ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಟೋಪ್ಕೋ ಝಂ ಝಂ ಜ್ಯುವೆಲ್ಲರಿಯಲ್ಲಿ ಗ್ರಾಹಕರ ಮಾಸಿಕ ಉಳಿತಾಯ ಯೋಜನೆಯ ಡ್ರಾ ಕಾರ್ಯಕ್ರಮ ನಡೆಯಿತು. ಬಂಪರ್ ಬಹುಮಾನ ವಾಷಿಂಗ್ ಮೆಷೀನ್ ಅನ್ನು ಝಕಿಯಾ ಮುರ ರವರು ವಿಜೇತರಾದರು. ಡ್ರಾದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಗ್ರಾಹಕರ ಪೈಕಿ ಐವರು ಗ್ರಾಹಕರಿಗೆ ಲಕ್ಕಿ ಡ್ರಾದ ಮೂಲಕ ಆಕರ್ಷಕ ಬಹುಮಾನವನ್ನು ಪಡೆದುಕೊಂಡರು.
ಮಾಸಿಕ ಕನಿಷ್ಟ ಐನೂರು ರೂಪಾಯಿಯಿಂದ ಆರಂಭವಾಗುವ ಈ ಸ್ಕೀಂಗೆ ಒಂದು ವರ್ಷದ ವರೆಗೆ ಪ್ರತಿ ತಿಂಗಳು ಹಣ ಪಾವತಿ ಮಾಡಬೇಕಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಸಾಬ್ ಕೂರ್ನಡ್ಕ, ಇಸಾಖ್ ಫ್ಯಾನ್ಸಿ ಉಪಸ್ಥಿತರಿದ್ದರು.ಸಂಸ್ಥೆಯ ಸಿಬ್ಬಂದಿಗಳಾದ ಅನಸ್, ಹಮೀದ್, ಸಂಶುದ್ದೀನ್, ಅಫ್ರಿದ್, ಗೋಪಾಲ ಆಚಾರಿ ಸಹಕರಿಸಿದರು.ಅಬ್ದುಲ್ ಅಝೀಝ್ ಕೆಮ್ಮಾಯಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.