ಅನಧಿಕೃತ ಲೇ ಔಟ್‌ಗಾಗಿ ನೆಲಪ್ಪಾಲ್ ಪಾರ್ಕ್- ಹೆಚ್ ಮಹಮ್ಮದ್ ಆಲಿ ಆರೋಪ

0

ಪುತ್ತೂರು: ಪುತ್ತೂರು ನಗರಸಭೆಯಲ್ಲಿ ಹಲವಾರು ಪಾರ್ಕ್‌ಗಳಿವೆ. ಅದನ್ನು ಅಭಿವೃದ್ಧಿ ಪಡಿಸದೆ ನೆಲಪಾಲುವಿನಲ್ಲಿ ಅನಧಿಕೃತವಾಗಿ ಲೇಔಟ್‌ಗೆ ಉಪಯೋಗ ಆಗುವ ರೀತಿಯಲ್ಲಿ ನಗರಸಭೆಯ ವತಿಯಿಂದ ಅದರ ಮಧ್ಯದಲ್ಲಿ ಸುಮಾರು ರೂ.58 ಲಕ್ಷ ವೆಚ್ಚದಲ್ಲಿ ಪಾರ್ಕ್ ನಿರ್ಮಿಸುವ ಕೆಲಸ ನಡೆದಿದೆ. ಈ ಕುರಿತು ದಾಖಲೆ ಸಂಗ್ರಹಿಸಿ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮದ್ ಆಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ನಗರಸಭೆಯಲ್ಲಿ ಹಲವಾರು ಪಾರ್ಕ್‌ಗಳಿವೆ. ಪಾರ್ಕ್ ಮಾಡಲು ನಮ್ಮ ಆಕ್ಷೇಪವೂ ಇಲ್ಲ. ಆದರೆ ನೆಲಪ್ಪಾಲು ಎಂಬಲ್ಲಿ ಪಾರ್ಕ್ ರಚನೆ ಮಾಡಿದ ಉದ್ದೇಶವೇನು ಎಂಬುದು ನಮ್ಮ ಪ್ರಶ್ನೆ ಎಂದ ಅವರು ಈಗಾಗಲೇ ಮೊಟ್ಟೆತ್ತಡ್ಕದಲ್ಲಿ, ಸಾಮೆತ್ತಡ್ಕದಲ್ಲಿ, ನೆಲ್ಲಿಕಟ್ಟೆಯಲ್ಲಿ, ಮಿಶನ್‌ಮೂಲೆಯಲ್ಲಿ ಅಭಿವೃದ್ಧಿಹೊಂದ ಪಾರ್ಕ್‌ಗಳಿವೆ. ಅಲ್ಲಿನ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಂತಹ ಪಾರ್ಕ್‌ಗಳ ಕಾಮಗಾರಿಯನ್ನು ಬದಿಗಿಟ್ಟು ಅದನ್ನು ಪೂರ್ಣಗೊಳಿಸದೆ ನೆಲಪ್ಪಾಲಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣ ಆಗಿದೆ. ಇದು ಎಷ್ಟು ಸರಿ ಎಂದು ಜನರಲ್ಲಿ ಪ್ರಶ್ನೆ ಕಾಡಿದೆ. ಈ ಕುರಿತು ಕೂಲಂಕುಶವಾಗಿ ನೋಡಿದಾಗ ಬಜರಂಗದಳದ ಸಂಚಾಲಕ ಮುರಳಿಕೃಷ್ಣ ಭಟ್ ಹಸಂತಡ್ಕ ಅವರು ಇಲ್ಲೊಂದು ಅನಧಿಕೃತ ಲೇ ಔಟ್ ನಿರ್ಮಿಸಿದ್ದಾರೆ. ಆ ಲೇಔಟ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಲ್ಲಿರುವ ಸರಕಾರಿ ಜಾಗವನ್ನು ಬಳಸಿಕೊಂಡು ಲೇ ಔಟ್‌ಗೆ ಹೆಚ್ಚಿನ ಧಾರಣೆ ಬರುವಂತೆ ಪಾರ್ಕ್ ಮಾಡಿಕೊಳ್ಳಲಾಗಿದೆ. ಈ ಅನಧಿಕೃತ ಲೇ ಔಟ್‌ನ ಬೇನಾಮಿದಾದರರು ಜೀವಂಧರ್ ಜೈನ್ ಎಂದು ಜನ ಹೇಳುತ್ತಿದ್ದಾರೆ ಎಂದ ಅವರು ಪಾರ್ಕ್ ಮಾಡುವ ಸ್ಥಳ, ಸಮಯ, ಸಂದರ್ಭ ಎಲ್ಲವೂ ಸಂಶಯಕ್ಕೆ ಎಡೆ ಮಾಡಿದೆ.

ಅನಧಿಕೃತ ಲೇ ಔಟ್‌ನ ಮಧ್ಯೆದಲ್ಲಿರುವ ಜಾಗದಲ್ಲಿ ಪಾರ್ಕ್ ಮಾಡಲಾಗಿದೆ. ಜೊತೆಗೆ ಈ ಭಾಗದಲ್ಲಿ ಬೇರೆ ಅನುದಾನ ಬಳಕೆ ಮಾಡಿ ಪಾರ್ಕ್‌ಗೆ ಹೋಗುವ ಕಡೆ ಚರಂಡಿ ನಿರ್ಮಾಣ ಆಗಿದೆ. ಲಕ್ಷಾಂತರ ರೂಪಾಯಿ ಪಾರ್ಕ್‌ಗೆ ಖರ್ಚಾ ಮಾಡಿದ್ದಾರೆ ಎಂದರು. ನಗರಸಭೆಗೆ ಇಚ್ಚಾಶಕ್ತಿ ಇದ್ದಲ್ಲಿ ಬೀರಮಲೆ ಬೆಟ್ಟ, ಡಾ. ಶಿವರಾಮ ಕಾರಂತರ ಬಾಲವನ ಅಭಿವೃದ್ಧಿಪಡಿಸಬಹುದಿತ್ತು.
ಇವತ್ತು ಸರಕಾರಿದಲ್ಲಿ ಪಾರ್ಕ್ ಮಾಡಬೇಕಾದರೆ ಕಂದಾಯದವರು ಮೊದಲು ನಮಗೆ ಹ್ಯಾಂಡ್ ಓವರ್ ಮಾಡಬೇಕು. ಬಳಿಕ ಕೌನ್ಸಿಲ್ ನಿರ್ಣಯ ಆದ ಬಳಿಕ ಅನುದಾನ ಇಡಬೇಕು. ಆದರೆ ನಗರಸಭೆ ಕೌನ್ಸಿನಲ್ಲಿ ಸದಸ್ಯರ ಬಾಯನ್ನು ಮುಚ್ಚುವ ಕೆಲಸ ಆಗುತ್ತಿದೆ ಎಂದು ಮಹಮ್ಮದ್ ಆಲಿ ಆರೋಪಿಸಿದರು.

ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ:
ಬಿಜೆಪಿ ಆಡಳಿತದಲ್ಲಿ ತುಂಬಾ ಅಭಿವೃದ್ಧಿ ಕಾಮಗಾರಿ ನಡೆದಿದೆ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ. ಯಾವುದೇ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ರಸ್ತೆಗಳು ಹೊಂಡ ಬಿದ್ದಿದೆ. ಹಲವಾರು ಕಾಮಗಾರಿ ಮಾಡಲಾಗುತ್ತಿಲ್ಲ. ಅಗತ್ಯವಿರುವ ಕಾಮಗಾರಿ ಮಾಡಲಾಗುತ್ತಿಲ್ಲ. ಅದಕ್ಕೆ ಉಪಯೋಗಿಸುವ ಅನುದಾನವನ್ನು ಇವರ ಸ್ವ ಹಿತಾಸಕ್ತಿಗಾಗಿ ಬಳಕೆ ಮಾಡುವುದುನ್ನು ತೀವ್ರ ಆಕ್ಷೇಪ ಮಾಡುತ್ತೇವೆ ಎಂದು ಹೆಚ್ ಮಹಮ್ಮದ್ ಆಲಿ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ಮಹಮ್ಮದ್ ರಿಯಾಝ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಿಸ್ ಉಪಸ್ಥಿತರಿದ್ದರು.

ಕಾಮಗಾರಿ ಆದ ಬಳಿಕ ಟೆಂಡರ್ -ಅಭಿವೃದ್ಧಿಯಲ್ಲಿ ತಪ್ಪಲ್ಲ:
ಪಾರ್ಕ್‌ನ ಕೆಲವು ಕಾಮಗಾರಿಗಳನ್ನು ಮಾಡಿದ ನಂತರ ಟೆಂಡರ್ ಕರೆಯಲಾಗಿದೆ ಎಂಬ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆರೋಪ ವ್ಯಕ್ತವಾಗಿತ್ತು. ಆದರೆ ಒಂದು ಕಾಮಗಾರಿ ಮಾಡುವಾಗ ಅದು ಮುಗಿಯುವ ಹಂತದಲ್ಲಿ ಕೆಲವು ಅಗತ್ಯ ಕಾಮಗಾರಿಗಳನ್ನು ಮಾಡಬೇಕಾಗುತ್ತದೆ. ಆ ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡಿಸಿದ ಬಳಿಕ ಟೆಂಡರ್ ಕರೆದು ಹಣ ಪಾವತಿ ನಡೆಯುವುದು ಸಹಜ. ಅದೊಂದು ಅಭಿವೃದ್ದಿಯ ಬಗ್ಗೆ ದೊಡ್ಡ ತಪ್ಪಾಗುವುದಿಲ್ಲ.
ಹೆಚ್ ಮಹಮ್ಮದ್ ಆಲಿ, ನಗರ ಕಾಂಗ್ರೆಸ್ ಅಧ್ಯಕ್ಷರು

ಆರೋಪಕ್ಕೆ ಅಧ್ಯಕ್ಷರ ಸ್ಪಷ್ಟನೆ
ಒಂದು ಲೇ ಔಟ್ ನಗರಸಭೆಗೆ ವರ್ಗಾವಣೆ ಆಗಬೇಕಾದರೂ ಅದರೊಳಗೆ ಪಾರ್ಕ್ ಇದ್ದರೆ ಮಾತ್ರ ಅಪ್ರೂವಲ್ ಆಗುವುದು ಎಂಬುದು ಆರೋಪ ಮಾಡುವವರಿಗೆ ಗೊತ್ತಿರಲಿ. ನೆಲಪ್ಪಾಲಿನಲ್ಲಿರುವ ಪಾರ್ಕ್ ಲೇ ಔಟ್‌ನ ಹೊರಗಿದೆ. ಅಲ್ಲಿ ಕಾನೂನು ಬದ್ಧವಾಗಿಯೇ ಪಾರ್ಕ್ ನಿರ್ಮಾಣ ಮಾಡಲಾಗಿದೆ. 2020ರಲ್ಲೇ 40 ಸೆಂಟ್ಸ್ ಜಮೀನನ್ನು ಸಾರ್ವಜನಿಕ ಉದ್ಯಾನವನ ನಿರ್ಮಿಸುವ ಉದ್ದೇಶಕ್ಕಾಗಿ ನಗರಸಭೆಗೆ ಕಾದಿರಿಸಲಾಗಿದೆ. ಅದೇ ರೀತಿ ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಪಾರ್ಕ್‌ಗಳ ಅಭಿವೃದ್ಧಿ ಹಂತಹಂತವಾಗಿ ನಡೆಯುತ್ತದೆ. ಜೊತೆಗೆ ಕೂಡಾ ಸಾರ್ವಜನಿಕರು ಮತ್ತು ನಿವೃತ್ತ ನಾಗರಿಕರಿಗಾಗಿ ಸಂಜೆ ಹೊತ್ತು ವಿಶ್ರಾಂತಿ ಪಡೆಯಲು ಎಲ್ಲಾ ವಾರ್ಡ್‌ಗಳಲ್ಲಿ ಕನಿಷ್ಠ 10 ಸೆಂಟ್ಸ್ ಜಾಗ ಇದ್ದರೂ ಪಾರ್ಕ್ ನಿರ್ಮಾಣ ಮಾಡಲಾಗುವುದು. ಎಲ್ಲಾ ಪಾರ್ಕ್‌ಗಳನ್ನು ನಿರ್ವಹಣೆ ಮಾಡಲು ಮಾರ್ಚ್‌ನಲ್ಲಿ ಅಂದಾಜು ಪಟ್ಟಿ ತಯಾರಿಸಿ, ಟೆಂಡರ್‌ಗಾಗಿ ಕೌನ್ಸಿಲ್‌ನಲ್ಲಿ ಇಡಲಾಗುವುದು. ನಗರದ ಎಲ್ಲಾ ವಾರ್ಡ್‌ಗಳ ಅಭಿವೃದ್ಧಿಯನ್ನು ವಿಶೇಷ ಅಮೃತನಗರೋತ್ಥಾನ ಯೋಜನೆಯಲ್ಲಿ ಮಾಡಲಾಗುತ್ತದೆ
ಕೆ.ಜೀವಂಧರ್ ಜೈನ್ ಅಧ್ಯಕ್ಷರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here