ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸತ್ಯನಾರಾಯಣ ಪೂಜೆ: ಕ್ರೀಡಾ ಲಾಂಛನ, ವಿವಾಹ ವೇದಿಕೆ ಲಾಂಛನ, ಒಕ್ಕೊರಲು ೨ನೇ ಆವೃತ್ತಿ ಬಿಡುಗಡೆ, ಸನ್ಮಾನ

0
  • ಅಜೇಂಡಾವನ್ನು ಗುರುತಿಸಿಕೊಂಡು ಸೇವೆ ಮಾಡಿದಾಗ ಜೀವನ ಸಾರ್ಥಕ್ಯ -ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಪುತ್ತೂರು: ಜೀವನದ ಪ್ರತಿಯೊಂದು ಹಂತದಲ್ಲೂ ಸಂಸಾರ, ಸಮಾಜ ಸೇವೆ, ಕೃಷಿ, ದೇವಸ್ಥಾನಕ್ಕೆಂದು ಒಂದಿಷ್ಟು ಸಮಯದ ಅಜೇಂಡಾವನ್ನು ಗುರುತಿಸಿಕೊಂಡು ತನ್ಮೂಲಕ ಸೇವೆ ಮಾಡಿದಾಗ ಮನುಷ್ಯನ ಜೀವನ ಸಾರ್ಥಕ್ಯವಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಹೇಳಿದರು.



ಸಮುದಾಯದ ಸಂಘಟನೆ ಸೌಹಾರ್ದಕ್ಕಾಗಿ ಎಂಬ ಗುರಿಯಿಟ್ಟುಕೊಂಡು ಎಲ್ಲಾ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ನ.೨೭ರಂದು ತೆಂಕಿಲ ಒಕ್ಕಲಿಗನಗರದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ವಾರ್ಷಿಕ ಸಮಾವೇಶ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಅವರು ಅಶೀರ್ವಚನ ನೀಡಿದರು. ಉಸಿರು ಹೋದರು ಹೆಸರು ಉಳಿಸುವ ಕಾರ್ಯ ಮನುಷ್ಯನ ಜೀವದಲ್ಲಿ ಆದಾಗ ಬದುಕು ಸಾರ್ಥಕವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಮಾಜದೊಳಗೆ ಸಮಾಜಮುಖಯಾಗಿರುವ ಕಾರ್ಯಕ್ರಮದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಗುರಿ ಇರಬೇಕು. ಗುರಿಯ ಹಿಂದೆ ಗುರುವಿರಬೇಕು. ಗುರು ಮತ್ತು ಗುರಿ ಇದ್ದಾಗ ಜೀವನದ ಗುರಿಯನ್ನು ಮುಟ್ಟಲು ಸಾಧ್ಯ. ಅವಕಾಶನ್ನು ಸಾವಕಾಶವನ್ನಾಗಿ ಉಪಯೋಗಿಸಿ ಕೊಂಡು ಸಮುದಾಯದಲ್ಲಿ ಉತ್ತಮ ಸೇವಾ ಕಾರ್ಯ ಮಾಡುವಂತೆ ಸಂದೇಶ ನೀಡಿದರು.

ಜ.28ಕ್ಕೆ ಗುರುಗಳ ಜಯಂತ್ಯೋತ್ಸವ:
ಬ್ರಹ್ಮಕ್ಯರಾಗಿರುವ ಡಾ| ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೮ನೇ ಜಿಲ್ಲಾ ಮಟ್ಟದ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಜ.೨೮ಕ್ಕೆ ವಿಜೃಂಭಣೆಯಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಗುರುಗಳ ಬೃಹತ್ ಗ್ರಂಥವನ್ನು ಅನಾವರಣ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಬೃಹತ್ ಸಂಖ್ಯೆಯಲ್ಲಿ ಎಲ್ಲರು ಪಾಲ್ಗೊಳ್ಳುವಂತೆ ಡಾ| ಶ್ರೀ ಧರ್ಮಪಾಲನಾಥ ಶ್ರೀಗಳು ವಿನಂತಿಸಿದರು.


ಸಂಘಟನೆ ಸದೃಢಗೊಳ್ಳಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ ಅವರು ಮಾತನಾಡಿ ಜನಸಂಖ್ಯೆಗೆ ಪೂರಕವಾಗಿ ನಮ್ಮ ಸಂಘಟನೆ ಏನು ಸಾಲದು. ಅನೇಕ ಬಾರಿ ಸಮಾಜದಿಂದ ನಮಗೆ ಲಾಭ ಏನಿದೆ ಎಂದು ನನ್ನಲ್ಲಿ ಕೇಳಿದವರಿದ್ದಾರೆ. ಸೊಸೈಟಿ ಮಾಡಲು ಹೊರಟಾಗ ಹಣ ಮಾಡುವ ಉದ್ದೇಶ ಎಂದು ಹೇಳಿದವರಿದ್ದಾರೆ. ಆದರೆ ಅಪಸ್ವರ ನುಡಿದವರು ಇವತ್ತು ಸಂಘ, ಸಂಘಟನೆಯ ಮಹತ್ವ ಅರಿಯಬೇಕಾಗಿದೆ. ನಮ್ಮಲ್ಲಿ ಸಂಘದ ಕೆಲಸಗಳಿಗೆ ಮಾಡಲು ತೊಂದರೆ ಇಲ್ಲ. ಆದರೆ ಮಾಡುವ ಕಾರ್ಯಕರ್ತರಿಗೆ ನೋವು ಮಾಡಬೇಡಿ ಎಂದ ಅವರು ಸಮಾಜದ ಅನೇಕ ಮಕ್ಕಳಿಗೆ ಮಾಡಿದಂತಹ ಈ ಸಂಸ್ಥೆಯಲ್ಲಿ ಸಮಾಜದಲ್ಲಿ ನಮ್ಮ ಸಂಘಟನೆ ಸದೃಢಗೊಳಿಸಬೇಕೆಂದರು.

ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.


ಶ್ರೀಗಳಿಗೆ ಗೌಡ ಸಂಘದಿಂದ ಗೌರವ
ಹಲವಾರು ಯೋಜನೆಗಳಿಗೆ ಮಾರ್ಗದರ್ಶಕರಾಗಿದ್ದು, ಕೆಂಪೇಗೌಡ, ಕೆದಂಬಡಿ ರಾಮಯ್ಯ ಗೌಡ ಪ್ರತಿಮೆ ಅನಾವರಣಕ್ಕೆ ಮೂಲ ಕಾರಣಕರ್ತರಾಗಿರುವ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀಗಳಾಗಿದ್ದು ಕೊಂಡು ಹಿರಿಯ ಸ್ವಾಮೀಜಿಯವರ ಕುರಿತು ಮೇರು ಗ್ರಂಥ ಬರೆದು ಡಾಕ್ಟರೇಟ್ ಪದವಿ ಪಡೆದ ಸಂತ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರನ್ನು ಒಕ್ಕಲಿಗ ಗೌಡ ಸಂಘದಿಂದ ಗೌರವಿಸಲಾಯಿತು. ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಚಂದ್ರಶೇಖರ ಮುಂಗ್ಲಿಮನೆ, ಗಂಗಾಧರ ಗೌಡ ಕೆಮ್ಮಾರ, ಹೆಚ್.ಡಿ.ಶಿವರಾಮ್ ಸಹಿತ ಸಂಘದ ಹಾಲಿ ಅಧ್ಯಕ್ಷರು, ಪದಾಧಿಕಾರಿಗಳು ಶ್ರೀಗಳಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿದರು.

ಸಾಧಕಿಗೆ ಗೌರವ ಸನ್ಮಾನ:
ಒಂದು ಗಂಟೆ ೨೨ ಸೆಕೆಂಡ್‌ನಲ್ಲಿ ಗರಿಷ್ಠ ಸಮಯದಲ್ಲಿ ನಾನ್ ಸ್ಟಾಪ್ ೬೯ಬಾರಿ ರಾಷ್ಟ್ರಗೀತೆಯನ್ನು ಹಾಡಿ ಇಂಡಿಯ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಕುದ್ಮಾರು ಗ್ರಾಮದ ಬರೆಪ್ಪಾಡಿ ಚಂದ್ರಶೇಖರ ಗೌಡ ಹಾಗೂ ಜ್ಞಾನೇಶ್ವರಿ ದಂಪತಿಯ ಪುತ್ರಿ ರಾಶಿ ಕೆ.ಎಸ್ ಅವರನ್ನು ಶ್ರೀಗಳು ಸನ್ಮಾನಿಸಿದರು. ನಗರಸಭೆ ಸದಸ್ಯೆ ಪ್ರೇಮಲತಾ ಜಿ ಅವರು ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.

ಸನ್ಮಾನ:
ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಕಿರಣ್ ಬುಡ್ಲೆಗುತ್ತು ಅವರನ್ನು ಶ್ರೀಗಳು ಗೌರವಿಸಿದರು. ಇವರ ಜೊತೆ ಸಮಿತಿಯಲ್ಲಿ ಸಹಕಾರ ನೀಡಿದ ಶಿವರಾಮ್, ಪುರುಷೋತ್ತಮ, ಮಹೇಶ್ ಅವರನ್ನು ಗೌರವಿಸಲಾಯಿತು. ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿ ಡಿ.೧೨ಕ್ಕೆ ಕಾಣಿಯೂರಿನಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ೮ನೇ ಶಾಖೆ ಉದ್ಘಾಟನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕ್ರೀಡೋತ್ಸವದ ಆಮಂತ್ರ ಪತ್ರಿಕೆ ಬಿಡುಗಡೆ:
ಡಿ.೨೫ರಂದು ಪುತ್ತೂರು ವಲಯದ ಆತಿಥ್ಯದಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಯುವ ಗೌಡ ಸಂಘದ ಕ್ರೀಡೋತ್ಸವದ ‘ಯುವ ಕ್ರೀಡಾ ಸಂಭ್ರಮ’ ಆಮಂತ್ರಣ ಪತ್ರವನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಕ್ರೀಡಾ ಕೂಟದ ಸಂಚಾಲಕ ಎ ವಿ ನಾರಾಯಣ, ಪುತ್ತೂರು ವಲಯದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಯುವ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷ ನಾಗೇಶ್ ಕೆ. ಕೆಡೆಂಜಿ, ಪ್ರಧಾನ ಕಾರ್ಯದರ್ಶಿ ಸುಬ್ರಾಯ ಗೌಡ ಪಾಲ್ತಾಡಿ, ಕ್ರೀಡಾ ಸಂಯೋಜಕ ಮಾಧವ ಗೌಡ ಪೆರಿಯತ್ತೋಡಿ, ವಲಯ ಉಸ್ತುವಾರಿ ಮಾಧವ ಗೌಡ ಕಾಂತಿಲ, ವಲಯ ಕ್ರೀಡಾ ಕಾರ್ಯದರ್ಶಿ ಮೋಹನ್ ಗೌಡ ಕಬಕ, ವಲಯ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ಗೋವರ್ಧನ ಕಲ್ಲೇಗ ಸಹಿತ ಹಲವಾರು ಮಂದಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿವಾಹ ವೇದಿಕೆ ಲಾಂಛನ ಬಿಡುಗಡೆ:
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ವತಿಯಿಂದ ಆರಂಂಭಗೊಂಡಿರುವ ಒಕ್ಕಲಿಗ ವಿವಾಹ ವೇದಿಕೆಯ ಲಾಂಛನವನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ ಅವರು ಮಾತನಾಡಿ ಈಗಾಗಲೇ ಸ್ವಸಹಾಯ ಸಂಘದಲ್ಲಿ ೮ಸಾವಿರಕ್ಕೂ ಮೇಲ್ಪಟ್ಟು ಸದಸ್ಯರಿದ್ದಾರೆ. ೪೦ ಒಕ್ಕೂಟಗಳಿವೆ. ಇಂತಹ ಸಂದರ್ಭದಲ್ಲಿ ಸ್ವಂತ ಕಟ್ಟಡವನ್ನು ಕೂಡಾ ಖರೀದಿಸಿದ್ದೇವೆ. ಅದೇ ಕಟ್ಟಡದಲ್ಲಿ ಮುಂದೆ ವಿವಾಹ ವೇದಿಕೆ ಕಾರ್ಯಚರಿಸಲಿದೆ ಎಂದು ಮಾಹಿತಿ ನೀಡಿದರು. ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಕಾರ್ಯದರ್ಶಿ ದಿವ್ಯಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.


ಒಕ್ಕೊರಲು 2ನೇ ಆವೃತ್ತಿ ಬಿಡುಗಡೆ:
ಒಕ್ಕಲಿಗ ಗೌಡ ಸಮುದಾಯದ ಸಂಸ್ಕೃತಿ ಆಚಾರ ವಿಚಾರಗಳನ್ನೊಳಗೊಂಡ ‘ಒಕ್ಕೊರಲು’ ಇದರ ೨ನೇ ಆವೃತ್ತಿಯ ಬಿಡುಗಡೆಯನ್ನು ಶ್ರೀಗಳು ನೆರವೇರಿಸಿದರು. ಸಮುದಾಯ ಆಚಾರ ವಿಚಾರಗಳನ್ನು ಯುವ ಜನತೆ ತಿಳಿಯುವ ಕಾರ್ಯ ಆಗಬೇಕೆಂದು ಶ್ರೀಗಳು ತಿಳಿಸಿದರು. ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಪ್ರಧಾನ ಕಾರ್ಯದರ್ಶಿ ವಾರಿಜ ಬೆಳ್ಯಪ್ಪ ಗೌಡ, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ. ಹೆಚ್ ಡಿ ಶಿವರಾಮ್ ಸಮಾವೇಶದ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ. ರವಿ ಮುಂಗ್ಲಿಮನೆ, ಯುವ ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ವಿನಯ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಿಶೋರ್ ಬೇರಿಕೆ ದಂಪತಿ ಸ್ವಾಮೀಜಿಯವರಿಗೆ ಫಲ ಪುಷ್ಪ ನೀಡಿ ಗೌರವಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಕಣಜಾಲು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಅತಿಥಿಗಳನ್ನು ಗೌರವಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು ವಂದಿಸಿದರು. ಕೃಪಾ ಕೆ ಪ್ರಾರ್ಥಿಸಿದರು. ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here