ಪುತ್ತೂರು:ಲೇತ್‌ವರ್ಕ್, ಪಂಪ್‌ಸೆಟ್ ದುರಸ್ಥಿ ಹಾಗೂ ಮೆಕ್ಯಾನಿಕ್ ಕೆಲಸಗಳ ಮೂಲಕ ಚಿರಪರಿಚಿತವಾದ ಪೂವಣಿ ನಾಯ್ಕ್ & ಸನ್ಸ್‌ರವರಿಂದ ಕೃಷಿಕರಿಗೆ ಪ್ರಾರಂಭಿಸಲಾದ ಕೃಷಿ ಯಂತ್ರೋಪಕರಣಗಳ ಮಾರಾಟ ಹಾಗೂ ಸೇವಾ ಮಳಿಗೆಯು ರೈಲು ನಿಲ್ದಾಣ ರಸ್ತೆಯ ಖಾಸಗಿ ಬಸ್ ನಿಲ್ದಾಣ ಬಳಿಯಲ್ಲಿ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಸಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎ.ಪಿ ಭಟ್ ದೀಪಬೆಳಗಿಸಿ ಉದ್ಘಾಟಿಸಿದರು. ರತ್ನಗಿರಿ ಇಂಪೆಕ್ಸ್‌ನ ಏರಿಯಾ ಸೇಲ್ಸ್ ಮ್ಯಾನೇಜರ್ ಸ್ಟೀವನ್ ಫ್ರಾನ್ಸಿಸ್, ಮಳಿಗೆಯ ಪಾಲುದಾರ ಸಹೋದರರಾದ ಜಯರಾಮ, ಶಿವರಾಮ, ಶಶಿಧರ್, ವೇಣುಗೋಪಾಲ ಹಾಗೂ ರಘುರಾಮ್ ಉಪಸ್ಥಿತರಿದ್ದರು.
ನಮ್ಮಲ್ಲಿ ಒಲಿಯೋ ಮ್ಯಾಕ್, ಹೋಂಡಾ, ಕಸಾಯ್, ಅಗ್ರಿಮಾರ್ಟ್ ಕಂಪನಿಗಳ ಹುಲ್ಲು ತೆಗೆಯುವ ಯಂತ್ರ, ಮರ ಕೊಯ್ಯುವ ಯಂತ್ರ, ಅಡಿಕೆ ಮರಗಳಿಗೆ ಅಡಿಕೆ ಸಿಂಪಡಿಸುವ ಯಂತ್ರ, ಕೈಗರಗಸ, ಕೈಚಾಲಿತ ಔಷಧಿ ಸಿಂಪಡನೆಯ ಯಂತ್ರ ಮೊದಲಾದ ಯಂತ್ರೋಪಕರಣಗಳ ಮಾರಾಟ, ಬಿಡಿ ಭಾಗಗಳು ಹಾಗೂ ಸರ್ವೀಸ್ ಸೌಲಭ್ಯಗಳನ್ನು ಹೊಂದಿದೆ. ಕೃಷಿ ಯಂತ್ರೋಪಕರಣಗಳು ಸರಕಾರದ ಸಹಾಯಧನದೊಂದಿಗೆ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.