ಕಾಯಿನ್ ಹೆಸರಿನಲ್ಲಿ ಮತ್ತೆ ಫೀಲ್ಡಿಗಿಳಿದ ದೋಖಾ ಏಜೆನ್ಸಿಗಳು

0

ಮತ್ತೆ ಮತ್ತೆ ಮೋಸ ಹೋಗುತ್ತಿರುವ ಸಾರ್ವಜನಿಕರು..!

 

ಪುತ್ತೂರು: ಕೊರೊನಾ ಬಳಿಕ ಹುಟ್ಟಿಕೊಂಡಿದ್ದ ಅನೇಕ ಚೈನ್ ಬ್ಯುಸಿನೆಸ್ ನೆಲಕಚ್ಚಿದ್ದು ಸಾರ್ವಜನಿಕರಿಂದ ಲಕ್ಷಗಟ್ಟಲೆ ಹಣ ಪಡೆದು ಕೊನೆಗೆ ವಿಳಾಸವಿಲ್ಲದೆ ನಾಪತ್ತೆಯಾಗಿದ್ದು ಇದೀಗ ಮತ್ತೆ ವಿವಿಧ ಕಾಯಿನ್ ಹೆಸರಿನಲ್ಲಿ ವ್ಯವಹಾರಕ್ಕೆ ಇಳಿದಿದ್ದು ಅನೇಕ ಮಂದಿ ಈ ಜೂಜು ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಆತಂಕದ ಮಾಹಿತಿ ಹೊರ ಬಿದ್ದಿದೆ.

ಕೇರಳದ ವ್ಯಕ್ತಿಯೋರ್ವ ಮೋರಿಸ್ ಕಾಯಿನ್ ಹೆಸರಿನಲ್ಲಿ ವ್ಯವಹಾರ ನಡೆಸಿ ಸಾರ್ವಜನಿಕರಿಂದ ಕನಿಷ್ಠ 15 ಸಾವಿರ ಹಣವನ್ನು ಪಡೆದು ಬಳಿಕ ಪ್ರತೀ ವಾರದಲ್ಲಿ ಲಾಭಾಂಶವನ್ನು ನೀಡುವುದಾಗಿ ಹೇಳಿತ್ತು. ಪ್ರಾರಂಭದಲ್ಲಿ ಇವರ ವ್ಯವಹಾರದಲ್ಲಿ ಸೇರಿಕೊಂಡವರಿಗೆ ಲಾಭಾಂಶವನ್ನು ನೀಡಿತ್ತು. ಆದರೆ ಬಳಿಕ ಈ ಕಂಪೆನಿಯ ಮಾಲಕನನ್ನು ಕೇರಳ ಪೊಲೀಸರು ಬಂಧಿಸಿದ್ದು ಆ ಬಳಿಕ ಮೋರಿಸ್ ಕಾಯಿನ್ ಬಂದಾಗಿ ಸಾವಿರಾರು ಮಂದಿಗೆ ಟೋಪಿ ಹಾಕಿತ್ತು.

ನಿಮ್ಮ ಹಣವನ್ನು ಇಮ್ಮಡಿಗೊಳಿಸುವುದಾಗಿ ಹೇಳುವ ಕಂಪೆನಿ ಸದಸ್ಯನಾದವನಿಂದ ಕನಿಷ್ಟ 8 ರಿಂದ 10 ಸಾವಿರ ಮುಂಗಡ ಹಣವನ್ನು ಪಡೆದುಕೊಳ್ಳುತ್ತಿದೆ. ಮುಂಗಡ ಹಣ ಪಾವತಿಸಿ ಈ ವ್ಯವಹಾರದಲ್ಲಿ ಸೇರಿಕೊಂಡವರು ಸದಸ್ಯರನ್ನು ಸೇರ್ಪಡೆಗೊಳಿಸಬೇಕಿದೆ. ಸದಸ್ಯರನ್ನು ಸೇರ್ಪಡೆಗೊಳಿಸಿದ ಬಳಿಕ ಮುಂಗಡವಾಗಿ ನೀಡಿದ ಹಣವನ್ನು ಸದಸ್ಯರ ಖಾತೆಗೆ ಜಮೆ ಮಾಡುತ್ತಾರೆ. ಇದು ಜನರಲ್ಲಿ ವಿಶ್ವಾಸ ಬರಿಸುವ ಉದ್ದೇಶವಾಗಿದೆ. ಪ್ರಾರಂಭದಲ್ಲಿ ಬ್ಯುಸಿನೆಸ್ ಮೆನ್‌ಗಳನ್ನು ಸದಸ್ಯರನ್ನಾಗಿ ಮಾಡಿ ಬಳಿಕ ಇತರರಿಗೂ ಕಂಪೆನಿ ಮೇಲೆ ನಂಬಿಕೆ ಬರುವಂತೆ ಮಾಡಿ ಬಳಿಕ ಎಲ್ಲರಿಗೂ ಒಟ್ಟಾಗಿ ಟೋಪಿ ಇಡುವ ಯೋಜನೆಯಾಗಿದ್ದು ಇದರ ಬೃಹತ್ ಜಾಲವೊಂದು ಕರಾವಳಿ ಜಿಲ್ಲೆಗಳಲ್ಲಿ ಬೀಡುಬಿಟ್ಟಿದೆ ಎನ್ನಲಾಗಿದೆ. ಸುಲಭದಲ್ಲಿ ಹಣ ಮಾಡುವ ಉದ್ದೇಶದಿಂದ ಈ ರೀತಿಯ ದೋಖಾ ವ್ಯವಹಾರವನ್ನು ಮಾಡಲಾಗುತ್ತಿದ್ದು ಜನರು ಮಾತ್ರ ಪದೇ ಪದೇ ಮೋಸ ಹೋಗುತ್ತಿರುವುದು ವಿಪರ‍್ಯಾಸದ ಸಂಗತಿಯಾಗಿದೆ.

ಕಾಯಿನ್ ಹೆಸರಿನಲ್ಲಿ ನಡೆಯುವ ದಂಧೆ ಸ್ಕೀಂನ ಸದಸ್ಯರಾಗುವ ಮುನ್ನ ನೂರು ಬಾರಿ ಆಲೋಚಿಸಿ ಅಥವಾ ಸದಸ್ಯರಾಗುವಂತೆ ಪದೇ ಪದೇ ಒತ್ತಡ ಹಾಕಿದ್ದಲ್ಲಿ ಈ ಬಗ್ಗೆ ಪೊಲೀಸರಿಗೂ ದೂರು ನೀಡಬಹುದಾಗಿದೆ.

ವಿಶ್ವಾಸಗಳಿಸಿದ ಬಳಿಕ ಮೋಸ

ಪ್ರಾರಂಭದಲ್ಲಿ ಈ ರೀತಿಯ ವ್ಯವಹಾರ ಮಾಡುವ ಮಂದಿ ಸಮಾಜದಲ್ಲಿರುವ ಗೌರವಯುತ ಸ್ಥಾನದಲ್ಲಿರುವ ವ್ಯಕ್ತಿಗಳನ್ನೇ ಸದಸ್ಯರನ್ನಾಗಿ ಮಾಡುವ ಮೂಲಕ ಜನ ಸಾಮಾನ್ಯರನ್ನು ಕಂಪೆನಿ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡುತ್ತಾರೆ. ಈ ಹಿಂದೆಯೂ ಇದೇ ರೀತಿಯಾಗಿಯೇ ನಡೆದಿತ್ತು. ವಿವಿಧ ಹೆಸರಿನಲ್ಲಿ ಸ್ಕೀಂಗಳನ್ನು ಮಾಡಿ ಜನರಿಗೆ ಟೋಪಿ ಹಾಕಿ ಬದುಕು ಸಾಗಿಸುವ ಸೋಮಾರಿಗಳೇ ಈ ವ್ಯವಹಾರದ ಮುಖ್ಯ ರೂವಾರಿಗಳಾಗಿರುತ್ತಾರೆ.

LEAVE A REPLY

Please enter your comment!
Please enter your name here