ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಮೇಲೆ ಬರಬೇಕು: ರೇಷ್ಮಾ ಶಂಕರಿ
ವಿಟ್ಲ: ವಿಟ್ಲಪಡ್ನೂರು ಗ್ರಾಮ ಪಂಚಾಯತ್ ನಲ್ಲಿನರೇಗಾ ಯೋಜನೆಯಡಿ ಮಹಿಳಾ ಸಬಲೀಕರಣ ಅಭಿಯಾನ ಮತ್ತು ಮಹಿಳಾ ವಿಶೇಷ ಗ್ರಾಮಸಭೆಯು ನೋಡಲ್ ಅಧಿಕಾರಿಯಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರೇಣುಕಾ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಷ್ಮಾ ಶಂಕರಿ ರವರ ನೇತೃತ್ವದಲ್ಲಿ ನಡೆಯಿತು.
ನರೇಗಾ ಯೋಜನೆ ತಾಲೂಕು ಐಇಸಿ ಸಂಯೋಜಕರಾದ ರಾಜೇಶ್, ಮಹಿಳಾ ಸಾಂತ್ವನ ಕೇಂದ್ರ ವಿದ್ಯಾ, ಜನಶಿಕ್ಷಣ ಟ್ರಸ್ಟ್ ನ ಚೇತನಕುಮಾರ್ ರವರುಗಳು ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಷ್ಮಾ ಶಂಕರಿ ರವರು ಮಾತನಾಡಿ ಮಹಿಳೆಯರು ಕುಟುಂಬದ ಆಧಾರ ಸ್ಥಂಭ ವಾಗಿದ್ದು ಪ್ರತಿ ಕ್ಷೇತ್ರದಲ್ಲಿಯೂ ಅವರು ಅಭಿವೃದ್ಧಿ ಸಾಧಿಸಬೇಕು ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮಲತಾ, ಸಂದೇಶ್ ಶೆಟ್ಟಿ, ಅಮಿತ, ರೇಖಾ, ಹರ್ಷದ್, ಜಯಲಕ್ಷ್ಮಿ, ನೆಬಿಸ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಜಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಶೈಲ ರವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮಲತಾ ವಂದಿಸಿದರು.