ಪುತ್ತೂರು: ಕೆಯ್ಯೂರು ಗ್ರಾಮದ ಎರಬೈಲು ಶ್ರೀ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಧರ್ಮದೈವ, ಏಳ್ನಾಡು ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ನ. 27ರಂದು ಆರಂಭಗೊಂಡಿದೆ.
ನ. 27ರಂದು ಬೆಳಿಗ್ಗೆ ನಾಗತಂಬಿಲ, ಗಣಹೋಮ ಮತ್ತು ಹರಿಸೇವೆ ನಡೆಯಿತು. ಸಂಜೆ ಸೊರಕೆ ತಲಮನೆಯಿಂದ ಏಳ್ನಾಡು ದೈವದ ಭಂಡಾರ ಆಗಮಿಸಿ ದೈರ್ಮದೈವ ಮತ್ತು ಪರಿವಾರ ದೈವಗಳ ಚಾವಡಿಯಿಮದ ಭಂಡಾರ ತೆಗೆದ ನಂತರ ಏಳ್ನಾಡು ದೈವದ ನೇಮ, ವರ್ಣಾರ ಪಂಜುರ್ಲಿ ಮತ್ತು ಸತ್ಯಜಾವತೆ ದೈವಗಳ ನೇಮ ನಡೆಯಿತು. ಭಜನೆ ಹಾಗೂ ಅನ್ನಸಂತರ್ಪಣೆ ನೆರವೇರಿತು.
ನ. 28ರಂದು ಬೆಳಿಗ್ಗೆ ಕುಪ್ಪೆ ಪಂಜುರ್ಲಿ, ಜಾವತೆ ದೈವಗಳ ನೇಮ, ಧರ್ಮದೈವದ ನೇಮ ನಡೆದು ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಎರಕ್ಕಲ ದೈವಸ್ಥಾನದಿಂದ ಗ್ರಾಮದ ಬೊಟ್ಟಿ ದೈವದ ಭಂಡಾರ ತಂದು, ಕಲ್ಕುಡ ಕಲ್ಲುರ್ಟಿ, ಒಂಟಿ ಕಲ್ಲುರ್ಟಿ ಹಾಗೂ ಪರಿವಾರ ದೈವಗಳ ಚಾವಡಿಯಿಂದ ಭಂಡಾರ ತೆಗೆದು ನೇಮ ನಡೆಯಲಿದೆ. ನಂತರ ಅನ್ನಸಂತರ್ಪಣೆ ನೆರವೇರಲಿದೆ.
ನ. 29ರಂದು ಬೆಳಿಗ್ಗೆ ಗುಳಿಗ ಪಂಜುರ್ಲಿ ದೈವಗಳ ನೇಮ ಮತ್ತು ಪ್ರಸಾದ ವಿತರಣೆ ನಡೆದು, ಅನ್ನಸಂತರ್ಪಣೆ ಜರುಗಲಿದೆ.
ಸನ್ಮಾನ ಸಮಾರಂಭ
ಕುಟುಂಬದ ಯಜಮಾನ ಮುತ್ತಪ್ಪ ಗೌಡ ಸಾರಕೂಟೇಲು, ದೈವಸ್ಥಾನದ ಪುನರ್‌ನವೀಕರಣದಲ್ಲಿ ಮುತುವರ್ಜಿ ವಹಿಸಿದ ಶುಭಪ್ರಕಾಶ್ ಎರೆಬೈಲು, ಡಾಕ್ಟರೇಟ್ ಪಡೆದ ಡಾ. ಹಸ್ತಾ ಕೊಯಿಂಗುಳಿ, ಕ್ರೀಡಾಪಟು ಕು. ಶ್ವೇತಾರವರನ್ನು ನ. 27 ರಂದು ಎರಬೈಲು ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜರ್ನಾರ್ದನ ಕೊಯಿಂಗುಳಿ, ಸುರೇಶ ಬೆಳ್ತಂಗಡಿ, ರಾಧಾಕೃಷ್ಣ ಎರೆಬೈಲು, ನಾರಾಯಣ ಬೆದ್ರಾಳ, ಶಿವಪ್ಪ ಗೌಡ ನೆಕ್ಕರೆಕಜೆ, ಗಂಗಾಧರ ಕೊಯಿಂಗುಳಿ, ವಿಶ್ವನಾಥ ಪೂವ ಸರ್ವೆ, ಸಂಜೀವ ಗೌಡ ಕಾವು, ಶ್ರೀಮತಿ ದಮಯಂತಿ ನೆಕ್ಕರೆಕಜೆ, ಶ್ರೀಮತಿ ಸಾವಿತ್ರಿ ಎರೆಬೈಲು, ಶ್ರೀಮತಿ ಗೌರಮ್ಮ ಸರ್ವೆ, ಶ್ರೀಮತಿ ಪಾರ್ವತಿ ಪೂವ, ಶ್ರೀಮತಿ ರೋಹಿಣಿ ಪಾಲಡ್ಕ, ಶ್ರೀಮತಿ ದಮಯಂತಿ ಎರೆಬೈಲು, ಶ್ರೀಮತಿ ವಸಂತಿ ಎರೆಬೈಲು, ಶ್ರೀಮತಿ ನಿವೇದಿನಿ ರವಿರಾಜ್ ಉಪಸ್ಥಿತರಿದ್ದರು. ಸನ್ಮಾನದ ಪ್ರಾಯೋಜಕರಾಗಿ ಡಾ. ಸಂದೀಪ್ ಕೆ.ಎಂ., ಪ್ರಶಾಂತ್ ಕೆ.ಎಂ. ರವಿರಾಜ ಕೆ.ಎಸ್. ಸತೀಶ್ ಬೆಳ್ತಂಗಡಿ, ಯೋಗೀಶ್ ಗೌಡ ಕಾವು, ಅವೀಶ್ ಪಾಲಡ್ಕ, ವಿನಯರಾಜ್ ಐವರ್ನಾಡು ಸಹಕರಿಸಿದರು.
ನ. 28ರಂದು ಪುತ್ತೂರು ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾಪ್ರಸಾದ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.