ಕಡಬದಲ್ಲಿ ಶ್ರೀದೇವಿ ಅಪ್ಟಿಕಲ್ಸ್ ಶುಭಾರಂಭ

0

ಕಡಬ: ಇಲ್ಲಿನ ಶ್ರೀರಾಮ್ ಟವರ್‍ಸ್‌ನ ಮೊದಲನೆ ಮಹಡಿಯಲ್ಲಿ ಕಂಪ್ಯೂಟರೀಕೃತ ಐ ಚೆಕ್‌ಅಪ್ ಶ್ರೀ ದೇವಿ ಅಪ್ಟಿಕಲ್ಸ್ ನ.30ರಂದು ಶುಭಾರಂಭಗೊಂಡಿತು. ನೇತ್ರತಜ್ಞ ರಾಮ್ ಮೋಹನ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.


ಪ್ರಸಾದ್ ನೇತ್ರಾಲಯದ ಡಾ| ಅಂಜಲಿ, ಮಾರ್ಕೆಟಿಂಗ್ ವಿಭಾಗದ ನಿಶಿತ್ ಶೆಟ್ಟಿಯವರು ಮಾತನಾಡಿ ಕಣ್ಣಿನ ಚಿಕಿತ್ಸೆ ಹಾಗೂ ನೇತ್ರದಾನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶ್ರೀರಾಮ್ ಟವರ್‍ಸ್ ಮಾಲಕ ಶಿವರಾಮ ಶೆಟ್ಟಿ ಕೇಪು, ಸ್ವಸ್ತಿಕ್ ಜ್ಯುವೆಲ್ಲರ್‍ಸ್ ಮಾಲಕ ಸುರೇಶ್ ಆಚಾರ್ಯ,ವಾರಿಜ, ನಾಗೇಶ್ ಚಿಲಿಂಬಿ, ರಾಜಕೇಶರಿ ಸಂಸ್ಥಾಪಕ ದೀಪಕ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ| ರಾಮ್ ಮೋಹನ್ ರಾವ್ ಅವರನ್ನು ಶ್ರೀ ದೇವಿ ಅಪ್ಟಿಕಲ್ಸ್ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಮಾಲಕಿ ಮಂಜುಳ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here