ಕೊಕ್ಕಡ: ತಂಗಿ, ಆಕೆಯ ಗಂಡನ ಜಗಳಬಿಡಿಸಲು ಹೋದ ವೇಳೆ ಹಲ್ಲೆ-ದೂರು

0

ನೆಲ್ಯಾಡಿ: ತಂಗಿ ಹಾಗೂ ಆಕೆಯ ಗಂಡನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ವೇಳೆ ಬಾವ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕೊಕ್ಕಡ ನಿವಾಸಿಯೋರ್ವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಡಬ ತಾಲೂಕು ಕೊಕ್ಕಡ ಬೋಳದಬೈಲು ನಿವಾಸಿ ಮಹಮ್ಮದ್ ಶರೀಫ್ ಹಲ್ಲೆಗೊಳಗಾದವರು. ಮಹಮ್ಮದ್ ಶರೀಫ್ ಅವರ ತಾಯಿ ನ.25ರಂದು ಶರೀಫ್‌  ಅವರಿಗೆ ಕರೆ ಮಾಡಿ ತಂಗಿ ಮತ್ತು ಆಕೆಯ ಪತಿ ನಡುವೆ ಗಲಾಟೆ ನಡೆಯುತ್ತಿದೆ ಎಂದು ತಿಳಿಸಿದಂತೆ ಶರೀಫ್‌ರವರು ಕೂಡಲೇ ತಾಯಿ ಮನೆಗೆ ಹೋಗಿ ವಿಚಾರಿಸಿ ಬಳಿಕ ಕೌಕ್ರಾಡಿ ಗ್ರಾಮದ ಪಟ್ಲಡ್ಕ ಎಂಬಲ್ಲಿರುವ ತಂಗಿ ಮನೆಗೆ ಹೋಗಿ ವಿಚಾರಿಸುತ್ತಿದ್ದಾಗ, ಅವರ ಬಾವ ಅಜೀಜ್ ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವ ಉದ್ದೇಶದಿಂದ ಕುತ್ತಿಗೆ ಕಡಿಯಲು ತಲವಾರು ಬೀಸಿದ್ದಾರೆ. ಇದರಿಂದ ಶರೀಫ್‌ರವರು ತಪ್ಪಿಸಿಕೊಂಡಿದ್ದು, ಹಲ್ಲೆಯಿಂದ ಅವರ ಎಡಕೈ ಅಂಗೈಯ ಮೂಳೆ ಮುರಿತವಾಗಿದೆ. ನೆಲಕ್ಕೆ ಬಿದ್ದಾಗ ತಲೆಗೂ ಗುದ್ದಿದ ಗಾಯವಾಗಿರುತ್ತದೆ. ಗಾಯಗೊಂಡಿರುವ ಶರೀಫ್‌ರವರು ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಮಹಮ್ಮದ್ ಶರೀಫ್ ಅವರು ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 504,307 ‌IPC ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here