ವಿಟ್ಲ ಬಿಲ್ಲವ ಸಂಘದ ಬೆಳ್ಳಿಹಬ್ಬ ಸಂಭ್ರಮೋತ್ಸವ; ಇದೊಂದು ಅರ್ಪಣಾ ಮನೋಭಾವದ ಕಾರ್ಯಕ್ರಮವಾಗಿದೆ: ವಿಖ್ಯಾತಾನಂದ ಸ್ವಾಮೀಜಿ

0

  • ನಾರಾಯಣ ಗುರುಗಳ ದೀರ್ಘದರ್ಶಿತ್ವವನ್ನು ನಾವು ಮೈಗೂಡಿಸಿಕೊಳ್ಳಬೇಕು: ಶ್ರೀ ಮಹಾಬಲೇಶ್ವರ ಸ್ವಾಮೀಜಿ

  • ಒಬ್ಬರನ್ನೊಬ್ಬರು ತಿಳಿದು ಬದುಕುವ ಮನಸ್ಸು ನಮ್ಮದಾಗಬೇಕು:  ಶ್ರೀ ಶ್ರೀಕೃಷ್ಣ ಗುರೂಜಿ

  • ನಾವು ಸಿಂಹಾವಲೋಕನ ಮಾಡುವ ಜೊತೆಗೆ ಭವಿಷ್ಯದ ಚಿಂತನೆ ಮಾಡುವ ಅವಶ್ಯಕತೆ ಇದೆ:  ಡಾ. ಗೀತಾಪ್ರಕಾಶ್

  • ಬಿರುವ ಸಮುದಾಯ ಶಕ್ತಿಯುತ ನಾಯಕತ್ವ ವಿರುವ ಸಮುದಾಯ: ಡಾ. ಗಣೇಶ್ ಅಮೀನ್ ಸಂಕಮಾರ್


ವಿಟ್ಲ: ಬೆಳ್ಳಿಹಬ್ಬ ಸಂಭ್ರಮೋತ್ಸವ ಅರ್ಪಣಾ ಮನೋಭಾವದ ಕಾರ್ಯಕ್ರಮವಾಗಿದೆ. ಸಂಘಗಳು ಕೇವಲ ಅಧ್ಯಕ್ಷ ಪದಾಧಿಕಾರಿಗಳಿಗೆ ಸೀಮಿತವಲ್ಲ, ಸಮಾಜದ ಅಭ್ಯುದಯಕ್ಕಾಗಿ ಹುಟ್ಟಿಕೊಂಡದ್ದಾಗಿದೆ. ಅದನ್ನು ಸಮಾಜ ಬಾಂಧವರು ಅರ್ಥೈಸಿಕೊಂಡು ಸಹಕರಿಸಬೇಕಾಗಿದೆ. ಎಲ್ಲರೂ ನಮ್ಮವರೆಂಬ ಭಾವದಲಿ ಸಮಾಜದ ಏಳಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ಅವರು ವಿಟ್ಲ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬಿಲ್ಲವ ಸಂಘ ವಿಟ್ಲದ ಬೆಳ್ಳಿಹಬ್ಬ ಸಂಭ್ರಮೋತ್ಸವ – 2022 ಕಾರ್ಯಕ್ರಮ ಉದ್ಘಾಟನೆ ನಡೆಸಿ ಆಶೀರ್ವಚನ ನೀಡಿದರು.

ನಮ್ಮ ಸಮಾಜದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಬೆಳೆಸುವ ಕೆಲಸವಾಗಬೇಕು. ನಮ್ಮ ಪೀಳಿಗೆ ಮುಂದೆ ಹೇಗೆ ಬದುಕಬೇಕೆನ್ನುವುದನ್ನು ಹಿರಿಯರಾದ ನಾವುಗಳು ತಿಳಿಸಿಕೊಡಬೇಕು.

ನಾವು ಯಾರದೋ ಗುಲಾಮರಾಗಿ ಬದುಕುವ ಬದಲು ಸುಸಂಸ್ಕೃತವಾಗಿ ಬಾಳಿ ಬದುಕಬೇಕು. ನಾರಾಯಣ ಗುರುಗಳ ದೀರ್ಘದರ್ಶಿತ್ವವನ್ನು ನಾವು ಮೈಗೂಡಿಸಿಕೊಳ್ಳಬೇಕು. ಸಮಾಜದ ಶಾಶ್ವತ ಅಭಿವೃದ್ಧಿಯ ಬಗ್ಗೆ ಚಿಂತಿಸಿ ಅದರ ಅವಲೋಕನ ವಾಗಬೇಕು. ಆಗ ನಾವು ಸಂಘ ಕಟ್ಟಿರುವುದಕ್ಕೆ ಅರ್ಥಬರುತ್ತದೆ. ನಮ್ಮವರ ಅವನತಿ ನಮ್ಮವನರಿಂದಲೇ ಎನ್ನುವುದನ್ನು ನಾವು ಅರ್ಥೈಸಿಕೊಂಡು ಬಾಳಬೇಕಾದ ದಿನಗಳು ಬಂದಿದೆ. ವಿಟ್ಲ ಬಿಲ್ಲವ ಸಂಘದ ವತಿಯಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿ ಎಂದರು.

ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿರವರು ಆಶೀರ್ವಚನ ನೀಡಿ ಈ ಒಂದು ಬೆಳ್ಳಿಹಬ್ಬದ ಸಂದರ್ಭದಲ್ಲಿ ಸಂಘ ನಡೆದ ಬಂದ ಹಾದಿಯನ್ನು ನೆನೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಮಾಜದ ಒಳಿತಿಗಾಗಿ ಈ‌ ಸಂಘಟನೆ ಹಲವಾರು ಕೆಲಸಗಳನ್ನು‌ ಮಾಡಿದೆ. ನಾವೆಲ್ಲರೂ ಜೇನುಗೂಡಿನಂತಿರಬೇಕು. ಮಾತ್ಸರ್ಯ ರಹಿತ ಜೀವನ‌ ನಮ್ಮದಾಗಬೇಕು. ನಮ್ಮ ಸಮಾಜದ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು. ತ್ಯಾಗಮಯ ಬದುಕು ನಮ್ಮದಾಗಬೇಕು. ನಾವು ಬಹಳಷ್ಟು ಸಂತಸದ ಕ್ಷಣದಲ್ಲಿದ್ದೇವೆ. ಯುವ ಪೀಳಿಗೆ ಎಚ್ಚೆತ್ತುಕೊಳ್ಳಬೇಕಾದ ಕಾಲಘಟ್ಟವಿದು. ನಮ್ಮ ದೌರ್ಭಲ್ಯವನ್ನು ಮೆಟ್ಟಿನಿಲ್ಲವ ಮನಸ್ಸು ನಮ್ಮದಾಗಬೇಕು ಎಂದರು.

ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿರವರು ಆಶೀರ್ವಚನ ನೀಡಿ ಬೆಳ್ಳಿ ಹಬ್ಬದ ಮರೆಯಲ್ಲಿ ಹಲವಾರೂ ಸಮಾಜಮುಖಿ ಕಾರ್ಯಕ್ರಮಗಳು ನಡೆದಿದೆ. ಒಬ್ಬರನ್ನೊಬ್ಬರು ತಿಳಿದುಕೊಂಡು ಬದುಕುವ ಮನಸ್ಸು ನಮ್ಮದಾಗಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ಮು ಸತ್ಪ್ರಜೆಗಳನ್ನಾಗಿ ಮಾಡಬೇಕು. ದೇಶ ಸುಭದ್ರವಾಗಬೇಕಾದರೆ ನಮ್ಮ ಮಕ್ಕಳು ಸುಸಂಸ್ಕೃತರಾಗಬೇಕು. ಧಾರ್ಮಿಕತೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾಗಿದೆ. ಕಾರ್ಯಕ್ರಮ ಉತ್ತಮವಾಗಿ‌ ನಡೆದಿದೆ. ಬಿಲ್ಲವ ಸಂಘಟನೆ ಕೀರ್ತಿಶಾಲಿಯಾಗಿ ಬೆಳಗಲಿ ಎಂದು‌ ಶುಭಹಾರೈಸಿದರು.


ಮಂಗಳೂರು ವಿಶ್ವವಿದ್ಯಾಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಡಾ. ಗಣೇಶ್ ಅಮೀನ್ ಸಂಕಮಾರ್ ರವರು ಮಾತನಾಡಿ ತುಳುನಾಡಿನ ಜನರಿಗೆ ಸಂಘಟನೆ ಮಾಡಲು ಕಲಿಸಿಕೊಟ್ಟವರು ಬಿಲ್ಲವ ಸಮುದಾಯದವರು. ನಮ್ಮ ಹಿರಿಯರು ನಡೆದು ಬಂದ ಹಾದಿಯನ್ನು‌ ನಾವು ಗಮನಿಸಬೇಕಾಗಿದೆ. ಹಿಂದಿನ ಕಾಲದ ಕಥೆಗಳನ್ನು‌ ನಾವು ತಿಳಿದುಕೊಳ್ಳಬೇಕು. ಯುವ ಪೀಳಿಗೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. . ನಾವಿಂದು ಆತ್ಮವಿಶ್ವಾಸದಿಂದ ಮುಂದುವರೆಯಬೇಕಾಗಿದೆ. ಬಿರುವ ಸಮುದಾಯ ಶಕ್ತಿಯುತ ಸಮುದಾಯ, ನಾಯಕತ್ವ ವಿರುವ ಸಮುದಾಯ. ನಾವೆಲ್ಲರೂ ಒಟ್ಟಾದಲ್ಲಿ ಜಿಲ್ಲೆಯಲ್ಲಿ ಸಂಸ್ಕೃತಿ ಪುನರ್ನಿರ್ಮಾಣ ಮಾಡಲು ಸಾಧ್ಯ ಎಂದರು.


ಸಂಭ್ರಮೋತ್ಸವ ಸಮಿತಿ ಅಧ್ಯಕ್ಷ ಡಾ. ಗೀತಾಪ್ರಕಾಶ್ ರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ವರುಷಗಳ ಹಿಂದೆ ಆರಂಭವಾದ ಬೆಳ್ಳಿ ಹಬ್ಬದ ನಮ್ಮ ಸಂಭ್ರಮ ಇಂದಿಲ್ಲಿ ವಿಜ್ರಂಭಣೆಯಿಂದ ಸಂಪನ್ನಗೊಂಡಿದೆ. ಈ ಒಂದು ಕಾರ್ಯಕ್ರಮದ ಯಶಸ್ಸಿನ ಹಿಂದೆ ಹಲವರ ಪರಿಶ್ರಮ ವಿದೆ. ನಾವು ಸಿಂಹಾವಲೋಕನ ಮಾಡುವ ಜೊತೆಗೆ ಭವಿಷ್ಯದ ಚಿಂತನೆ ಮಾಡುವ ಅವಶ್ಯಕತೆ ಇದೆ. ಬೆಳ್ಳಿ ಹಬ್ಬದ ನಮ್ಮ ಚಿಂತನೆ ಇಂದಿಲ್ಲಿ ಸಾಕಾರಗೊಂಡಿದೆ ಎಂದು ಹೇಳಿ ಸಹಕರಿಸಿದವರನ್ನು ಸ್ಮರಿಸಿಕೊಂಡರು.

ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯದ ಉಪನ್ಯಾಸಕ ಪ್ರೊ. ಎಂ. ಎಸ್. ಕೋಟ್ಯಾನ್, ವಿಟ್ಲ ಗ್ರಾಮೀಣ ಸಹಕಾರಿ ಸಂಘ ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್, ಬಿಲ್ಲವ ಮಹಿಳಾ ಘಟಕ ವಿಟ್ಲದ ಅಧ್ಯಕ್ಷೆ ಸರಿತಾ ರೂಪರಾಜ್, ಸನ್ನಿಧ್ ಪೂಜಾರಿ, ಯುವವಾಹಿನಿ ವಿಟ್ಲ ಘಟಕದ ಅಧ್ಯಕ್ಷ ಯಶವಂತ ಪೂಜಾರಿ, ವಿಟ್ಲ ಬಿಲ್ಲವ ಸಂಘದ ಗೌರವಾಧ್ಯಕ್ಷ ಪ್ರಕಾಶ್ ವಿಟ್ಲ, ಬೆಳ್ಳಿಹಬ್ಬ ಸಂಭ್ರಮೋತ್ಸವ ಸಮಿತಿ ಗೌರವಾಧ್ಯಕ್ಷ ದಾಸಪ್ಪ ಪೂಜಾರಿ ನೆಕ್ಕಿಲಾರು,ಬಂಟ್ವಾಳದ ಉಪತಹಶೀಲ್ದಾರ್ ನವೀನ್ ಬೆಂಜನಪದವು, ಬಿಲ್ಲವ ಮಹಿಳಾ ಘಟಕ ಗೌರವಾಧ್ಯಕ್ಷೆ ಸುಜಾತ ಸಂಜೀವ ಪೂಜಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೊರಗಪ್ಪ ಪೂಜಾರಿ ಬಾಳೆಕಲ್ಲು, ಏಕಲವ್ಯ ಪ್ರಶಸ್ತಿ ಪುರಸ್ಕೃತ ನಿತಿನ್ ಪೂಜಾರಿ, ಕುಶಿ ಸಾಲ್ಯಾನ್, ಚಂದ್ರಶೇಖರ ಬನಾರಿ, ಸುಧಾಕರ ಪೂಜಾರಿ ಕೇಪು, ಸನ್ನಿಧ್ ಪೂಜಾರಿ, ತೇಜಸ್ ಎಂ. ಎಸ್., ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರು ದೇಜಪ್ಪ ಪೂಜಾರಿ ನಿಡ್ಯರವರನ್ನು ಸನ್ಮಾನಿಸಲಾಯಿತು. ವಿಟ್ಲ ಬಿಲ್ಲವ ಸಂಘದ ಪೂರ್ವಾಧ್ಯಕ್ಷರನ್ನು ಗೌರವಿಸಲಾಯಿತು.

 

ಈ ಸಂದರ್ಭದಲ್ಲಿ ‘ಇಟ್ಟೆಲ್ದ ರಜತ ಬೈದ್ಯ ಸಂಪದ’ ಸ್ಮರಣ ಸಂಚಿಕೆಯನ್ನು ಬಂಟ್ವಾಳದ ಉಪತಹಶೀಲ್ದಾರ್ ನವೀನ್ ಬೆಂಜಪದವು ಬಿಡುಗಡೆ ಮಾಡಿದರು.

ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ವಿಟ್ಲ ಸಂಜೀವ ಪೂಜಾರಿ ನಿಡ್ಯರವರು ಪ್ರಾಸ್ತಾವಿಕವಾಗಿ ಮಾತನಾಡಿ ವಿಟ್ಲ ಬಿಲ್ಲವ ಸಂಘ ನಡೆದು ಬಂದ ಹಾದಿಯನ್ನು ವಿವರಿಸಿದರು.


ಬೆಳ್ಳಿಹಬ್ಬ ಸಂಭ್ರಮೋತ್ಸವ ಸಮಿತಿ ಕಾರ್ಯದರ್ಶಿ ರಾಜೇಶ್ ವಿಟ್ಲರವರು ಮಾತನಾಡಿ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡಿದರು.ಬೆಳ್ಳಿಹಬ್ಬದ ಪ್ರಯುಕ್ತ ಆಯೋಜನೆ ಮಾಡಿದ ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ವಿಟ್ಲ ಬಿಲ್ಲವ ಸಂಘ ಅಧ್ಯಕ್ಷ ಹರೀಶ್ ಸಿ. ಎಚ್. ಸ್ವಾಗತಿಸಿದರು. ವಿಟ್ಲ ಬಿಲ್ಲವ ಸಂಘ ಕಾರ್ಯದರ್ಶಿ ಸಂಜೀವ ಎಂ. ವಂದಿಸಿದರು. ರೇಣುಕಾ ಕಣಿಯೂರು ಹಾಗೂ ಹರೀಶ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here