ರಸ್ತೆ ಮಧ್ಯೆ ಬೈಕ್‌ಗೆ ಅಡ್ಡ ಬಂದ ನಾಯಿ; ಚಾಲಕನ ನಿಯಂತ್ರಣ ತಪ್ಪಿ ಬೈಕ್ ಪಲ್ಟಿ

0

ಪುತ್ತೂರು:ರಸ್ತೆ ಮಧ್ಯೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಸವಾರನ ನಿಯಂತ್ರಣ ತಪ್ಪಿ ಬೈಕೊಂದು ಪಲ್ಟಿಯಾದ ಘಟನೆ ಕಾವೇರಿಕಟ್ಟೆ ಸಮೀಪ ನಡೆದಿದೆ. ಘಟನೆಯಿಂದ ಬೈಕ್ ಸಹಸವಾರೆ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕೆಮ್ಮಿಂಜೆ ಗ್ರಾಮದ ಮಂಜುನಾಥ ಎಂಬವರ ಪತ್ನಿ ಮೀನಾಕ್ಷಿ(62ವ) ಗಾಯಗೊಂಡವರು. ಮೀನಾಕ್ಷಿ ಅವರು ಗಂಡ ಮಂಜುನಾಥ್ ಅವರೊಂದಿಗೆ ಬೈಕ್‌ನಲ್ಲಿ ಹಿಂಬದಿ ಸವಾರೆಯಾಗಿ ಪುತ್ತೂರು ಕಡೆಗೆ ಬರುತ್ತಿದ್ದ ವೇಳೆ ಕಾವೇರಿಕಟ್ಟೆ ಸಮೀಪ ರಸ್ತೆ ಮಧ್ಯೆ ಓಡಾಡಿದ ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಘಟನೆಯಿಂದ ಗಾಯಗೊಂಡ ಮೀನಾಕ್ಷಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here