ಹಿರಿಯರ ಕ್ರೀಡಾಕೂಟದಲ್ಲಿ ಕಾಣಿಯೂರಿನ ಸುಶೀಲ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಕಾಣಿಯೂರು: ಸುಳ್ಯ ತಾಲೂಕು ಹಿರಿಯರ ಕ್ರೀಡಾ ಸಂಘ ಪಂಜ, ಕಡಬ ತಾಲೂಕು ಹಿರಿಯರ ಕ್ರೀಡಾ ಸಂಘ, ಪುತ್ತೂರು ತಾಲೂಕು ಹಿರಿಯರ ಕ್ರೀಡಾ ಸಂಘ ಕಾಣಿಯೂರು ಇದರ ವತಿಯಿಂದ ಕಡಬ ಸಂತ ಜೋಕಿಮ್ ಕ್ರೀಡಾಂಗಣದಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ಕಾಣಿಯೂರು ಗ್ರಾಮದ ಪೆರ್ಲೋಡಿ ಸುಶೀಲರವರು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

70ರ ವಯೋಮಾನದ ವಿಭಾಗದಲ್ಲಿ ಸುಶೀಲರವರು ಭಾಗವಹಿಸಿದ 5 ಸಾವಿರ ವೇಗ ನಡಿಗೆ, ೨200ಮೀ ಓಟ, 400ಮೀ ಓಟ, 800ಮೀ ಓಟ, ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿಕೊಂಡು ಬರುತ್ತಿರುವ ಸುಶೀಲರವರು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here