ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ರೆಡ್‌ಕ್ರಾಸ್ ಘಟಕ ಉದ್ಘಾಟನೆ

0

ರೆಡ್‌ಕ್ರಾಸ್ ಸಂಸ್ಥೆ ಪ್ರಪಂಚದಾದ್ಯಂತ ಹರಡಿಕೊಂಡಿರುವ ಜೀವ ಸಂರಕ್ಷಕ ವ್ಯವಸ್ಥೆ-ಡಾ.ಅನುರಾಧ ಕುರುಂಜಿ

ಪುತ್ತೂರು: ರೆಡ್‌ಕ್ರಾಸ್ ಸಂಸ್ಥೆ ಕೇವಲ ರಕ್ತ ನೀಡಲು ಸೀಮಿತಗೊಂಡ ಸಂಸ್ಥೆ ಅಲ್ಲ. ಇದು ಪ್ರಪಂಚದಾದ್ಯಂತ ಹರಡಿಕೊಂಡಿರುವ ಜೀವ ಸಂರಕ್ಷಕ ವ್ಯವಸ್ಥೆ. ಇಲ್ಲಿ ಜಾತಿ, ವಿಭಾಗ, ಬೇಧ ಭಾವಗಳಿಗೆ ಜಾಗವಿಲ್ಲ. ಮಾನವೀಯತೆ, ನಿಷ್ಪಕ್ಷಪಾತ ಸ್ವಯಂ ಸೇವೆ, ಇದರ ಮೂಲ ತತ್ವವಾಗಿದೆ, ಶುಭ್ರ ಬಿಳಿ ಹಾಳೆಯಂತಿರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಾಮಾಜಿಕ ಚಿತ್ತಾರಗಳನ್ನು ಉಣ ಬಡಿಸುವ ಪ್ರಕ್ರಿಯೆಯ ಭಾಗವಾಗಿ ಇಂದು ಕಾಲೇಜುಗಳಲ್ಲಿ ಇದರ ಘಟಕಗಳನ್ನು ತೆರೆಯಲಾಗುತ್ತಿದ್ದು ತುರ್ತು ಸಂದರ್ಭಗಳಲ್ಲಿ ಇದರ ಕಾರ್ಯಚಟುವಟಿಕೆಗಳು ಜೀವರಕ್ಷಕ ಸಾಧಕವಾಗಿ ಫಲ ನೀಡಲಿದೆ ಎಂದು ರೆಡ್‌ಕ್ರಾಸ್ ಸಂಸ್ಥೆಯ ಸುಳ್ಯ ವಿಭಾಗದ ಪ್ರಮುಖರಾದ ಡಾ.ಅನುರಾಧ ಕುರುಂಜಿ ಹೇಳಿದರು. ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ವಿಭಾಗದಲ್ಲಿ ಜೂನಿಯರ್ ರೆಡ್‌ಕ್ರಾಸ್ ಸಂಸ್ಥೆಯ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಸಂಧ್ಯಾ ಪಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕೋಶಾಧಿಕಾರಿ ಕೆ.ಬಿ ಖಾಸಿಂ ಹಾಜಿ ಶುಭ ಹಾರೈಸಿದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಶೀದ್ ಸಂಪ್ಯ ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಮರ್ಕಝುಲ್ ಹುದಾ ಸಂಸ್ಥೆಯ ಉಸ್ತುವಾರಿ, ಉಪನ್ಯಾಸಕಿ ಸೌಮ್ಯ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಕವಿತ ಸ್ವಾಗತಿಸಿದರು. ಕಮಲ ವಂದಿಸಿದರು.

LEAVE A REPLY

Please enter your comment!
Please enter your name here