ಡಿ.4ರಿಂದ ವಿಟ್ಲದ ಸಪ್ತ ಜ್ಯುವೆಲ್ಸ್ ನಲ್ಲಿ `ಸಪ್ತ ಸ್ವರ್ಣ ಸಂಭ್ರಮ’

0

ವಿಟ್ಲ: ಚಿನ್ನಾಭರಣ ಕ್ಷೇತ್ರದಲ್ಲಿ ಅತ್ಯಲ್ಪ ಅವಧಿಯಲ್ಲೇ ಗ್ರಾಮೀಣ ಭಾಗದ ಜನರ ಮನ ಗೆದ್ದ ಸಪ್ತ ವೆಂಚರ್ಸ್‌ನ ಅಧೀನದಲ್ಲಿರುವ, ವಿಟ್ಲ ಎಂಪಾಯರ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿರುವ ಸಪ್ತ ಜ್ಯುವೆಲ್ಸ್ ತನ್ನ ಆರನೇ ವರ್ಷದ ಪಾದಾರ್ಪಣೆ ಪ್ರಯುಕ್ತ ವಿಟ್ಲ ಶಾಖೆಯಲ್ಲಿ ‘ಸಪ್ತ ಸ್ವರ್ಣ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಈ ಕಾರ್ಯಕ್ರಮಕ್ಕೆ ಡಿ.೪ರಂದು ವೇದಮೂರ್ತಿ ಪರಕ್ಕಜೆ ಗಣಪತಿ ಭಟ್‌ರವರು ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕೆದಿಲ ಶ್ರೀ ಉಳ್ಳಾಕಲು ದೂಮಾವಾತಿ ಮಲರಾಯ ದೈವಸ್ಥಾನದ ಅಧ್ಯಕ್ಷರಾದ ಜತ್ತನಕೋಡಿ ಕೃಷ್ಣ ಭಟ್‌ರವರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ.

ಸಪ್ತ ಸ್ವರ್ಣ ಸಂಭ್ರಮದ’ ವಿಶೇಷತೆಗಳು: ಸಂಸ್ಥೆ ಆರನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂತಸದ ಕ್ಷಣವನ್ನು ತನ್ನ ಗ್ರಾಹಕರೊಂದಿಗೆ ಹಂಚಿಕೊಳ್ಳಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಡಿ.೪ರಂದು ‘ಸಪ್ತ ಸ್ವರ್ಣ ಸಂಭ್ರಮ’ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಚಿನ್ನಾಭರಣ ಖರೀದಿ ಮಾಡಿದಲ್ಲಿ ವಿಶೇಷ ರಿಯಾಯಿತಿ ಯೊಂದಿಗೆ ಕೊಡುಗೆಗಳು ದೊರೆಯಲಿದೆ.

ಸಪ್ತ ಸ್ವರ್ಣ ಸಂಭ್ರಮದ ಕೊಡುಗೆಗಳು: `ಸಪ್ತ ಸ್ವರ್ಣ ಸಂಭ್ರಮ’ದ ಪ್ರಯುಕ್ತ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಖರೀದಿಸಿದಲ್ಲಿ ವಿಶೇಷ ರಿಯಾಯಿತಿಯನ್ನು ಹಾಗೂ ಕೊಡುಗೆಗಳನ್ನು ನೀಡಲಿದೆ. ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂ.ಗೆ ೭೫ರೂಪಾಯಿ ಕಡಿತ. ಆಭರಣಗಳ ಮುಂಗಡ ಆರ್ಡರ್ ನಲ್ಲಿ ವಿಶೇಷ ರಿಯಾಯಿತಿ ದೊರೆಯಲಿದೆ. ಬೆಳ್ಳಿಯ ಆಭರಣ ಮೇಲೆ ೧೦% ಹಾಗೂ ಬೆಳ್ಳಿಯ ಪರಿಕರಗಳ ಮೇಲೆ ೫% ವರೆಗೆ ರಿಯಾಯಿತಿ ದೊರೆಯಲಿದೆ. ರತ್ನದ ಹರಳು(ಬರ್ತ್ ಸ್ಟೋನ್)ಗಳ ಮೇಲೆ ೧೦% ರಿಯಾಯಿತಿ ದೊರೆಯಲಿದೆ.

`ಸಪ್ತ ಅಕ್ಷಯ’ ಆಭರಣ ಖರೀದಿ ಯೋಜನೆ: ಇದು ಗ್ರಾಹಕರಿಗೆ ಉಪಕಾರಿಯಾಗಿರುವ ಒಂದು ಯೋಜನೆಯಾಗಿದೆ. ಗ್ರಾಹಕರು ಪ್ರತಿ ತಿಂಗಳು ತಮ್ಮ ಆದಾಯದಲ್ಲಿನ ಸಣ್ಣಮೊತ್ತವನ್ನು ವಿನಿಯೋಗಿಸಿ, ಪ್ರತಿ ವರುಷ ಬಂಗಾರವನ್ನು ಖರೀದಿಸುವ ಒಂದು ಉತ್ತಮ ಯೋಜನೆಯಾಗಿದೆ. ಹನ್ನೊಂದು ತಿಂಗಳ ಯೋಜನೆ ಇದಾಗಿದ್ದು, ಪ್ರತೀ ತಿಂಗಳು ೫೦೦ ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬೇಕಾದರೂ ಪಾವತಿಸಬಹುದಾಗಿದೆ. ಆ ಮೊತ್ತದ ಚಿನ್ನಾಭರಣವನ್ನು ತಮ್ಮ ಅಕೌಂಟಿನಲ್ಲಿ ಜಮೆ ಮಾಡಲಾಗುತ್ತದೆ. ತಾವು ಪಾವತಿಸಿದ ಮೊತ್ತಕ್ಕೆ ಕೊನೆಯಲ್ಲಿ ಆವರ್ತನಾ ಪದ್ಧತಿಯಲ್ಲಿ ಬೋನಸ್ ಲಭಿಸಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

  • ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ ಗೆ ೭೫ ರೂಪಾಯಿ ಕಡಿತ
  • ಆಭರಣಗಳ ಮುಂಗಡ ಆರ್ಡರ್ ನಲ್ಲಿ ಡಿಸ್ಕೌಂಟ್
  • ಬೆಳ್ಳಿಯ ಆಭರಣಗಳ ಮೇಲೆ ೧೦% ಡಿಸ್ಕೌಂಟ್
  • ಬೆಳ್ಳಿಯ ಪರಿಕರಗಳ ಮೇಲೆ ೫% ಡಿಸ್ಕೌಂಟ್
  • ಬರ್ತ್ ಸ್ಟೋನ್ ಗಳ ಮೇಲೆ ೧೦% ಡಿಸ್ಕೌಂಟ್
  • ಸಪ್ತ ಅಕ್ಷಯ ಆಭರಣ
  • ಖರೀದಿ ಯೋಜನೆ

ಸಪ್ತ ಜ್ಯುವೆಲ್ಸ್‌ನ ವಿಶೇಷತೆಗಳು
ಉತ್ಕೃಷ್ಟ ಆಭರಣಗಳು ವಿಶ್ವಾಸನೀಯ ಬೆಲೆಯಲ್ಲಿ ದೊರೆಯುವ ಸಂಸ್ಥೆ ಇದಾಗಿದೆ. ಗ್ರಾಹಕರ ಆಭರಣಗಳ ವಿನ್ಯಾಸದ ಆಯ್ಕೆಗೆ ವಿಶೇಷ ಸಹಕಾರವನ್ನು ನೀಡಲಾಗುತ್ತಿದೆ ಮಾತ್ರವಲ್ಲದೆ ಪ್ರತಿಯೊಂದೂ ಆಭರಣಗಳ ತಯಾರಿಕೆಯ ಸಂದರ್ಭದಲ್ಲಿ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ. ಎಲ್ಲಾ ವರ್ಗದ ಹಾಗೂ ಎಲ್ಲಾ ಪೀಳಿಗೆಯ ಜನರ ಮನಸ್ಸಿಗೆ ಒಪ್ಪುವಂತಹ ಆಭರಣಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಇದೊಂದು ೯೧೬ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳ ಮಾರಾಟ ಮಳಿಗೆಯಾಗಿದೆ. ದೈವದ ವಿವಿಧ ಬಗೆಯ ಬೆಳ್ಳಿಯ ಅಭರಣಗಳು ಇಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here