ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಚುನಾವಣೆಯ ಅಂತಿಮ ಕಣ ಪ್ರಕಟ

0

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಲೋಕೇಶ್ ಬನ್ನೂರು, ಶಶಿಧರ ರೈ, ಕೋಶಾಧಿಕಾರಿ ಹುದ್ದೆಗೆ ಶೇಖ್ ಜೈನುದ್ದೀನ್, ಸಂಶುದ್ದೀನ್ ಸಂಪ್ಯ ನಡುವೆ ಫೈಟ್

ಕಾರ್ಯಕಾರಿಣಿಯ 8 ಸದಸ್ಯ ಸ್ಥಾನಕ್ಕೆ 10 ಮಂದಿ ಸ್ಪರ್ಧೆ

ಪುತ್ತೂರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಪ್ರಜಾವಾಣಿಯ ಉಪ್ಪಿನಂಗಡಿ ವರದಿಗಾರರಾಗಿರುವ ಸುದ್ದಿ ಬಿಡುಗಡೆಯ ಹಿರಿಯ ವರದಿಗಾರ ಸಿದ್ದೀಕ್ ನೀರಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.‌
ನಾಮಪತ್ರ ಸಲ್ಲಿಸಲು ಕೊನೇಯ ದಿನವಾಗಿದ್ದ ನ.28ರಂದು ಅಧ್ಯಕ್ಷ ಸ್ಥಾನಕ್ಕೆ ಸಿದ್ದೀಕ್ ನೀರಾಜೆ ಮತ್ತು ವಿಜಯವಾಣಿಯ ವರದಿಗಾರ ಶ್ರವಣ್ ಕುಮಾರ್ ನಾಳರವರು ನಾಮಪತ್ರ ಸಲ್ಲಿಸಿದ್ದರು. ಶ್ರವಣ್ ಕುಮಾರ್ ನಾಳರವರು ನಾಮಪತ್ರ ವಾಪಸ್ ಪಡೆಯಲು ಕೊನೇಯ ದಿನವಾಗಿರುವ ನ.29ರಂದು ತನ್ನ ನಾಮಪತ್ರ ವಾಪಸ್ ಪಡೆದುಕೊಂಡಿದ್ದು ಸುದ್ದಿ ಬಳಗದ ಸಿದ್ದೀಕ್ ನೀರಾಜೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷ ಸ್ಥಾನದ ಎರಡು ಹುದ್ದೆಗೆ ಉದಯವಾಣಿಯ ಉಪ್ಪಿನಂಗಡಿ ವರದಿಗಾರ ಎಂ.ಎಸ್.ಭಟ್ ಮತ್ತು ಉದಯವಾಣಿ ಪುತ್ತೂರು ವರದಿಗಾರ ಕಿರಣ್ ಪ್ರಸಾದ್ ಕುಂಡಡ್ಕರವರು ನಾಮಪತ್ರ ಸಲ್ಲಿಸಿದ್ದು ಇವರಿಬ್ಬರೂ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿ ಎರಡು ಹುದ್ದೆಗೆ ಜಯಕಿರಣದ ಉಪ್ಪಿನಂಗಡಿ ವರದಿಗಾರ ಮಹಮ್ಮದ್ ನಝೀರ್ ಕೊಯಿಲ ಮತ್ತು ನ್ಯೂಸ್ 18 ವರದಿಗಾರ ಅಜಿತ್ ಕುಮಾರ್ ಕೆ. ಮಾತ್ರ ನಾಮಪತ್ರ ಸಲ್ಲಿಸಿದ್ದು ಇವರೀರ್ವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಂತಿಮಕಣ:

ಪ್ರಧಾನ ಕಾರ್ಯದರ್ಶಿ ಸ್ಥಾನದ ಒಂದು ಹುದ್ದೆಗೆ ಪ್ರಜಾವಾಣಿ ಮತ್ತು ವಿಜಯವಾಣಿಯ ಪುತ್ತೂರು ವರದಿಗಾರರಾಗಿರುವ ಶಶಿಧರ ರೈ ಮತ್ತು ಸುದ್ದಿ ಬಿಡುಗಡೆಯ ಹಿರಿಯ ವರದಿಗಾರ ಲೋಕೇಶ್ ಬನ್ನೂರು ನಾಮಪತ್ರ ಸಲ್ಲಿಸಿದ್ದು ಇಬ್ಬರು ಅಂತಿಮ ಕಣದಲ್ಲಿದ್ದಾರೆ. ಕೋಶಾಧಿಕಾರಿಯ ಒಂದು ಹುದ್ದೆಗೆ ವಾರ್ತಾ ಭಾರತಿ ಮತ್ತು ಕನ್ನಡಪ್ರಭದ ಪುತ್ತೂರು ವರದಿಗಾರ ಸಂಶುದ್ದೀನ್ ಸಂಪ್ಯ ಮತ್ತು ಸುದ್ದಿ ಬಿಡುಗಡೆ ಹಿರಿಯ ವರದಿಗಾರ ಶೇಖ್ ಜೈನುದ್ದೀನ್ ನೆಲ್ಲಿಕಟ್ಟೆ ಅವರು ನಾಮಪತ್ರ ಸಲ್ಲಿಸಿದ್ದು ಇಬ್ಬರೂ ಅಂತಿಮ ಕಣದಲ್ಲಿದ್ದಾರೆ.

ಸಂಘದ ಕಾರ್ಯಕಾರಿ ಸಮಿತಿಯ 8 ಸದಸ್ಯ ಸ್ಥಾನಕ್ಕೆ ಹತ್ತು ಮಂದಿ ಅಂತಿಮ ಕಣದಲ್ಲಿದ್ದಾರೆ. ಸಂಯುಕ್ತ ಕರ್ನಾಟಕ ವರದಿಗಾರ ಮೇಘ ಪಾಲೆತ್ತಡಿ, ವಿಜಯ ಕರ್ನಾಟಕದ ಕುಮಾರ್ ಕೆ. ಕಲ್ಲಾರೆ, ವಿಶ್ವವಾಣಿಯ ಕೃಷ್ಣಪ್ರಸಾದ್ ಬಲ್ನಾಡು, ವಿಜಯ ಕರ್ನಾಟಕದ ಸುಧಾಕರ ಸುವರ್ಣ ತಿಂಗಳಾಡಿ, ಸ್ಪಂದನ ಟಿ.ವಿ.ಯ ಉಮಾಶಂಕರ್ ಪಾಂಗ್ಲಾಯಿ, ಹೊಸದಿಗಂತದ ಐ.ಬಿ.ಸಂದೀಪ್ ಕುಮಾರ್, ವಿಶ್ವವಾಣಿಯ ಪ್ರವೀಣ್ ಕುಮಾರ್ ಬೊಳುವಾರು, ಸುದ್ದಿ ಬಿಡುಗಡೆಯ ಸ್ಥಾನೀಯ ಸಂಪಾದಕ ಕರುಣಾಕರ ರೈ ಸಿ.ಎಚ್.,ಸುದ್ದಿ ಬಿಡುಗಡೆಯ ವರದಿಗಾರರಾದ ಶೇಷಪ್ಪ ಕಜೆಮಾರ್ ಮತ್ತು ಉಮಾಪ್ರಸಾದ್ ರೈ ನಡುಬೈಲುರವರು ಕಾರ್ಯಕಾರಿಣಿಯ ಸದಸ್ಯ ಸ್ಥಾನಕ್ಕೆ ಅಂತಿಮಕಣದಲ್ಲಿದ್ದಾರೆ. ದ.5ರಂದು ಪುತ್ತೂರು ಪತ್ರಿಕಾ ಭವನದಲ್ಲಿ ಮತದಾನ ನಡೆದು ಅಂದೇ ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಚುನಾವಣಾಧಿಕಾರಿಯಾಗಿದ್ದಾರೆ.

LEAVE A REPLY

Please enter your comment!
Please enter your name here