





ಬಡಗನ್ನೂರು: ಸ.ಹಿ.ಉ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ನ.30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಬೆಟ್ಟಂಪ್ಪಾಡಿ ಗ್ರಾಮದ ಪೈಂತಿಮುಗೇರು ಹುಕ್ರ ನಾಯ್ಕ ಮತ್ತು ದೇವಕಿ ದಂಪತಿಗಳ ಪುತರಾದ ಇವರು ಪ್ರಾಥಮಿಕ ಶಿಕ್ಷಣವನ್ನು ಇರ್ದೆ ಬೆಟ್ಟಂಪ್ಪಾಡಿ ಗುಮ್ಮಟೆಗದ್ದೆ ಹಿ.ಪ್ರಾಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ನವೋದಯ ಪ್ರೌಢಶಾಲೆಯಲ್ಲಿ ಹಾಗೂ ಪಿ.ಯು.ಸಿ ವಿಧ್ಯಾಭ್ಯಾಸವನ್ನು ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಮಾಡಿದ್ದಾರೆ .

ಬಳಿಕ ಮಂಗಳೂರು ಡಯಟ್ ನಲ್ಲಿ ಟಿ.ಸಿ.ಎಚ್. ವಿದ್ಯಾಭ್ಯಾಸ ಮುಗಿಸಿ ಕರಿಹಲಗೆ ಯೋಜನೆಯಲ್ಲಿ ಈಶ್ವರಮಂಗಲ ನೂಜಿಬೈಲು ಸ.ಹಿ.ಪ್ರಾ ಶಾಲೆಯಲ್ಲಿ 06- 02 1990 ರಲ್ಲಿ ಉದ್ಯೋಗಕ್ಕೆ ಸೇರಿದರು.03-07 1995 ರಲ್ಲಿ ಸ.ಹಿ.ಪ್ರಾ.ಶಾಲೆ ಕೈಕಾರ ವರ್ಗಾವಣೆ ಗೊಂಡು ಕರ್ತವ್ಯ ನಿರ್ವಹಿಸಿದರು. 2007 ರಲ್ಲಿ ಬಂಟ್ವಾಳ ತಾಲೂಕಿನ ಸ.ಹಿ.ಪ್ರಾ ಶಾಲೆ ಕೃಷ್ಣ ಗಿರಿಗೆ ಮುಖ್ಯ ಶಿಕ್ಷಕರಾಗಿ ಬಡ್ತಿ ಗೊಂಡು ವರ್ಗಾವಣೆಯಾಗಿ ಸೇವೆ ಸಲ್ಲಿಸಿದರು. 2019 ರಲ್ಲಿ ಹೆಚ್ಚುವರಿ ವರ್ಗಾವಣೆಯಲ್ಲಿ ಬಡಗನ್ನೂರು ಸ.ಹಿ.ಉ.ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ವರ್ಗಾವಣೆ ಹೊಂದಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ನ.30 2022 ರಂದು ಸೇವಾ ನಿವೃತ್ತಿ ಹೊಂದಾಲಿದ್ದಾರೆ.
1992 ರಲ್ಲಿ ಯಶೋದ ಇವರೊಂದಿಗೆ ವೈವಾಹಿಕ ಜೀವನ ಕಾಲಿಟ್ಟ ಇವರು ಇಬ್ಬರು ಪುತರಾದ ತಿಲಕ್ ರಾಜ್, ಯತಿನ್ ರಾಜ್ , ಹಾಗೂ ಸೊಸೆ ಕವಿತ ಇವರೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.








