂ ಸಮಾಜ ಶಾಶ್ವತವಾಗಲು ಸಾಧ್ಯ.
ರಘು ಸಕಲೇಶಪುರ, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ

ಕಾಣಿಯೂರು: ಹಿಂದೂ ಸಮಾಜ ಈ ದೇಶದ ಆತ್ಮ, ಸತ್ಯ ಧರ್ಮ ನ್ಯಾಯದಡಿಯಲ್ಲಿ ಮುನ್ನಡೆಯುತ್ತಿದೆ. ಮಾತೆಯರಿಗೆ ವಿಶೇಷ ಸ್ಥಾನಮಾನವಿರುವ ಈ ಸಮಾಜದಲ್ಲಿ ವಿರೋಧ ವ್ಯಕ್ತವಾದರೆ ತಕ್ಕ ಶಾಸ್ತಿಯಾಗುತ್ತದೆ ಎನ್ನುವುದಕ್ಕೆ ಪುರಾಣದಲ್ಲಿ ಉಲ್ಲೇಖವಿದೆ. ಮತಾಂತರ, ಅತ್ಯಾಚಾರ, ಗೋಹತ್ಯೆ ಹಿಂದೂ ಧರ್ಮದ ಬೆಳವಣಿಗೆಗೆ ಕಂಟಕವಾಗಿದೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜ ಜಾಗೃತವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಮಾತಾನಂದಮಯಿ ನುಡಿದರು.
ಅವರು ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ ದುರ್ಗಾ ವಾಹಿನಿ ಕಾಣಿಯೂರು ಪುತ್ತೂರು ಗ್ರಾಮಾಂತರ ಪ್ರಖಂಡ ಹಾಗೂ ಹಿಂದೂ ಜಾಗರಣ ವೇದಿಕೆ ಪುತ್ತೂರು ನೇತೃತ್ವದಲ್ಲಿ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ನಡೆದ ಹಿಂದೂ ಜಾಗೃತಿ ಸಮಾವೇಶದಲ್ಲಿ ಅವರು ಆಶಿರ್ವಚನ ನೀಡಿದರು.
ದಿಕ್ಸೂಚಿ ಭಾಷಣ ಮಾಡಿದ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಮಾತನಾಡಿ, ಇತ್ತೀಚೆಗೆ ಕಾಣಿಯೂರು ಭಾಗದಲ್ಲಿ ನಡೆದ ದಲಿತ ಮಹಿಳೆಯ ಅತ್ಯಾಚಾರ ಯತ್ನ ಪ್ರಕರಣವನ್ನು ಸಮರ್ಥನೆ ಮಾಡುವ ಸಮಾಜದ ವಿರುದ್ದ ಸೆಟೆದು ನಿಲ್ಲಬೇಕಾದ ಅನಿವಾರ್ಯತೆಯಿದೆ. ಈ ಮಹಿಳೆಯನ್ನು ರಕ್ಷಣೆ ಮಾಡಿ, ಪ್ರಾಣ ಕೊಡಲೂ ಸಿದ್ದವಿರುವ ಹಿಂದೂ ಕಾರ್ಯಕರ್ತರು ಇದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಶಕ್ತಿಗಳನ್ನು ದಮನಿಸಲು ಇಲಾಖೆಗೆ ಸಂಪೂರ್ಣ ಪಾರದರ್ಶಕ ಅಽಕಾರ ಸರ್ಕಾರ ನೀಡಿದೆ. ಈ ಘಟನೆ ಬಗ್ಗೆ ಯು.ಟಿ ಖಾದರ್ ಅತ್ಯಾಚಾರಕ್ಕೆ ಯತ್ನಿಸಿದವರ ಪರ ನಿಲ್ಲುತ್ತಾರೆ ಎಂದಾದರೆ ಮುಂದಿನ ಚುನಾವಣೆಯಲ್ಲಿ ಸೋಲು ನಿಶ್ಚಿತ ಎಂದು ಹೇಳಿದರು. ಖಾದರ್ ಅವರಿಗೆ ಸವಾಲ್ ಹಾಕಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಬೆಳಿಯಪ್ಪ ಗೌಡ ದೇವರತ್ತಿಮಾರು ಅಧ್ಯಕ್ಷತೆ ವಹಿಸಿದ್ದರು. ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತ್ತಡ್ಕ, ಪ್ರಾಂತ ಹಿಂದೂ ಯುವ ವಾಹಿನಿ ಪ್ರಮುಖ್ ಹಿಂದೂ ಜಾಗರಣ ವೇದಿಕೆಯ ಚಿನ್ಮಯ ರೈ ಈಶ್ವರಮಂಗಲ, ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು, ವಿಶ್ವ ಹಿಂದೂ ಪರಿಷದ್ ಪುತ್ತೂರು ಗ್ರಾಮಂತರ ಪ್ರಖಂಡ ಕಾರ್ಯದರ್ಶಿ ರವಿಕುಮಾರ್ ಕೈತಡ್ಕ, ಬೆಳಂದೂರು ವಲಯ ಬಜರಂಗದಳ ಸಂಚಾಲಕ ಜಗದೀಶ್ ಅಗಳಿ ಉಪಸ್ಥಿತರಿದ್ದರು. ಲಾವಣ್ಯ ವೈಯುಕ್ತಿಕ ಗೀತೆ ಹಾಡಿದರು. ಧನುಷ್ ವಂದೇ ಮಾತರಂ ಹಾಡಿದರು. ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಪ್ರಸ್ತಾವಿಸಿದರು. ಮೋಹನ್‌ದಾಸ್ ರೈ ಬಲ್ಕಾಡಿ ಸ್ವಾಗತಿಸಿದರು. ಅನಿಲ್ ಖಂಡಿಗ ವಂದಿಸಿದರು. ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ಸಂಯೋಜಕ ವಿಶಾಖ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.
ಬೃಹತ್ ಮೆರವಣಿಗೆ.. ಕಾರ್ಯಕ್ರಮದ ಆರಂಭದಲ್ಲಿ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜು ದ್ವಾರದ ಬಳಿಯಿಂದ ಕಾಣಿಯೂರು ಮುಖ್ಯರಸ್ತೆಯ ಮೂಲಕ ಮೆರವಣಿಗೆಯಲ್ಲಿ  ಸಾದ್ವಿ ಶ್ರೀ ಮಾತಾನಂದಮಯಿ ಸ್ವಾಮೀಜಿಯವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

LEAVE A REPLY

Please enter your comment!
Please enter your name here