ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ ಸಹಯೋಗದಲ್ಲಿ ಮುಂಡೂರು ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ಸಂಘ ಸಂಸ್ಥೆಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ-ರಮೇಶ್ ಗೌಡ ಪಜಿಮಣ್ಣು

ಪುತ್ತೂರು: ಸಂಘಟನೆಯೊಂದು ಸಕ್ರಿಯವಾಗಿ ಸಮಾಜದಲ್ಲಿ ತೊಡಗಿಸಿಕೊಳ್ಳುವುದರಿಂದ ಯಾವುದೇ ಕಾರ್ಯಯವನ್ನೂ ಯಶಸ್ವಿಯಾಗಿ ಮಾಡಬಹುದು ಎಂಬುವುದನ್ನು ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ ಸಾಬೀತುಪಡಿಸಿದೆ ಎಂದು ಮುಂಡೂರು ಸ.ಉ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಹೇಳಿದರು. ರೋಟರಾಕ್ಟ್ ಕ್ಲಬ್ ಪುತ್ತೂರು ಇದರ ಸಹಯೋಗದೊಂದಿಗೆ ಮುಂಡೂರು ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘ ಸಂಸ್ಥೆಗಳು ಸಮಾಜದ ಹಿತದೃಷ್ಟಿಯಲ್ಲಿ ಕಾರ್ಯನಿರ್ವಹಿಸಿದಾಗ ಸಮಾಜದಲ್ಲಿ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಪುತ್ತೂರು ರೋಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ವಿನೂತನ ವಿನೋದ ಆಟಗಳನ್ನು ಆಡಿಸುವುದರೊಂದಿಗೆ ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.


ರೋಟರಾಕ್ಟ್ ಕ್ಲಬ್‌ನ ಅಂತರಾಷ್ಟ್ರೀಯ ಸಂಯೋಜಕರಾದ ನವೀನ್ ಹಾಗೂ ಪದಾಧಿಕಾರಿಗಳು ಶಿಕ್ಷಕರೊಂದಿಗೆ ಸೇರಿ ಎಲ್‌ಕೆಜಿ ಯುಕೆಜಿ ಸೇರಿದಂತೆ ಒಂದರಿಂದ ಎಂಟನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ತರಗತಿವಾರು ವಿವಿಧ ವಿನೋದ ಆಟಗಳನ್ನು ಆಡಿಸಿದರು. ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಆಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಅಪರಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ
ಪುತ್ತೂರು ರೋಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಗಣೇಶ್ ಎನ್ ಕಲ್ಲರ್ಪೆ ಹಾಗೂ ಪದಾಧಿಕಾರಿಗಳು ಸಮಯೋಚಿತವಾಗಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಮುಂಡೂರು ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಕ್ಲಬ್ಬಿನ ವತಿಯಿಂದ ವಿತರಿಸಲಾಯಿತು.
ಶಾಲಾ ಗ್ರಂಥಾಲಯಕ್ಕೆ ಕಥಾ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ವಿಜಯಾ ಪಿ ಸ್ವಾಗತಿಸಿ ಕ್ಲಬ್‌ನ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿದರು. ಶಿಕ್ಷಕ ಅಬ್ದುಲ್ ಬಶೀರ್ ಕೆ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ರೋಟರ್‍ಯಾಕ್ಟ್ ಕ್ಲಬ್‌ನ ಕಾರ್ಯದರ್ಶಿ ಮೋಹನ್ ಚಂದ್ರ ವಂದಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here