ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ ಡೊನ್ ಬೊಸ್ಕೊ ಕ್ಲಬ್ ವತಿಯಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಅಂತರ್-ವಾಳೆ ಸ್ಪರ್ಧಾಕೂಟವು ದ.11 ರಂದು ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಜರಗಿತು.
ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕ್ಲಬ್ ಪ್ರಥಮ ಬಾರಿಗೆ ವಾಳೆವಾರು ಈ ಸ್ಪರ್ಧಾಕೂಟವನ್ನು ಆಯೋಜಿಸಿದೆ. ಡೊನ್ ಬೊಸ್ಕೊ ಕ್ಲಬ್ ಸಮುದಾಯದ ಏಳಿಗೆಗೆ ಉತ್ತಮ ಸೇವಾ ಕಾರ್ಯವನ್ನು ಹಮ್ಮಿಕೊಂಡು ಪ್ರಶಂಸೆಗೆ ಪಾತ್ರವಾಗಿದೆ. ಸ್ಪರ್ಧೆಯ ಹೆಸರೇ ಸೂಚಿಸುವಂತೆ ಯಾವ ವಾಳೆಯಲ್ಲಿ ಒಗ್ಗಟ್ಟು ಇದೆಯೋ ಆ ವಾಳೆ ಜಯಶಾಲಿ ಎನಿಸುತ್ತದೆ. ಸ್ಪರ್ಧಿಗಳು ಪ್ರೀತಿಯಿಂದ ಹಾಗೂ ಕ್ರೀಡಾಸ್ಫೂರ್ತಿಯಿಂದ ಆಡಬೇಕು. ಸಣ್ಣ ಪ್ರಾಯದಿಂದ ಹಿರಿಯರ ತನಕ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಇದ್ದು ಮನರಂಜನೆ ಒದಗಿಸಲಿದೆ ಎಂದರು.
ಅತಿಥಿ, ಹಿರಿಯ ನಿವೃತ್ತ ಉಪನ್ಯಾಸಕ, ಪಾವ್ಲ್ ಮಸ್ಕರೇನ್ಹಸ್ ಪರ್ಲಡ್ಕ ಮಾತನಾಡಿ, ಯುವಶಕ್ತಿಯನ್ನು ಬಲಿಷ್ಟಗೊಳಿಸಿ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಈ ವಾಳೆಯ ಒಗ್ಗಟ್ಟು ಎಂಬ ಸ್ಪರ್ಧೆಯು ಕಾರಣವಾಗುತ್ತದೆ. ಸ್ಪರ್ಧೆಯಿಂದ ಒಗ್ಗಟ್ಟು ವೃದ್ಧಿಸುತ್ತದೆ, ಆರೋಗ್ಯ ಸುಧಾರಿಸುತ್ತದೆ, ಪ್ರೀತಿ ಹೆಚ್ಚುತ್ತದೆ. ಕ್ರಿಸ್ಮಸ್ ಹಬ್ಬ ಎಂದರೆ ಬಾಳಿನಲ್ಲಿ ಬೆಳಕನ್ನು ಸೂಸುವ ಹಬ್ಬವಾದ್ದರಿಂದ ಪ್ರತಿಭೆ ಎಲ್ಲರಲ್ಲೂ ಇದೆ, ಅದನ್ನು ಬೆಳಕಿಗೆ ತರುವಲ್ಲಿ ನಾವು ಪ್ರಯತ್ನ ಪಡಬೇಕು ಎಂದರು.
ಉದ್ಯಮಿ, ಸೋಜಾ ಮೆಟಲ್ ಮಾರ್ಟ್ ನ ಮಾಲಕ ದೀಪಕ್ ಮಿನೇಜಸ್, ಡೊನ್ ಬೊಸ್ಕೊ ಕ್ಲಬ್ ನ ಕಾರ್ಯದರ್ಶಿ ಹಾಗೂ ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ನಿಯೋಜಿತ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸಿಲ್ವೆಸ್ತರ್ ಗೊನ್ಸಾಲ್ವಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್ ಸ್ವಾಗತಿಸಿ, ಸದಸ್ಯ ಪ್ರಕಾಶ್ ಸಿಕ್ವೇರಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಗಳು…
1-3ನೇ ತರಗತಿ-ಗೋಲಿ ಹೆಕ್ಕುವುದು
4-7ನೇ ತರಗತಿ-ಸ್ಪೂನಿನಲ್ಲಿ ಲಿಂಬೆ ಇಟ್ಟು ಓಡುವುದು
8-10ನೇ ತರಗತಿ:ಗೋಣಿ ಓಟ
18-35 ಪ್ರಾಯದವರಿಗೆ-ಬಂಡಿ ಓಡಿಸುವುದು
36-50 ಪ್ರಾಯದವರಿಗೆ-ನೀರಿನ ಗ್ಲಾಸ್ ಹಿಡಿದು ಓಡುವುದು
51 ಪ್ರಾಯದ ಮೇಲ್ಪಟ್ಟು-ನೀರಿನ ಬಲೂನ್ ಹೊಡೆಯುವುದು
ಮದುವೆ ಜೋಡಿಗಳಿಗೆ ಸ್ಪರ್ಧೆ:
ಗಂಡ ಹೆಂಡತಿಯನ್ನು ಅಥವಾ ಹೆಂಡತಿ ಗಂಡನನ್ನು ಎತ್ತಿಕೊಂಡು ಓಡುವುದು
ಸಮೂಹ ಸ್ಪರ್ಧೆ..
-ನೀರು ತುಂಬಿಸುವುದು
-ಮರದ ಹುಡಿ ವಿನಿಮಯ ಮಾಡುವುದು
-ಹಗ್ಗ-ಜಗ್ಗಾಟ
-ರಿಲೇ ಓಟ
-ಲಾರಿ ಎಳೆಯುವುದು
-ತೆಂಗಿನ ಗರಿ(ಮಡಲ್) ಎಳೆಯುವುದು
-ಹಿಡಿಸೂಡಿ ಹೆಣೆಯುವುದು(ಒಂದು ನಿಮಿಷದ ಒಳಗೆ)