ಕಬಕ – ಪಡ್ನೂರು ನವೋದಯ ಸ್ವ-ಸಹಾಯ ಗುಂಪುಗಳ ಒಕ್ಕೂಟದ ಕ್ರೀಡಾಕೂಟ

0

ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಉನ್ನತ ಸ್ಥಾನಕ್ಕೇರಬೇಕು: ಈಶ್ವರ ಭಟ್ ಪಂಜಿಗುಡ್ಡೆ

ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸುವ ಕೆಲಸ ಮಹಿಳೆಯರಿಂದ ಆಗಬೇಕು: ವಿನಯಕುಮಾರ್ ಕಲ್ಲೇಗ

ಪುತ್ತೂರು: ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ.)ಮಂಗಳೂರು, ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್‌, ಇದರ ಸಹಭಾಗಿತ್ವದಲ್ಲಿ ಕಬಕ, ಪಡ್ನೂರು ನವೋದಯ ಸ್ವ-ಸಹಾಯ ಗುಂಪುಗಳ ಒಕ್ಕೂಟದ ಕ್ರೀಡಾಕೂಟವೂ ಡಿ.೪ರಂದು ಕಬಕ ಹಿ.ಪ್ರಾ ಶಾಲಾ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಬಕ ಹಿ.ಪ್ರಾ. ಶಾಲಾ ಪ್ರಭಾರ ಮುಖ್ಯಗುರುಗಳಾದ ಲತಾ ಕುಮಾರಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ವನಿತಾ ಧರಣ್‌ ರವರು ಉದ್ಘಾಟಿಸಿದರು.

ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್‌ ನ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಉನ್ನತ ಸ್ಥಾನಕ್ಕೇರಬೇಕು. ನಿಮ್ಮ ಬೆನ್ನ ಹಿಂದೆ ಯಾವತ್ತು ಬನ್ನೂರು ರೈತರ ಸೇಹಾ ಸಹಕಾರಿ ಬ್ಯಾಂಕ್ ಇದೆ. ಸಹಕಾರಿ ಸಂಘಗಳಿಂದ ನಿಮಗೆ ಬಹಳಷ್ಟು ಲಾಭವಿದೆ. ಮಹಿಳೆಯರ ಉನ್ನತಿಗೆ ಇಂತಹ ಸ್ವಸಹಾಯ ಸಂಘಗಳ ಪಾತ್ರ ಬಹಳಷ್ಟಿದೆ. ಮಹಿಳೆಯರನ್ನು ಸಬಲೆಯರನ್ನಾಗಿ ಮಾಡುವಲ್ಲಿ ಇಂತಹ ಸಂಘಗಳ ಪಾತ್ರ ಮಹತ್ವದ್ದು. ತಾಲೂಕು ಮಟ್ಟದಲ್ಲಿ ಈ ಒಂದು ಕಾರ್ಯಕ್ರಮ ನಡೆಸುವ ಬಗ್ಗೆ ಆಲೋಚನೆ ಮಾಡುತ್ತೇನೆ ಎಂದರು.

ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಯಕುಮಾರ್ ಕಲ್ಲೇಗ ರವರು ಮಾತನಾಡಿ ಮಹಿಳೆಯರನ್ನು ಮುಂದಕ್ಕೆ ತರುವ ಕೆಲಸ ನಿರಂತರವಾಗಿ ಸರಕಾರದಿಂದ ಆಗುತ್ತಿದೆ‌. ಸರಕಾರ ನೀಡುವ ಯೋಜನೆಗಳನ್ನು ಸದುಪಯೋಗ ಪಡಿಸುವ ಕೆಲಸ ನಿಮ್ಮೆಲ್ಲರಿಂದ ಆಗಬೇಕಿದೆ. ಒಗ್ಗಟ್ಟಿನಿಂದ ಕೆಲಸ ಮಾಡುವ ಮನಸ್ಸು ನಿಮ್ಮದಾಗಬೇಕು. ಮನೆಯಿಂದ ಹೊರಬಂದು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಎಂದರು.


ಕಬಕ ಗ್ರಾ.ಪಂ. ಸದಸ್ಯರಾದ ಶಾಬಾ ಕಬಕ, ಕಬಕ ಹಿ.ಪ್ರಾ. ಶಾಲಾ ದೈಹಿಕ ಶಿಕ್ಷಕರಾದ ಪ್ರವಿತ, ಪಡ್ನೂರು ವಲಯ ಅಧ್ಯಕ್ಷೆ ಚಂದ್ರಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಿಳಾ ಸಾಧಕಿಯರಾದ ವಸಂತಿ, ಪುಷ್ಪ ಕಲ್ಲುಗುಂಡಿ, ಗಂಗಮ್ಮ ರವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಒಕ್ಕೂಟದ ಸದಸ್ಯರಿಗೆ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಮಾಲತಿ, ಬಾಸ್ಕರ , ಬಾಲಕೃಷ್ಣ ಅಡ್ಯಾಲು, ಮನೋಹರ್, ಸುರೇಶ್ ಗುರುಜ್ಯೋತಿ ಅತಿಥಿಗಳಿಗೆ ಹೂನೀಡಿ ಗೌರವಿಸಿದರು. ನವೋದಯ ಗ್ರಾಮವಿಕಾಸ ಚಾರಿಟೇಬಲ್‌ ಟ್ರಸ್ಟ್ (ರಿ.) ಮಂಗಳೂರು ಇದರ ಪುತ್ತೂರು/ಕಡಬ ತಾಲೂಕು ಮೇಲ್ವಿಚಾರಕರಾದ ಚಂದ್ರಶೇಖರ್ ಬನ್ನೂರು ಸ್ವಾಗತಿಸಿದರು.


ಕಬಕ ಒಕ್ಕೂಟದ ಮಾಜಿ ಅಧ್ಯಕ್ಷರಾದ ಮೋಹನ್ ಗುರ್ಜಿನಡ್ಕರವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿದರು. ಕಬಕ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಶ್ರೀಶಾಂತಿ ಬಹುಮಾನಿತರ ಪಟ್ಟಿವಾಚಿಸಿ, ವಂದಿಸಿದರು.
ಕಬಕ ಒಕ್ಕೂಟದ ಕಜಾಂಜಿ ಬಾಸ್ಕರ ಮುಂಗ್ಳಿಮನೆ, ಹರೀಶ್ ಶೆಟ್ಟಿ, ಕಬಕ – ಪಡ್ನೂರು ವಲಯ ಒಕ್ಕೂಟ ಪ್ರೇರಕಿ ಮಾಲತಿ, ಕಸಬ ವಲಯ ಪ್ರೇರಕಿ ಗೀತಾ, ಬನ್ನೂರು ವಲಯ ಪ್ರೇರಕಿ ಮಮತ ಸಹಕರಿಸಿದರು.

LEAVE A REPLY

Please enter your comment!
Please enter your name here