ವಿಠ್ಠಲ್ ಜೇಸಿ ಶಾಲೆಯಲ್ಲಿ ನೂತನ ಸಭಾಭವನ ಉದ್ಘಾಟನೆ, ವಾರ್ಷಿಕೋತ್ಸವ

0

ವಿಟ್ಲ: ಇಲ್ಲಿನ ಬಸವನಗುಡಿಯಲ್ಲಿರುವ ವಿಠ್ಠಲ್ ಜೇಸಿಸ್ ಆಂಗ್ಲ ಮಧ್ಯಮ ಪ್ರೌಢ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸಭಾಭವನ ‘ಜೇಸಿ ಪೆವಿಲಿಯನ್’ ಡಿ. 9 ರಂದು ಅಪರಾಹ್ನ 3.30 ಕ್ಕೆ ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠoದೂರು, ಅಂಬಿಕಾ ಮಹಾವಿದ್ಯಾಲಯದ ಸಂಚಾಲಕ ಸುಬ್ರಮಣ್ಯ ನಟ್ಟೋಜ, ಜನಪ್ರಿಯ ಫೌಂಡೇಶನ್ ನ ಅಧ್ಯಕ್ಷ ಡಾ. ಬಷೀರ್ ಬಿ. ಕೆ., ಸಂತ ರೀಟಾ ಪ್ರೌಢ ಶಾಲಾ ಮುಖ್ಯಶಿಕ್ಷಕರಾದ ಫಾ. ಸುನಿಲ್ ಪ್ರವೀಣ್ ಪಿಂಟೋ ಹಾಗೂ ವಿಠ್ಠಲ್ ಜೇಸಿಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಲ್. ಯನ್. ಕೂಡೂರ್ ರವರು ಭಾಗವಹಿಸಲಿದ್ದಾರೆ. ಸುಮಾರು 1300 ವಿದ್ಯಾರ್ಥಿಗಳಿಗೆ ಕುಳಿತು ಕೊಳ್ಳಲು ಅವಕಾಶವಿರುವ ಸಭಾಂಗಣದ ಲೋಕಾರ್ಪಣೆಯ ಬಳಿಕ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ “ಶಿವಧೂತೆ ಗುಳಿಗೆ” ತುಳು ನಾಟಕ ಪ್ರದರ್ಶನ ಗೊಳ್ಳಲಿದೆ. 2022-23ನೇ ಸಾಲಿನ ಸಂಸ್ಥೆಯ ವಾರ್ಷಿಕೋತ್ಸವ ಡಿ. 11 ರಂದು ಅದೇ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎಲ್. ಯನ್. ಕೂಡೂರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here