ಡಾ. ಕೃಷ್ಣಮೂರ್ತಿ ಅನುಮಾನಾಸ್ಪದ ಸಾವಿನ ಪ್ರಕರಣದ ಸಮಗ್ರ ತನಿಖೆಗೆ ಮುಸ್ಲಿಂ ಯೂತ್ ಕೌನ್ಸಿಲ್ ಒತ್ತಾಯ

0

ಪುತ್ತೂರು: ಪುತ್ತೂರು ಮೂಲದ ವೈದ್ಯರಾದ ಡಾ. ಕೃಷ್ಣಮೂರ್ತಿ ಸರ್ಪಂಗಳರವರ ಅನುಮಾನಾಸ್ಪದ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಪುತ್ತೂರು ತಾಲೂಕು ಮುಸ್ಲಿಂ ಯೂತ್ ಕೌನ್ಸಿಲ್ ಆಗ್ರಹಿಸಿದೆ.


ಪುತ್ತೂರಿನಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಜನಪ್ರಿಯ ವೈದ್ಯರಿಬ್ಬರ ಸಹೋದರರಾದ ಡಾ. ಕೃಷ್ಣಮೂರ್ತಿಯವರು ಕರ್ನಾಟಕ-ಕೇರಳ ಗಡಿನಾಡು ಪ್ರದೇಶವಾದ ಬದಿಯಡ್ಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಅವರ ಮೃತದೇಹ ಕುಂದಾಪುರ ಬಳಿ ರೈಲ್ವೆ ಹಳಿ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಇವರ ಸಾವಿನ ಕುರಿತು ಹಲವಾರು ಸಂಶಯಗಳನ್ನು ಅವರ ಕುಟುಂಬಸ್ಥರು ಹೊರ ಹಾಕುತ್ತಿದ್ದಾರೆ. ಈ ಪ್ರಕರಣ ಕರ್ನಾಟಕ -ಕೇರಳ ಪ್ರದೇಶಕ್ಕೆ ಒಳಪಟ್ಟ ಪ್ರಕರಣವಾದುದರಿಂದ ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಪುತ್ತೂರು ತಾಲೂಕು ಮುಸ್ಲಿಂ ಯೂತ್ ಕೌನ್ಸಿಲ್ ಅಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರು ಪುತ್ತೂರು ಸಹಾಯಕ ಆಯುಕ್ತರ ಕಛೇರಿ ಮೂಲಕ‌ ಸರಕಾರಕ್ಕೆ‌ ಮನವಿ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here