ತಾ|ಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ವಿಕ್ಟರ್ ಪ್ರೌಢಶಾಲೆಯ ಮೂವರಿಗೆ ಪ್ರಶಸ್ತಿ

0

ಪುತ್ತೂರು: ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ನಡೆದ ತಾಲೂಕು ಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಕು|ಅನನ್ಯ ಜೆ ಶೆಟ್ಟಿ(ಜಯರಾಮ ಶೆಟ್ಟಿ ಎನ್ ಹಾಗೂ ಶ್ರೀಮತಿ ಗುಣಶೀಲರವರ ಪುತ್ರಿ), ಕು|ನಿಶ್ಮಾ ರೈ(ತಾರನಾಥ ರೈ ಎಂ ಹಾಗೂ ನಯನ ಟಿ. ರೈರವರ ಪುತ್ರಿ) ಇವರಿಗೆ ತೃತೀಯ ಸ್ಥಾನ ಲಭಿಸಿದೆ.

ಕು|ಅಪೂರ್ವ(ವಸಂತ ಸಾಲ್ವಂಕರ್ ಹಾಗೂ ಅರುಣಾ ಪಿ ಕೆ ರವರ ಪುತ್ರಿ) ಇವರಿಗೆ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕಿ ಶ್ರೀಮತಿ ರೋಸಲಿನ್ ಲೋಬೊರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here