ಪುತ್ತೂರಿನಲ್ಲಿ ಆರಂಫ್ಲೆ ಇಂಟರ್‌ನ್ಯಾಷನಲ್ ಶುಭಾರಂಭ

0

ಪುತ್ತೂರು : ವೀಸಾ, ಅಸಿಸ್ಟೆನ್ಸ್, ಎಮಿಗ್ರೇಷನ್, ವೀಸಾ ಸ್ಟೇಂಪಿಂಗ್, ವಿಸಿಟ್ ವೀಸಾ, ಏರ್ ಟಿಕೆಟ್ಸ್ ಹಾಗೂ ಹಜ್, ಉಮ್ರಾ ಸಹಿತ ವಿವಿಧ ಸೌಲಭ್ಯಗಳನ್ನು ಒದಗಿಸುವ ಜಿಲ್ಲೆಯಲ್ಲೇ ಪ್ರಥಮ ಎಂಬಂತೆ ಬೊಳುವಾರಿನಲ್ಲಿರುವ ಇನ್‌ಲ್ಯಾಂಡ್ ಮಯೂರ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಿಸಿರುವ ಆರಂಫ್ಲೆ ಟ್ರಾವೆಲ್ಸ್ ಸಂಸ್ಥೆ ಶುಭಾರಂಭಗೊಂಡಿತು.

ದುಬೈ ಕೆಎಂಸಿಯ ಮಾಜಿ ಅಧ್ಯಕ್ಷ ಸೈಯದ್ ತ್ವಾಹ ಅಲ್ ಮಶ್ಹೂರ್ ತಂಙಳ್ ದುವಾಶೀರ್ವಚನ ನೀಡಿ ಮಾತನಾಡಿ ದೊಡ್ಡ ದೊಡ್ಡ ಜಿಲ್ಲೆಗಳಲ್ಲಿ ಸಿಗುವ ಇಂತಹ ಸೌಲಭ್ಯಗಳು ಪುತ್ತೂರಿನಲ್ಲಿಯೂ ಜನಸಾಮಾನ್ಯರಿಗೆ ಒದಗಿಸಬೇಕೆಂಬ ನಿಟ್ಟಿನಲ್ಲಿ ಇಲ್ಲಿ ನೂತನ ಸಂಸ್ಥೆಯನ್ನು ಆರಂಭಿಸಿರುವುದು ಶ್ಲಾಘನೀಯವಾಗಿದೆ. ಎಲ್ಲರ ಸಹಕಾರದಿಂದ ಈ ಸಂಸ್ಥೆ ಉತ್ತರೋತ್ತರ ಬೆಳಗಲಿ ಎಂದು ಹೇಳಿದರು.

ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಮಾತನಾಡಿ ಅಂತರಾಷ್ಟ್ರೀಯ ಮಟ್ಟದ ವ್ಯವಸ್ಥೆಗಳು ನಮ್ಮನ್ನು ತೊಡಗಿಸಿಕೊಳ್ಳುವಂತೆ ಹಾಗೂ ವಿದೇಶ ಪ್ರವಾಸ ಯಾವ ರೀತಿಯಲ್ಲಿ ನಾವು ಕೈಗೊಳ್ಳಬಹುದು ಎಂಬ ಬಗ್ಗೆ ಮಂಗಳೂರಿಗಿಂತಲೂ ಒಳ್ಳೆಯ ಒಂದು ಸಂಸ್ಥೆಯನ್ನು ಪುತ್ತೂರಲ್ಲಿ ಆರಂಭಿಸಿ ಆ ಮೂಲಕ ಜನಸೇವೆ ಆರಂಭಿಸಲು ಮುಂದೆ ಬಂದಿರುವುದು ಶ್ಲಾಘನೀಯವಾಗಿದ್ದು ಬೆಳೆಯುತ್ತಿರುವ ಪುತ್ತೂರಿಗೆ ಒಂದು ಉತ್ತಮ ಸಂಸ್ಥೆಯಾಗಿ ಮೂಡಿಬರಲಿ ಎಂದು ಹೇಳಿದರು.

ರಾಜ್ಯ ಧಾರ್ಮಿಕ ಅಸೋಸಿಯೇಶನ್ ಅಧ್ಯಕ್ಷ ಎಸ್.ಬಿ.ಮಹಮ್ಮದ್ ದಾರಿಮಿ ಮಾತನಾಡಿ ಯಾವುದೇ ಉದ್ಯಮವಾಗಲಿ ನಾವು ಅದನ್ನು ಪ್ರೀತಿಸಬೇಕು. ಆ ಮೂಲಕ ನಾವು ಯಶಸ್ಸು ಗಳಿಸಲು ಸಾಧ್ಯವಿದೆ. ನಗುಮೊಖದ ಸೇವೆಯೇ ನಮ್ಮ ಧ್ಯೇಯವಾಗಲಿ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಮಾತನಾಡಿ ಶುಭಹಾರೈಸಿದರು.

ವೇದಿಕೆಯಲ್ಲಿ ಕಟ್ಟಡ ಮಾಲಕ ರಾಮ ರತನ್ ನಾಕ್, ನವೀನ್ ಶೆಟ್ಟಿ, ಅರಮ್ ಪ್ಲೇ ಸಂಸ್ಥೆಯ ಪಾಲುದಾರರಾದ ಅರಾಫತ್ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಮುಸ್ಲಿಂ ಅನ್ಸಾರುದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್‌ಟಿ ಅಬ್ದುಲ್ ರಝಾಕ್ ಹಾಜಿ, ಸಿಟಿ ಟೂರ್‍ಸ್ ಟ್ರಾವೆಲ್ಸ್ ಮಾಲಕ ಬಿಎ ಶಕೂರ್ ಹಾಜಿ ಕಲ್ಲೇಗ, ರಾಜ್ಯ ಎನ್‌ಎಸ್‌ಯುಐ ಉಪಾಧ್ಯಕ್ಷ ಫಾರೂಕ್ ಬಾಯಬೆ, ಅಬ್ದುಲ್ ರಹಿಮಾನ್ ನೇರೋಳ್ತಡ್ಕ, ಅಝೀರಸಖಾಫಿ ಪುತ್ತೂರು, ಶೇಖ್ ಇಸಾಖ್ ನೆಲ್ಲಿಕಟ್ಟೆ, ಯೂಸುಫ್ ಹಾಜಿ ಸಾಲ್ಮರ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮೊದಲಾದವರು ಆಗಮಿಸಿದ್ದರು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಉವೈಸ್ ಅಲ್ ಅದನಿ ಸ್ವಾಗತಿಸಿದರು. ಹನೀಫ್ ಪುಣ್ಚತ್ತಾರು ವಂದಿಸಿದರು. ಸತ್ತಾರ್ ಸಖಾಫಿ, ಇಲ್ಯಾಸ್, ಗುತ್ತಿಗೆದಾರ ಜುನೈದ್, ಹನೀಫ್ ತಾಜ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here