ಅಮ್ಮುಂಜೆ : ಅನುದಾನಿತ ಹಿ ಪ್ರಾ ಶಾಲೆಯ ವೀರ ಯೋಧ ಯಾದವ್ ಪೂಜಾರಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಇತ್ತೀಚೆಗೆ ನಡೆಯಿತು. ಸಮ್ಮೇಳನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಎಸಿ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಕಲಾ ಸಾಧಕಿ ಸವಿತಾ ಕೋಡಂದೂರ್ ಅವರು ಸನ್ಮಾನ ಸ್ವೀಕರಿಸಿದರು.
ಸಮ್ಮೆಮೇಳನ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಪ್ರೊ ಕೆ ಬಾಲಕೃಷ್ಣ ಗಟ್ಟಿ, ದ.ಕ ಕ.ಸಾ.ಪ ಅಧ್ಯಕ್ಷರಾದ ಡಾ ಎಂಪಿ ಶ್ರೀನಾಥ್, ಬಂಟ್ವಾಳ ತಾಲೂಕು ಕ.ಸಾ.ಪ ಅಧ್ಯಕ್ಷರಾದ ವಿಶ್ವನಾಥ್, ಕಾರ್ಯದರ್ಶಿ ರಾಜೇಶ್ವರಿ, ರಾಷ್ಟ್ರಪ್ರಶಸ್ತಿ ವಿಜೇತ ಜೇನು ಕೃಷಿ ಕಲಾ ಪ್ರೋತ್ಸಾಹಕರಾದ ಕುಮಾರ್ ಪೆರ್ನಾಜೆ, ನ್ಯಾಯವಾದಿ ಅಶ್ವಿನಿ ಕುಮಾರ್ ರೈ, ಕಸಾಪ ಗೌರವ ಕಾರ್ಯದರ್ಶಿಗಳಾದ ರಮಾನಂದ ನೂಜಿಪ್ಪಾಡಿ, ಸ್ವಾಗತ ಸಮಿತಿಯ ಅಧ್ಯಕ್ಷರಾದ ಉಮೇಶ್ ಸಾಲ್ಯನ್ ಬೆಂಜನ ಪದವು, ಪ್ರಧಾನ ಸಂಚಾಲಕ ಅಬೂಬಕರ್ ಅಮ್ಮುಂಜೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಮನಾ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಜನಾರ್ದನ ಅಮ್ಮುಂಜೆ, ವಿ. ಸು ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮೀಣ ಕಲಾಪ್ರತಿಭೆ:
ಕೃಷಿ ಜೊತೆ ಸಂಗೀತ ಶಾಸ್ತ್ರೀಯ, ಸುಗಮ ಸಂಗೀತ, ಸ್ಯಾಕ್ಸೋಫೋನ್ ಜೊತೆ ಗಾನ ವೈಭವ, ಸಪ್ತ ಮಾತೃಕೆಯರ ಗೀತ ಗಾಯನ, ಪುಟಾಣಿ ಮಕ್ಕಳಿಗೆ ಸಂಗೀತ ಶಾಲೆ, ಕುಮಾರ್ ಪೆರ್ನಾಜೆಯವರ ಸ್ವರ ಸಿಂಚನ ಕಲಾ ತಂಡದ ಮುಖ್ಯ ಹಾಡುಗಾರ್ತಿಯಾಗಿ ನಾನಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸವಿತಾ ಕೋಡಂದೂರು ಇವರಿಗೆ ಪರ್ನಾಜೆ ಪ್ರಶಸ್ತಿ, ಗಡಿನಾಡ ಧ್ವನಿ, ಸುಮಸೌರಭ ಪ್ರಶಸ್ತಿ ಕರಾವಳಿ ರತ್ನ ಸಹಿತ ಹಲವಾರು ಪ್ರಶಸ್ತಿ ಲಭಿಸಿವೆ.
ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮಾರ ಶಿಷ್ಯ, ನೂಜಯ ವೇ ಮೂ ಕೇಶವ ಭಟ್ ಮತ್ತು ದೇವಕಿ ದಂಪತಿಗಳ ಪುತ್ರಿ. ಪತಿ ‘ವಿಟ್ಲ ಸುಪ್ರಜಿತ್: ಐ ಟಿ ಐ. ಕಾಲೇಜು ಮಾಜಿ ಪ್ರಾಂಶುಪಾಲರು ಕೋಡಂದೂರು ರಘುರಾಮ್ ಶಾಸ್ತ್ರೀ. ತನ್ನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.