ಅಡೆಕ್ಕಲ್ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ಹಿರಿಯ ವಿದ್ಯಾರ್ಥಿ ಸಂಘದಿಂದ ಶಾಲೆಗೆ  40 ಸಾವಿರ ರೂಪಾಯಿ ಮೌಲ್ಯದ ವಿವಿಧ ಅಗತ್ಯ ವಸ್ತುಗಳ ಕೊಡುಗೆ

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 14ರಂದು ಸಂಭ್ರಮದ ಮಕ್ಕಳ ದಿನಾಚರಣೆಯೊಂದಿಗೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಗೆ ಕೊಡ ಮಾಡಿದ ಹಲವಾರು ಕೊಡುಗೆಗಳ ಹಸ್ತಾಂತರ ಕಾರ್‍ಯಕ್ರಮ ನಡೆಯಿತು.

ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಗೆ ನಲಿಕಲಿ ತರಗತಿಯ ಮಕ್ಕಳ ಅನುಕೂಲತೆಗಾಗಿ 40 ಕುರ್ಚಿ, 8 ದುಂಡಗಿನ ಮೇಜು, ನಲಿಕಲಿ ತರಗತಿಯ ಬಣ್ಣ ಬಳಿಯುವ ಖರ್ಚು ಹಾಗೂ ಶಾಲೆಗೆ ಅಗತ್ಯವಾಗಿದ್ದ ಸುಮಾರು 4000 ರೂಪಾಯಿ ವೆಚ್ಚದ ಕಲಿಕೋಪಕರಣ, ಟ್ಯೂಬ್ ಲೈಟ್-10, 7 ಗೋಡೆ ಗಡಿಯಾರ, ಎ-4 ಶೀಟ್ 4 ಬಂಡಲ್, ಇಲೆಕ್ಟ್ರಿಕಲ್ ರಿಪೇರಿ ಕೆಲಸಗಳಿಗೆ ಸೇರಿದಂತೆ ಸುಮಾರು 40 ಸಾವಿರ ರೂಪಾಯಿ ಮೊತ್ತದ ಸಾಮಾಗ್ರಿಗಳನ್ನು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಶಾಲಾ ಎಸ್.ಡಿ.ಎಂ.ಸಿ. ಯ ಅಧ್ಯಕ್ಷರ ಮೂಲಕ ಶಾಲೆಗೆ ಹಸ್ತಾಂತರಿಸಲಾಯಿತು.

ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ಚಂದ್ರಾವತಿ ನೆಹರೂತೋಟ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ ಹಳೆ ವಿದ್ಯಾರ್ಥಿ ಸಂಘದ ಸೇವಾ ಮನೋಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್.ಡಿ.ಎಮ್.ಸಿ. ಅಧ್ಯಕ್ಷ ರಮಾನಂದ ಗೌಡ ಮಾತನಾಡಿ ಶಾಲೆಐ ಬೇಡಿಕೆಗೆ ಅನುಗುಣವಾಗಿ ಸ್ಪಂಧಿಸಿ ಸಹಕಾರ ನೀಡಿದ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಶಾಲಾ ಆಡಳಿತ ಮಂಡಳಿ ಅಭಾರಿ ಆಗಿರುವುದಾಗಿ ತಿಳಿಸಿದರು.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪರಿಣಿತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಹಳೆ ವಿದ್ಯಾರ್ಥಿಗಳು ಕೊಡುಗೆಯ ಮೂಲಕ ಶಾಲೆಯ ಅಭಿವೃದ್ಧಿಗೆ ಸಹಕಾರಿ ಆಗಿದ್ದೀರಿ, ಪೋಷಕರು, ದಾನಿಗಳು ಈ ರೀತಿಯಾಗಿ ಮುಂದೆ ಬಂದಾಗ ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದುವುದರ ಜೊತೆಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೂ ಇದು ಸಹಕಾರಿ ಆಗಲಿದೆ ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮಾತನಾಡಿ ಹಳೆ ವಿದ್ಯಾರ್ಥಿ ಸಂಘದ ಈ ಸೇವೆಗೆ ಅಡೆಕಲ್ ಕಾರುಣ್ಯ ಅನಿವಾಸಿ ಒಕ್ಕೂಟ ಕೈಜೋಡಿಸಿದ್ದು, ಎಲ್ಲರ ಸಹಕಾರದಿಂದ ಈ ಕೊಡುಗೆ ನೀಡುವುದಕ್ಕೆ ಸಾಧ್ಯವಾಗಿದ್ದು, ಸಹಕರಿಸಿದ ಎಲ್ಲರಿಗೂ ಹಳೆ ವಿದ್ಯಾರ್ಥಿ ಸಂಘ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಸೈನಾರ್ ಪಿ., ಪ್ರಧಾನ ಕಾರ್ಯದರ್ಶಿ ಹೈದರ್ ಅಡೆಕ್ಕಲ್, ಉಪಾಧ್ಯಕ್ಷ ನವೀನ್ ಶೆಟ್ಟಿ, ಉಪ ಕಾರ್ಯದರ್ಶಿ ಸನತ್ ರೈ, ಅಡೆಕಲ್ ಕಾರುಣ್ಯ ಅನಿವಾಸಿ ಒಕ್ಕೂಟದ ಉಪಾಧ್ಯಕ್ಷ ಸಲೀಮ್ ಯಂ.ಯಸ್.ಕೆ., ಸದಸ್ಯರಾದ ಅಬೂಬಕ್ಕರ್ ಸಿದ್ದಿಕ್, ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ಸುಮಯ್ಯ, ಸದಸ್ಯ ಅಬ್ಬಾಸ್ ಬಿ.ಟಿ. ಉಪಸ್ಥಿತರಿದ್ದರು.
ಅತಿಥಿ ಶಿಕ್ಷಕಿ ರೋಹಿಣಿ ಬಂಗೇರ ಸ್ವಾಗತಿಸಿ, ಚಂಚಲಾಕ್ಷಿ ವಂದಿಸಿದರು. ಗೌರವ ಶಿಕ್ಷಕಿಹೇಮಾವತಿ, ಜಿಪಿಟಿ. ಶಿಕ್ಷಕಿ ಕೃಷ್ಣಮ್ಮ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here