





ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನೆಲ್ಯಾಡಿ ವಲಯದ ಅಧ್ಯಕ್ಷರಾಗಿ ಶಿರಾಡಿ ಗ್ರಾಮದ ಕಳಪ್ಪಾರು ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡರವರು ಆಯ್ಕೆಯಾಗಿದ್ದಾರೆ.



ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಸ್ಥಾನದ ಸಭಾಂಗಣದಲ್ಲಿ ನಡೆದ ಒಕ್ಕೂಟಗಳ ಅಧ್ಯಕ್ಷರ ಮತ್ತು ವಲಯದ ಸೆವಾಪ್ರತಿನಿಧಿಗಳ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಹಾರ್ಪಳ, ವಲಯದ ಮೇಲ್ವಿಚಾರಕ ವಿಜೇಶ್ ಜೈನ್, ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಉಪಸ್ಥಿತಿಯಲ್ಲಿ ಈ ಆಯ್ಕೆ ನಡೆಯಿತು. ವಲಯದ ಒಕ್ಕೂಟಗಳ ಅಧ್ಯಕ್ಷರಾದ ಜೋನ್ ಮೊಂತೆರೊ, ಸೆಬಾಸ್ಟಿಯನ್ ಪಿ.ಜೆ., ಬಾಲಕೃಷ್ಣ ಗೌಡ, ಮಾರ್ಸೆಲ್ ಡಿ.ಸೋಜ, ಸುಕುಮಾರ್ ಕೆ.ಆರ್., ಸನ್ನಿ ಕೆ.ಸಿ., ಲೋಕಯ್ಯ ಗೌಡ, ಕುಶಾಲಪ್ಪ ಗೌಡ, ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.







            






