ಡಿ.9:ಪಾಂಗ್ಲಾಯಿ ಬೆಥನಿ ಪ್ರೌಢಶಾಲಾ ವಾರ್ಷಿಕೋತ್ಸವ

0

ಪುತ್ತೂರು: ದರ್ಬೆ-ಪಾಂಗ್ಲಾಯಿ ಇಲ್ಲಿನ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವವು ಡಿ.೯ ರಂದು ಶಾಲಾ ವಠಾರದಲ್ಲಿ ಜರಗಲಿದೆ.

ಬೆಳಿಗ್ಗೆ ಬಹುಮಾನ ವಿತರಣಾ ಕಾರ್ಯಕ್ರಮ ಜರಗಲಿದ್ದು, ಈ ಕಾರ್ಯಕ್ರಮದಲ್ಲಿ ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕಿ ಸಿಸ್ಟರ್ ಪ್ರಶಾಂತಿ ಬಿ.ಎಸ್‌ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಪ್ರಧಾನ ಅಂಚೆ ಕಛೇರಿಯ ಸಹಾಯಕ ಪೋಸ್ಟ್ ಮಾಸ್ಟರ್ ಶಿವಕುಮಾರ್ ಕೆ., ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಆಶಾ ನಾಯಕ್ ಹಾಗೂ ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷ ಪ್ರೊ|ಎಡ್ವಿನ್ ಡಿ’ಸೋಜರವರು ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರೊಕ್ಯೂರೇಟರ್ ಸಿಸ್ಟರ್ ಫ್ಲಾವಿಯಾ ವಿಲ್ಮಾ ಬಿ.ಎಸ್‌ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಟಿ.ಬಿ ಆಫೀಸರ್ ಡಾ.ಬದ್ರುದ್ದೀನ್ ಎಂ.ಎನ್, ಮಂಗಳೂರು ಕಾಪಿಕಾಡ್ ಮುಕುಂದ್ ಎಂಜಿಎಂ ರಿಯಾಲ್ಟಿ ಇದರ ಪ್ರೋಸೆಸಸ್ ಮತ್ತು ಐಟಿ ಮ್ಯಾನೇಜರ್ ಶ್ರವಣ್ ಕುಮಾರ್ ಶೆಟ್ಟಿ ಎನ್(ಶಾಲಾ ಹಿರಿಯ ವಿದ್ಯಾರ್ಥಿ)ರವರು ಭಾಗವಹಿಸಲಿದ್ದಾರೆ ಎಂದು ಶಾಲಾ ಸಂಚಾಲಕಿ ಸಿಸ್ಟರ್ ಪ್ರಶಾಂತಿ ಬಿ.ಎಸ್, ಮುಖ್ಯ ಶಿಕ್ಷಕಿ ಸಿಸ್ಟರ್ ಆಗ್ನೇಸ್ ಶಾಂತಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಆಶಾ ನಾಯಕ್, ಶಾಲಾ ನಾಯಕರಾದ ಅಮ್ರ ಫಾತಿಮ, ಎರೋಲ್ ಶಮನ್ ಡಿ’ಸೋಜರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here