ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾ| ಘಟಕದ ಚುನಾವಣೆ; ಅಧ್ಯಕ್ಷ ಸ್ಥಾನಕ್ಕೆ ಸಿದ್ದೀಕ್ ನೀರಾಜೆ, ಶ್ರವಣ್ ಕುಮಾರ್ ನಾಳರಿಂದ ನಾಮಪತ್ರ ಸಲ್ಲಿಕೆ

0

ನಾಮಪತ್ರ ವಾಪಸ್-ಶ್ರವಣ್ ಕುಮಾರ್ ಘೋಷಣೆ

ಸಿದ್ದೀಕ್ ನೀರಾಜೆಗೆ ಬೆಂಬಲ

ಉಪಾಧ್ಯಕ್ಷರಾಗಿ ಎಂ.ಎಸ್.ಭಟ್, ಕಿರಣ್ ಪ್ರಸಾದ್, ಕಾರ್ಯದರ್ಶಿಯಾಗಿ ನಝೀರ್ ಕೊಯಿಲ, ಅಜಿತ್ ಕುಮಾರ್ ಅವಿರೋಧ ಆಯ್ಕೆ

ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ, ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ

ಪುತ್ತೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಪ್ರಜಾವಾಣಿಯ ಉಪ್ಪಿನಂಗಡಿ ವರದಿಗಾರ, ಸುದ್ದಿ ಬಿಡುಗಡೆಯ ಹಿರಿಯ ವರದಿಗಾರರೂ ಆಗಿರುವ ಸಿದ್ದೀಕ್ ನೀರಾಜೆ ಮತ್ತು ವಿಜಯವಾಣಿಯ ವರದಿಗಾರ ಶ್ರವಣ್ ಕುಮಾರ್ ನಾಳ ಸೇರಿದಂತೆ ಒಟ್ಟು 15 ಹುದ್ದೆಗಳಿಗೆ 20 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ದ.5ರಂದು ನಡೆಸಲು ನಿಗದಿಪಡಿಸಲಾಗಿರುವ ಪುತ್ತೂರು ತಾಲೂಕು ಘಟಕದ ಪದಾಧಿಕಾರಿಗಳ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರ ಆಯ್ಕೆಗಾಗಿನ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೇಯ ದಿನವಾಗಿದ್ದ ನ.28ರಂದು ಅಧ್ಯಕ್ಷ ಸ್ಥಾನಕ್ಕೆ ಸಿದ್ದೀಕ್ ನೀರಾಜೆ ಮತ್ತು ವಿಜಯವಾಣಿಯ ವರದಿಗಾರ ಶ್ರವಣ್ ಕುಮಾರ್ ನಾಳ ಮಾತ್ರ ನಾಮಪತ್ರ ಸಲ್ಲಿಸಿದ್ದು ಇವರೀರ್ವರ ನಾಮಪತ್ರಗಳೂ ಕ್ರಮಬದ್ಧವಾಗಿತ್ತು. ಶ್ರವಣ್ ಕುಮಾರ್ ನಾಳ ಅವರು ತನ್ನ ನಾಮಪತ್ರ ವಾಪಸ್ ಪಡೆದುಕೊಳ್ಳುವುದಾಗಿ ಘೋಷಿಸಿರುವುದರಿಂದ ಸುದ್ದಿ ಬಳಗದ ಸಿದ್ದೀಕ್ ನೀರಾಜೆ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ನಾಮಪತ್ರ ಪರಿಶೀಲನೆಯ ಬಳಿಕ ‘ಸುದ್ದಿ’ಯೊಂದಿಗೆ ಮಾತನಾಡಿದ ಶ್ರವಣ್ ಕುಮಾರ್ ನಾಳರವರು ನಾನು ಪತ್ರಕರ್ತರ ಸಂಘದ ಅಧ್ಯಕ್ಷನಾಗಿದ್ದ ವೇಳೆ ಪತ್ರಿಕಾ ಭವನದಲ್ಲಿ ಕೆಲವು ಸದಸ್ಯರಿಂದ ನಡೆಯುತ್ತಿದ್ದ ಅವ್ಯವಹಾರಗಳನ್ನು ತಡೆಯಲು ಮುಂದಾಗಿದ್ದಾಗ ನನಗೆ ಬೆಂಬಲ ನೀಡಿ ಪ್ರೋತ್ಸಾಹಿಸಿದ್ದ ಉಪ್ಪಿನಂಗಡಿ ಭಾಗದ ಸುದ್ದಿಬಿಡುಗಡೆ ಮತ್ತು ಪ್ರಜಾವಾಣಿಯ ವರದಿಗಾರರೂ ಆಗಿರುವ ಸಿದ್ದೀಕ್ ನೀರಾಜೆಯವರಿಗೆ ನನ್ನ ಸಂಪೂರ್ಣ ಬೆಂಬಲ ಘೋಷಿಸಿದ್ದೇನೆ. ನಾನು ಅಧ್ಯಕ್ಷನಾಗಿದ್ದ ಸಮಯದಲ್ಲಿ ಸಂಘದ ಅವ್ಯವಹಾರಗಳನ್ನು ಸರಿಪಡಿಸಲು ನನಗೆ ನೀಡಿದ ಬೆಂಬಲವನ್ನು ನಾನು ಇಲ್ಲಿ ಸ್ಮರಿಸಿಕೊಳ್ಳುತ್ತಿದ್ದೇನೆ. ಅವರು ಅದನ್ನು ಸಮರ್ಥವಾಗಿ ಮುಂದುವರಿಸುತ್ತಾರೆ ಎಂಬ ನಂಬಿಕೆ ನನಗಿದೆ. ಅದಕ್ಕಾಗಿ ನಾನು ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದುಕೊಳ್ಳಲಿದ್ದು ಅಧ್ಯಕ್ಷ ಸ್ಥಾನಕ್ಕೆ ಸಿದ್ದೀಕ್ ನೀರಾಜೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.ಈ ಮೂಲಕ ಶ್ರವಣ್ ಕುಮಾರ್ ನಾಳರವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಚುನಾವಣಾಧಿಕಾರಿಯಾಗಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಮತ್ತು ಉಪಚುನಾವಣಾಧಿಕಾರಿಯಾಗಿರುವ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ನ.28ರಂದು ಪತ್ರಿಕಾ ಭವನದಲ್ಲಿ ನಾಮಪತ್ರ ಸ್ವೀಕಾರ ಮತ್ತು ನಾಮಪತ್ರ ಪರಿಶೀಲನೆ ನಡೆಯಿತು.ಎಲ್ಲರ ನಾಮಪತ್ರಗಳೂ ಕ್ರಮಬದ್ಧವಾಗಿದ್ದು ನ.29ರ ಮಧ್ಯಾಹ್ನದವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶ ಇದೆ. ಅನಿವಾರ್ಯವಾದರೆ ದ.5ರಂದು ಪತ್ರಿಕಾ ಭವನದಲ್ಲಿ ಮತದಾನ ನಡೆದು ಅಂದೇ ಮತ ಎಣಿಕೆಯಾಗಿ ಫಲಿತಾಂಶ ಘೋಷಣೆಯಾಗಲಿದೆ. ಒಟ್ಟು 23 ಮಂದಿ ಸದಸ್ಯರು ಮತದಾನ ಮಾಡಲು ಅರ್ಹತೆ ಹೊಂದಿದ್ದಾರೆ.

ಉಪಾಧ್ಯಕ್ಷ, ಕಾರ್ಯದರ್ಶಿ ಹುದ್ದೆಗೂ ಅವಿರೋಧ ಆಯ್ಕೆ: ಉಪಾಧ್ಯಕ್ಷ ಸ್ಥಾನದ 2 ಹುದ್ದೆಗೆ ಉದಯವಾಣಿಯ ಉಪ್ಪಿನಂಗಡಿ ವರದಿಗಾರ ಎಂ.ಎಸ್.ಭಟ್ ಮತ್ತು ಉದಯವಾಣಿ ಪುತ್ತೂರು ವರದಿಗಾರ ಕಿರಣ್ ಪ್ರಸಾದ್ ಕುಂಡಡ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದು ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿ ಎರಡು ಹುದ್ದೆಗೆ ಜಯಕಿರಣದ ಉಪ್ಪಿನಂಗಡಿ ವರದಿಗಾರ ಮಹಮ್ಮದ್ ನಝೀರ್ ಕೊಯಿಲ ಮತ್ತು ನ್ಯೂಸ್ 18 ವರದಿಗಾರ ಅಜಿತ್ ಕುಮಾರ್ ಕೆ. ಮಾತ್ರ ನಾಮಪತ್ರ ಸಲ್ಲಿಸಿದ್ದು ಇವರೀರ್ವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಆಯ್ಕೆಗಳ ಅಧಿಕೃತ ಘೋಷಣೆ ಮಾತ್ರ ಬಾಕಿ.

ಪ್ರಧಾನ ಕಾರ್ಯದರ್ಶಿ: ಪ್ರಧಾನ ಕಾರ್ಯದರ್ಶಿ ಸ್ಥಾನದ ಒಂದು ಹುದ್ದೆಗೆ ಪ್ರಜಾವಾಣಿ ಮತ್ತು ವಿಜಯವಾಣಿಯ ಪುತ್ತೂರು ವರದಿಗಾರರಾಗಿರುವ ಶಶಿಧರ ರೈ ಕುತ್ಯಾಳ ಮತ್ತು ಸುದ್ದಿ ಬಿಡುಗಡೆಯ ಹಿರಿಯ ವರದಿಗಾರ ಲೋಕೇಶ್ ಬನ್ನೂರು ನಾಮಪತ್ರ ಸಲ್ಲಿಸಿದ್ದು ಇಬ್ಬರ ನಾಮಪತ್ರವೂ ಕ್ರಮಬದ್ಧವಾಗಿದೆ.

ಕೋಶಾಧಿಕಾರಿ: ಕೋಶಾಧಿಕಾರಿಯ ಒಂದು ಹುದ್ದೆಗೆ ವಾರ್ತಾ ಭಾರತಿ ಮತ್ತು ಕನ್ನಡಪ್ರಭದ ಪುತ್ತೂರು ವರದಿಗಾರ ಸಂಶುದ್ದೀನ್ ಸಂಪ್ಯ ಮತ್ತು ಸುದ್ದಿ ಬಿಡುಗಡೆ ಹಿರಿಯ ವರದಿಗಾರ ಶೇಖ್ ಜೈನುದ್ದೀನ್ ನೆಲ್ಲಿಕಟ್ಟೆ ಅವರು ನಾಮಪತ್ರ ಸಲ್ಲಿಸಿದ್ದು ಇವರೀರ್ವರ ನಾಮಪತ್ರಗಳೂ ಕ್ರಮಬದ್ಧವಾಗಿದೆ.

ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನ: ಸಂಘದ ಕಾರ್ಯಕಾರಿ ಸಮಿತಿಯ 8 ಸದಸ್ಯ ಸ್ಥಾನಕ್ಕೆ ಹತ್ತು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಸಂಯುಕ್ತ ಕರ್ನಾಟಕ ವರದಿಗಾರ ಮೇಘ ಪಾಲೆತ್ತಡಿ, ವಿಜಯ ಕರ್ನಾಟಕದ ಕುಮಾರ್ ಕೆ. ಕಲ್ಲಾರೆ, ವಿಶ್ವವಾಣಿಯ ಕೃಷ್ಣಪ್ರಸಾದ್ ಬಲ್ನಾಡು, ವಿಜಯ ಕರ್ನಾಟಕದ ಸುಧಾಕರ ಸುವರ್ಣ ತಿಂಗಳಾಡಿ, ಸ್ಪಂದನ ಟಿ.ವಿ.ಯ ಉಮಾಶಂಕರ್ ಪಾಂಗ್ಲಾಯಿ, ಹೊಸದಿಗಂತದ ಐ.ಬಿ.ಸಂದೀಪ್ ಕುಮಾರ್, ವಿಶ್ವವಾಣಿಯ ಪ್ರವೀಣ್ ಕುಮಾರ್ ಬೊಳುವಾರು, ಸುದ್ದಿ ಬಿಡುಗಡೆಯ ಸ್ಥಾನೀಯ ಸಂಪಾದಕ ಕರುಣಾಕರ ರೈ ಸಿ.ಎಚ್.,ಸುದ್ದಿ ಬಿಡುಗಡೆಯ ವರದಿಗಾರರಾದ ಶೇಷಪ್ಪ ಕಜೆಮಾರ್ ಮತ್ತು ಉಮಾಪ್ರಸಾದ್ ರೈ ನಡುಬೈಲುರವರು ಕಾರ್ಯಕಾರಿಣಿಯ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಇವರೆಲ್ಲರ ನಾಮಪತ್ರಗಳೂ ಕ್ರಮಬದ್ಧವಾಗಿದೆ.

ಸುದ್ದಿ ಬಳಗದ ಸಿದ್ದೀಕ್ ನೀರಾಜೆ ಅಧ್ಯಕ್ಷತೆಗೆ ಅವಿರೋಧ ಆಯ್ಕೆ -ಉಪ್ಪಿನಂಗಡಿ ತಂಡದ ಗೆಲುವು

ಈ ಚುನಾವಣೆ ನಡೆಯಲು ಪ್ರಮುಖ ಕಾರಣವಾಗಿದ್ದ ಉಪ್ಪಿನಂಗಡಿ ಭಾಗದ ಪತ್ರಕರ್ತರ ತಂಡ ಆರಂಭಿಕ ಗೆಲುವು ಸಾಧಿಸಿದೆ. ಪತ್ರಕರ್ತರ ಸಂಘದಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಮತ್ತು ಸಂಘದ ಲೆಕ್ಕಪತ್ರಗಳು ಸಮರ್ಪಕವಾಗಿ ಇಲ್ಲದೇ ಇರುವುದು ಮತ್ತು ಚುನಾವಣೆ ಕಾನೂನುಬದ್ಧ ರೀತಿಯಲ್ಲಿ ನಡೆಯದೇ ಇರುವ ಕುರಿತು ಸಂಘದ ಸದಸ್ಯರಾಗಿದ್ದ ಉಪ್ಪಿನಂಗಡಿ ಭಾಗದ ವರದಿಗಾರರು ದೂರು ನೀಡಿದ್ದರು. ಅದರ ಪರಿಣಾಮ, ಉದಯ ಕುಮಾರ್ ನೇತೃತ್ವದಲ್ಲಿ ಸಂಘದ ಅವ್ಯವಹಾರದ ಲೆಕ್ಕಾಚಾರ ತನಿಖೆ ನಡೆದು ಅದು ಇತ್ಯರ್ಥವಾಗದ ಕಾರಣ ಈ ಹಿಂದೆ ನಡೆಯಬೇಕಾಗಿದ್ದ ಚುನಾವಣೆ ಎರಡೆರಡು ಬಾರಿ ಮುಂದೂಡಿಕೆಯಾಗಿ ಬಳಿಕ ರದ್ದಾಗಿತ್ತು. ಸಂಘದ ಅವ್ಯವಹಾರದ ಕುರಿತು ‘ಗಂಜಿ ಕೇಂದ್ರ’ ಎಂದು ಸಾಮಾಜಿಕ ಜಾಲತಾಣದಲ್ಲಿಯೂ ಪರ-ವಿರೋಧ ಚರ್ಚೆ, ಸಂವಾದ ನಡೆಯುತ್ತಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಡೆಯಬೇಕಾಗಿದ್ದ ಚುನಾವಣೆ ರದ್ದುಗೊಂಡಿತ್ತು.ಇದೀಗ ಕೊನೆಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ ಜಿಲ್ಲಾ ಸಂಘದ ಮಾರ್ಗದರ್ಶನದಲ್ಲಿ ಪಾರದರ್ಶಕ ಚುನಾವಣೆ ನಡೆಯುವ ಮೂಲಕ ಉಪ್ಪಿನಂಗಡಿ ಭಾಗದ ಪತ್ರಕರ್ತರು ಗೆಲುವು ಸಾಽಸಿದ್ದಾರೆ.ಉಪ್ಪಿನಂಗಡಿ ಭಾಗದವರಾಗಿರುವ ಸುದ್ದಿ ಬಳಗದ ಸಿದ್ದೀಕ್ ನೀರಾಜೆ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪ್ಪಿನಂಗಡಿ ಭಾಗದವರೇ ಆಗಿರುವ ಎಂ.ಎಸ್.ಭಟ್ ಉಪಾಧ್ಯಕ್ಷರಾಗಿ, ನಝೀರ್ ಕೊಯಿಲ ಅವರು ಕಾರ‍್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಅಽಕೃತ ಘೋಷಣೆ ಮಾತ್ರ ಬಾಕಿಯಿದೆ.

15 ಹುದ್ದೆಗಳಿಗೆ 20 ಮಂದಿಯಿಂದ ನಾಮಪತ್ರ ಸಲ್ಲಿಕೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕಕ್ಕೆ ಒಟ್ಟು 15 ಹುದ್ದೆಗಳಿಗೆ 20 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.ನಾಮಪತ್ರ ಸಲ್ಲಿಕೆಗೆ ನ.28 ಕೊನೆಯ ದಿನವಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಸಿದ್ದೀಕ್ ನೀರಾಜೆ ಮತ್ತು ಶ್ರವಣ್ ಕುಮಾರ್ ನಾಳ, 2 ಉಪಾಧ್ಯಕ್ಷ ಹುದ್ದೆಗಳಿಗೆ ಉಪ್ಪಿನಂಗಡಿಯ ಎಂ.ಎಸ್.ಭಟ್ ಮತ್ತು ಕಿರಣ್‌ಪ್ರಸಾದ್ ಕೆ., ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಲೋಕೇಶ್ ಬನ್ನೂರು ಮತ್ತು ಶಶಿಧರ್ ರೈ ಕುತ್ಯಾಳ, 2 ಕಾರ್ಯದರ್ಶಿ ಸ್ಥಾನಕ್ಕೆ ನಝೀರ್ ಕೊಯಿಲ ಮತ್ತು ಅಜಿತ್ ಕುಮಾರ್ ಕೆ.,ಕೋಶಾಧಿಕಾರಿ ಸ್ಥಾನಕ್ಕೆ ಶೇಖ್ ಜೈನುದ್ದೀನ್ ಮತ್ತು ಸಂಶುದ್ದೀನ್ ಸಂಪ್ಯ ಹಾಗೂ 8 ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ಮೇಘ ಪಾಲೆತ್ತಡಿ, ಕುಮಾರ್ ಕೆ.ಕಲ್ಲಾರೆ, ಕೃಷ್ಣಪ್ರಸಾದ್ ಬಲ್ನಾಡು, ಸುಧಾಕರ ಕೆ.,ಉಮಾಶಂಕರ್, ಐ.ಬಿ.ಸಂದೀಪ್ ಕುಮಾರ್, ಪ್ರವೀಣ್ ಕುಮಾರ್, ಶೇಷಪ್ಪ ಕಜೆಮಾರ್, ಉಮಾಪ್ರಸಾದ್ ರೈ ನಡುಬೈಲು ಮತ್ತು ಕರುಣಾಕರ ರೈ ಸಿ.ಎಚ್.ಅವರು ನಾಮಪತ್ರ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here