ಆಟದ ಮೈದಾನಕ್ಕಾಗಿ ಮನವಿ

0

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮಕ್ಕೆ ಸಮರ್ಪಕವಾದ ಆಟದ ಮೈದಾನವಿಲ್ಲ. ಆದ್ದರಿಂದ ಪೇಟೆಯ ಆಸುಪಾಸಿನಲ್ಲಿ ಸರಕಾರದ ಮುಖಾಂತರ ನೆಕ್ಕಿಲಾಡಿ ಪಂಚಾಯತ್ ಆಟದ ಮೈದಾನವೊಂದನ್ನು ವ್ಯವಸ್ಥೆಗೊಳಿಸಬೇಕು ಎಂದು ನಾಗರಿಕ ಅಭಿವೃದ್ಧಿ ಸಮಿತಿಯು ಗ್ರಾ.ಪಂ. ಮೂಲಕ ಕ್ರೀಡಾ ಸಚಿವರಿಗೆ, ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ನೀಡಿದೆ.


ಯುವಶಕ್ತಿಯೆಂಬುದು ಒಂದು ಊರನ್ನು ಮುನ್ನೆಡೆಸುವ ಶಕ್ತಿ. ಸರಿಯಾಗಿ ಅವರನ್ನು ಬೆಳೆಸದಿದ್ದರೆ ಆ ಊರಿಗೆ ಕಳಂಕ ಬರುತ್ತದೆ. ಅವರ ಉತ್ತಮ ಬೆಳವಣಿಗೆಗೆ ಕ್ರೀಡೆ ಅತೀ ಅಗತ್ಯ. ಅದು ಸಮಾಜದಲ್ಲಿ ಕೂಡಾ ಆರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಇದಕ್ಕೆ ಸಮರ್ಪಕ ಅವಕಾಶಗಳು ದೊರೆಯದಿದ್ದಲ್ಲಿ ಮಾದಕ ವ್ಯಸನ, ಮೊಬೈಲ್ ಗೀಳು ಮುಂತಾದ ಚಟಗಳಿಗೆ ಯುವಶಕ್ತಿ ಬಲಿಯಾಗಬಹುದು. ಗ್ರಾ.ಪಂ. ಕಾಯ್ದೆಯ ಪ್ರಕಾರ ಗ್ರಾ.ಪಂ. ಮುಖಾಂತರ ಗ್ರಾಮಕ್ಕೊಂದು ಆಟದ ಮೈದಾನವನ್ನು ನಿರ್ಮಿಸಿ ಕೊಡುವುದು ಸರಕಾರದ ಕೆಲಸ. ಆದ್ದರಿಂದ ಸರಕಾರ ಕೂಡಲೇ ಈ ಬಗ್ಗೆ ಗಮನಹರಿಸಿ, ನೆಕ್ಕಿಲಾಡಿ ಪೇಟೆಯಲ್ಲೊಂದು ಆಟದ ಮೈದಾನವನ್ನು ವ್ಯವಸ್ಥೆಗೊಳಿಸಬೇಕೆಂದು ನಾಗರಿಕ ಅಭಿವೃದ್ಧಿ ಸಮಿತಿಯು ಮನವಿಯಲ್ಲಿ ಆಗ್ರಹಿಸಿದೆ.

ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ಹಾಗೂ ಪ್ರಭಾರ ಪಿಡಿಒ ಸತೀಶ್ ಬಂಗೇರ ಅವರಿಗೆ ಮನವಿ ನೀಡಲಾಗಿದ್ದು, ನಿಯೋಗದಲ್ಲಿ ನಾಗರಿಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್ ಹಾಗೂ ಸದಸ್ಯ ಖಲಂದರ್ ಶಾಫಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here