ಡಿ.10,11: ಫಿಲೋಮಿನಾದಲ್ಲಿ ಕೂರ್ನಡ್ಕ ಪ್ರೀಮಿಯರ್ ಲೀಗ್-ಸೀಸನ್ 3 ಕ್ರಿಕೆಟ್ ಟೂರ್ನಮೆಂಟ್

0

ಪುತ್ತೂರು: ರೆಣಿಗೇಡ್ಸ್ ಕೂರ್ನಡ್ಕ ಇವರ ಸಾರಥ್ಯದಲ್ಲಿ ಕೂರ್ನಡ್ಕ ವ್ಯಾಪ್ತಿಯ ಕ್ರಿಕೆಟ್ ಪಟುಗಳನ್ನೊಳಗೊಂಡ ಲೀಗ್ ಮಾದರಿಯ ‘ಕೂರ್ನಡ್ಕ ಪ್ರೀಮಿಯರ್ ಲೀಗ್-ಸೀಸನ್ 3 ಓವರ್ ಆರ್ಮ್ ನಿಗದಿತ ಓವರ್ ಗಳ ಕ್ರಿಕೆಟ್ ಟೂರ್ನಮೆಂಟ್ ಡಿ.10 ಹಾಗೂ 11 ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಲಿದೆ.

ಅತಿಥಿಗಳಾಗಿ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಪ್ರಸಾದ್ ಇಂಡಸ್ಟ್ರೀಸ್ ನ ಶಿವಪ್ರಸಾದ್ ಶೆಟ್ಟಿ, ತೌಸಿರ್ ಅಹಮದ್ ಝುಬೈಲ್ ಕೆ.ಎಸ್.ಎ, ರೋಶನ್ ರೆಬೆಲ್ಲೋ ಪುತ್ತೂರು, ಈಸ್ಟರ್ನ್ ಗ್ರೂಪ್ ನ ಖಲಂದರ್ ದಮಾಮ್ ಕೆ.ಎಸ್.ಎ, ನಗರಸಭಾ ಸದಸ್ಯರಾದ ಯೂಸುಫ್ ಡ್ರೀಮ್ಸ್ ಹಾಗೂ ಬಾಲಚಂದ್ರ ಕೆ, ಖಲಂದರ್ ಅಝರ್ ಟ್ರಾನ್ಸ್ ಪೋರ್ಟ್ ಪುತ್ತೂರು, ರವಿ ಕೊಠಾರಿ ಪುತ್ತೂರು, ಕೂರ್ನಡ್ಕ ಎಸ್.ಡಿ.ಪಿ.ಐ ಅಧ್ಯಕ್ಷ ಯಾಹ್ಯಾ ಕೆ.ಎಚ್, ಪುತ್ತೂರು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್ಶದ್ ದರ್ಬೆ, ಅಶ್ರಫ್ ಯು.ಕೆ ದುಬೈ, ಅಭಿರಾಮ್ ಫ್ರೆಂಡ್ಸ್ ನ ಶರತ್ ಕೇಪುಳು, ಜಬ್ಬಾರ್ ಏಷಿಯನ್ ವುಡ್ಸ್ ಪುತ್ತೂರು, ಕಲರ್ಸ್ ಕನ್ನಡ ಪ್ರಶಸ್ತಿ ವಿಜೇತ ಮಾಧವ ಪ್ರಭು ಕೂರ್ನಡ್ಕರವರು ಭಾಗವಹಿಸಲಿದ್ದಾರೆ ಎಂದು ರೆಣಿಗೇಡ್ಸ್ ಕೂರ್ನಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಲರ್ಸ್ ಕನ್ನಡ ಪ್ರಶಸ್ತಿ ವಿಜೇತ ಮಾಧವ ಪ್ರಭು ಕೂರ್ನಡ್ಕ, ನಗರಸಭಾ ಸದಸ್ಯರಾದಯೂಸುಫ್ ಡ್ರೀಮ್ಸ್, ಬಾಲಚಂದ್ರ ಕೆ, ಲಿಟ್ಲ್ ಫ್ಲವರ್ ಶಾಲೆಯ ನಿವೃತ್ತ ಶಿಕ್ಷಕಿ ಐರಿಷ್ ರೆಬೆಲ್ಲೋ,ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿರವರುಗಳನ್ನು ಗುರುತಿಸಿಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

6 ತಂಡಗಳು…
ರೆಣಿಗೇಡ್ಸ್ ಕೂರ್ನಡ್ಕ
ಮೆರಿಟ್ ಲೈನ್ ಚಾಲೆಂಜರ್ಸ್
ವ್ಯಾಂಡಲ್ಸ್
ಟೀಮ್ ಎಫ್-ತ್ರೀ ಕ್ಲಬ್
ಗ್ಲ್ಯಾಡಿಯೇಟರ್ಸ್
ಟೈಟಾನ್ಸ್

LEAVE A REPLY

Please enter your comment!
Please enter your name here