ನೆಲ್ಯಾಡಿ: ಇಂಡಿಕ್ಯಾಶ್ ಎಟಿಎಂ ಶುಭಾರಂಭ

ನೆಲ್ಯಾಡಿ: ಟಾಟಾ ಕಮ್ಯುನಿಕೇಶನ್ಸ್ ಪೇಮೆಂಟ್ ಸೊಲ್ಯುಷನ್ಸ್‌ರವರ ಇಂಡಿಕ್ಯಾಶ್ ಎಟಿಎಂ ನೆಲ್ಯಾಡಿ ಕೆನರಾ ಬ್ಯಾಂಕ್ ಹಾಗೂ ಅಂಚೆ ಕಚೇರಿ ಸಮೀಪ, ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಮುಂಭಾಗದಲ್ಲಿರುವ ಲಕ್ಷ್ಮೀಕೃಪಾ ಬಿಲ್ಡಿಂಗ್‌ನಲ್ಲಿ ನ.21ರಂದು ಶುಭಾರಂಭಗೊಂಡಿತು.

ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ ಅವರು ದೀಪ ಬೆಳಗಿಸಿದರು. ಬಳಿಕ ಮಾತನಾಡಿದ ಅವರು ಮಂಗಳೂರು ಹಾಗೂ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿ ಪೇಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇಲ್ಲಿಗೆ ಬರುವ ಹೊಸ ಉದ್ದಿಮೆ, ಅಂಗಡಿಗಳು ನೆಲ್ಯಾಡಿಯ ಬೆಳವಣಿಗೆಗೆ ಪೂರಕವಾಗಿದೆ. ಈಗ ಟಾಟಾ ಸಂಸ್ಥೆಯವರ ಇಂಡಿಕ್ಯಾಶ್ ಎಟಿಎಂ ನೆಲ್ಯಾಡಿಯಲ್ಲಿ ಹೆದ್ದಾರಿಗೆ ಸಮೀಪದಲ್ಲೇ ಆರಂಭಗೊಂಡಿರುವುದು ಊರಿನ ಹಾಗೂ ಪರವೂರಿನ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಇದು ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ ಎಂದರು.

ರಿಬ್ಬನ್ ಕತ್ತರಿಸಿ ಎಟಿಎಂ ಕೇಂದ್ರ ಉದ್ಘಾಟಿಸಿದ ನೆಲ್ಯಾಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮಂಜುಳ ಎನ್.,ರವರು ಮಾತನಾಡಿ, ತ್ವರಿತವಾಗಿ ಹಣ ಹಿಂಪಡೆಯಲು ಜನರಿಗೆ ಎಟಿಎಂನ ಅವಶ್ಯಕತೆ ಇದೆ. ನೆಲ್ಯಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಇಂಡಿಕ್ಯಾಶ್ ಎಟಿಎಂ ಆರಂಭಗೊಂಡಿರುವುದು ಊರಿನ ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಎಟಿಎಂನಲ್ಲಿ ತ್ವರಿತ ಸೇವೆ ಸಿಗುವುದರಿಂದ ಜನರ ಸಮಯವೂ ಉಳಿತಾಯ ಆಗಲಿದೆ. ಜನರು ಇಂಡಿಕ್ಯಾಶ್ ಎಟಿಎಂ ಬಳಕೆ ಮಾಡುವಂತೆ ಹೇಳಿದರು.

ಅತಿಥಿಯಾಗಿದ್ದ ಕಟ್ಟಡ ಮಾಲಕ ವಿಶ್ವನಾಥ ಗೌಡ ಪೂವಾಜೆ ಮಾತನಾಡಿ, ಇಂಡಿಕ್ಯಾಶ್ ಎಟಿಎಂ ಜನರಿಗೆ ತ್ವರಿತ ಸೇವೆ ನೀಡುವ ಮೂಲಕ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿದರು. ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಕಾಂತಪ್ಪ ಗೌಡ ಪೂವಾಜೆ, ಉದ್ಯಮಿ ಚರಣ್ ಪೂವಾಜೆ, ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷ ಶಿವಪ್ರಸಾದ್, ಜೀಸಸ್ ಟಯರ್‍ಸ್‌ನ ಜೇಮ್ಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಂಡಿಕ್ಯಾಶ್ ಎಟಿಎಂನ ಹರಿಕೃಷ್ಣರವರು ಮಾತನಾಡಿ, ನೆಲ್ಯಾಡಿಯಲ್ಲಿ ಇಂಡಿಕ್ಯಾಶ್ ಎಟಿಎಂ ಆರಂಭಕ್ಕೆ ಮೂರು ತಿಂಗಳು ಮೊದಲು ಕಂಪನಿ ಕಡೆಯಿಂದ ಗೋಳಿತ್ತೊಟ್ಟಿನಿಂದ ಶಿರಾಡಿ ತನಕ ಸರ್ವೆ ನಡೆಸಲಾಗಿದೆ. ಈ ಭಾಗದಲ್ಲಿ ಎಟಿಎಂಗಳಿದ್ದರೂ ಸರಿಯಾಗಿ ವರ್ಕ್ ಆಗುತ್ತಿಲ್ಲ. ಕೆಲವೊಂದು ಕಡೆಗಳಲ್ಲಿ ಎಟಿಎಂ ಓಪನ್ ಇದ್ದರೂ ಹಣ ಇರುವುದಿಲ್ಲ ಎಂಬ ಬೋರ್ಡ್ ಇರುತ್ತದೆ. ಇದನ್ನೆಲ್ಲಾ ಗಮನಿಸಿ ನೆಲ್ಯಾಡಿ ಪೇಟೆಯಲ್ಲಿ ಹೆಸರಾಂತ ಟಾಟಾ ಸಂಸ್ಥೆಯವರ ಇಂಡಿಕ್ಯಾಶ್ ಎಟಿಎಂ ಕೇಂದ್ರ ತೆರೆಯಲಾಗಿದೆ. ಇಂಡಿಕ್ಯಾಶ್ ಎಟಿಎಂನಲ್ಲಿ ಯಾವುದೇ ಬ್ಯಾಂಕ್‌ನ ಎಟಿಎಂ ಕಾರ್ಡ್ ಬಳಸಿ ಹಣ ಪಡೆಯಬಹುದಾಗಿದೆ. ಇದಕ್ಕೆ ಯಾವುದೇ ಯೂಸೇಜ್ ಶುಲ್ಕ ಇರುವುದಿಲ್ಲ. ಇದು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅಧಿಕೃತಗೊಂಡಿದೆ ಎಂದು ಹೇಳಿದ ಅವರು ಗ್ರಾಹಕರ ಸಹಕಾರ ಕೋರಿದರು. ಗಣೇಶ್ ನೀರ್ಪಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.