36ನೇ ರಾಷ್ಟ್ರೀಯ ಕ್ರೀಡಾಕೂಟ : ವೈಷ್ಣವ್ ಹೆಗ್ಡೆಗೆ ಬೆಳ್ಳಿ ಪದಕ

0

 

ಪುತ್ತೂರು:ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತೀಯ ನೌಕಾಪಡೆಯ ಈಜುಗಾರ ವೈಷ್ಣವ್ ಹೆಗ್ಡೆ ಸೇವಾ ತಂಡ(ಎಸ್‌ಎಸ್‌ಸಿಬಿ)ವನ್ನು ಪ್ರತಿನಿಧಿಸಿ 50 ಮೀ.ಬ್ರೆಸ್ಟ್  ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಪ್ರತಿಷ್ಠಿತ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೇವೆಗಳ ತಂಡ (ಭಾರತೀಯ ರಕ್ಷಣಾ ತಂಡ) ಒಟ್ಟು 128 ಪದಕಗಳನ್ನು ಗೆದ್ದುಕೊಂಡಿತು.ಅವರ ತಂಡವು ಅಸಾಧಾರಣವಾದ ಸ್ಥೈರ್ಯ, ಕೌಶಲ್ಯ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿ ಒಟ್ಟಾರೆ ಚಾಂಪಿಯನ್ ಪಡೆಯುವುದರೊಂದಿಗೆ ಪ್ರತಿಷ್ಠಿತ ರಾಜಾ ಭಲೀಂದ್ರ ಸಿಂಗ್ ಟ್ರೋಫಿಯನ್ನು ಗೆದ್ದುಕೊಂಡಿತು.ಅವರ ಅನುಕರಣೀಯ ಪ್ರದರ್ಶನಕ್ಕಾಗಿ ಸೇವೆಗಳ ತಂಡವನ್ನು ನ.15ರಂದು ನವದೆಹಲಿಯ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು ಗೌರವಿಸುತ್ತಾರೆ.ವೈಷ್ಣವ್ ಹೆಗಡೆಯವರೂ ಸನ್ಮಾನ ಸ್ವೀಕರಿಸಲಿದ್ದಾರೆ.
ಈಜಿನಲ್ಲಿ ಭಾರತೀಯ ನೌಕಾಪಡೆಯನ್ನು ಪ್ರತಿನಿಧಿಸಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದ ದಕ್ಷಿಣ ಕನ್ನಡದ ಮೊದಲ ಮತ್ತು ಏಕೈಕ ಈಜುಗಾರರೆಂಬ ಹೆಗ್ಗಳಿಕೆ ಪಡೆದಿರುವ ವೈಷ್ಣವ್ ಹೆಗ್ಡೆಯವರು ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಸದಸ್ಯರಾಗಿದ್ದಾರೆ.ಅವರಿಗೆ ಪಾರ್ಥ ವಾರಣಾಸಿ,ನಿರೂಪ್,ರೋಹಿತ್,ದೀಕ್ಷಿತ್ ಅವರಿಂದ ಪುತ್ತೂರಿನ ಡಾ|ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಮತ್ತು ಮಂಗಳೂರಿನ ಸೇಂಟ್ ಅಲೋಶಿಯಸ್ ಪೂಲ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಯೋಗ ತರಬೇತುದಾರ ಕರುಣಾಕರ್ ಉಪಾಧ್ಯಾಯ ಮತ್ತು ಮಂಜುನಾಥ್‌ರವರು ವೈಷ್ಣವ್ ಅವರ ಫಿಟ್ನೆಸ್ ತರಬೇತುರಾರರು.

LEAVE A REPLY

Please enter your comment!
Please enter your name here