ತಾಲೂಕಿನ ಮುಸ್ಲಿಂ ಜಮಾಅತ್ ಪದಾಧಿಕಾರಿಗಳಿಗೆ ಸರಕಾರಿ ಸವಲತ್ತುಗಳ ಮಾಹಿತಿ ಕರ‍್ಯಾಗಾರ

0

  • ಸರಕಾರಿ ಸವಲತ್ತುಗಳ ಸದುಪಯೋಗಕ್ಕೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯ-ಗಿರೀಶ್ ನಂದನ್

ಪುತ್ತೂರು: ಸರಕಾರವು ಸಮುದಾಯಕ್ಕೆ ಹಲವಾರು ಸವಲತ್ತುಗಳನ್ನು ನೀಡಿದ್ದು ವಿವಿಧ ಇಲಾಖೆಗಳು ಜನಸಾಮಾನ್ಯರಿಗೆ ಇಂತಹ ಸವಲತ್ತುಗಳನ್ನು ತುಪಿಸಲು ಬಹಳಷ್ಟು ಪ್ರಯತ್ನ ಪಟ್ಟರೂ ಸಂಘ ಸಂಸ್ಥೆಗಳು ತಮ್ಮ ಸಹಕಾರದೊಂದಿಗೆ ಮುಂದೆ ಬಂದು ಒಂದೊಂದು ಇಲಾಖೆಗಳ ಸವಲತ್ತುಗಳನ್ನು ಸಮುದಾಯಕ್ಕೆ ಮಾಹಿತಿ ನೀಡಿ ಅವರು ಅದರ ಸದುಪಯೋಗವನ್ನು ಪದೆದುಕೊಳ್ಳುವಂತಾಗಲು ಮುಮದೆ ಬರಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮಿಷನರ್ ಗಿರೀಶ್ ನಂದನ್ ಹೇಳಿದರು. ಅವರು ಪುತ್ತೂರು ತಾಲೂಕು ಸೀರತ್ ಕಮಿಟಿ ಆಶ್ರಯದಲ್ಲಿ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಡಿ.೧೩ರಂದು ತಾಲೂಕಿನ ಮುಸ್ಲಿಂ ಜಮಾಅತ್ ಪದಾಧಿಕಾರಿಗಳಿಗೆ ಮತ್ತು ಮಸೀದಿಯ ಖತೀಬರುಗಳಿಗೆ ನಡೆದ ಮಾಹಿತಿ ಕರ‍್ಯಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಇಂದು ಅದೆಷ್ಟೋ ಸರಕಾರಿ ಸವಲತ್ತುಗಳಿದ್ದರೂ ಅವರಿಗೆ ಅದರ ಪ್ರಯೋಜನ ಪಡೆದುಕೊಳ್ಳಲು ವಿಫಲರಾಗಿದ್ದು ಪುತ್ತೂರಿನಲ್ಲಿ ಸೀರತ್ ಕಮಿಟಿ ಮುಂದೆ ಬಂದು ಜನಸಾಮಾನ್ಯರ ಕಣ್ಣೀರ ಒರೆಸುವಂತಾಗಲಿ ಎಂದು ಶುಭಹಾರೈಸಿದರು. ಪುತ್ತೂರು ತಾಲೂಕು ಸೀರತ್ ಕಮಿಟಿ ಅಧ್ಯಕ್ಷ ಹಾಗೂ ಉದ್ಯಮಿ ಅಬ್ದುಲ್ ಖಾದರ್ ಹಾಜಿ(ಸುರೈಯ್ಯಾ) ಅಧ್ಯಕ್ಷತೆ ವಹಿಸಿದ್ದರು. ದುವಾಶರ‍್ವಚನ ನೀಡಿ ಮಾತನಾಡಿ ಪುತ್ತೂರು ಮುರ‍್ರಿಸ್ ಅಸೈಯದ್ ಅಹಮದ್ ಪೂಕೋಯ ತಂಙಳ್ ಮಾತನಾಡಿ ಸರಕಾರದ ಅದೆಷ್ಟೋ ಸವಲತ್ತುಗಳನ್ನು ಮುಸ್ಲಿಂ ಸಮುದಾಯದ ವ್ಯಕ್ತಿಗಳು ಪಡೆದುಕೊಳ್ಳುವುದರಲ್ಲಿ ಬಹಳ ವಿರಳಇದ್ದಾರೆ. ಅವರಿಗೆ ಸರಿಯಾದ ಮಾಹಿತಿ ಕೊರತೆಯಿಂದ ಮುಂದೆ ಬಂದು ಸವಲತ್ತುಗಳ ಉಪಯೋಗ ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಪುತ್ತೂರು ಸೀರತ್ ಕಮಿಟಿಯಂತಹ ಸಂಸ್ಥೆಗಳು ಇತರ ಸಂಸ್ಥೆಗಿಂತ ಒಂದು ಹೆಜ್ಜೆ ಮುಂದೆ ಬಂದು ಮಾಹಿತಿ ಶಿಬಿರದ ಜೊತೆಗೆ ರ‍್ಹ ವ್ಯಕ್ತಿಗಳಿಗೆ ಸರಕಾರದ ಸವಲತ್ತುಗಳು ಏನೆಲ್ಲಾ ಇದೆ ಅದನ್ನು ಪಡೆದುಕೊಳ್ಳುವಂತೆ ಮಾಡಬೇಕು. ಇಂತಹ ಕರ‍್ಯಕ್ರಮಗಳಿಗೆ ಪ್ರತೀ ಜಮಾಅತ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಂದೆ ಬಂದು ಸರಕಾರದ ಸವಲತ್ತುಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮುಂದೆ ಬರಬೇಕು ಎಂದರು. ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ಕರ‍್ಮಿಕ ಇಲಾಖೆಯ ಅಧಿಕಾರಿ ಗಣಪತಿ ಹೆಗ್ಡೆ ಮಾತನಾಡಿ ಸರಕಾರದ ವತಿಯಿಂದ ಫಲಾನುಭವಿಗಳಿಗೆ ಸಿಗುವ ವಿವಿಧ ಸೌಲಭ್ಯಗಳು ಫಲಾನುಭವಿಯಾದಿಗಳು ನೋಂದಾವಣೆಯಾಗಲು ಬೇಕಾದ ರ‍್ಹತೆಗಳು ಹಾಗೂ ಸೌಲಭ್ಯಗಳ ಬಗ್ಗೆ ವಿವರಿಸಿದರು. ಇಂತಹ ಸಂಘಸಂಸ್ಥೆಗಳು ಮುಂದೆ ಬಂದು ರ‍್ಹ ಫಲಾನುಭವಿಗಳು ಸರಕಾರದ ಸಲಭ್ಯವನ್ನು ಪಡೆಯುವಂತಾಗಬೇಕು ಎಂದರು. ಪುತ್ತೂರು ಅಲ್ಪಸಂಖ್ಯಾರ ಕೇಂದ್ರದ ಮಹಮ್ಮದ್ ರಫೀಕ್ ಮಾತನಾಡಿ ಅಲ್ಪಸಂಖ್ಯಾತ ಇಲಾಖೆಯಿಂದ ಮುಸ್ಲಿಂ ಸಮುದಾಯಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಸದುಪಯೋಗಪಡೆಯುವಂತೆ ವಿನಂತಿಸಿದರು. ಉಪಾಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಜಾದ್, ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ಯು ಅಬ್ದುಲ್ಲ ಹಾಜಿ ಸಾಲ್ಮರ, ಖಜಾಂಜಿ ಎಲ್‌ಟಿ ಅಬ್ದುಲ್ ರಝಾಕ್ ಹಾಜಿ, ಕಲ್ಲೇಗ ಮಸೀದಿ ಅಧ್ಯಕ್ಷ ಕೆ.ಪಿ.ಮುಹಮ್ಮದ್ ಹಾಜಿ, ಪುತ್ತೂರು ಬದ್ರಿಯಾ ಮಸೀದಿ ಖತೀಬ್ ಅಬ್ಬಾಸ್ ಹಾಜಿ ಪುತ್ತಿಗೆ ಉಪಸ್ಥಿತರಿದ್ದರು. ಸೀರತ್ ಕಮಿಟಿ ಪ್ರಧಾನ ಕರ‍್ಯರ‍್ಶಿ ಬಿ.ಎ.ಶಕೂರ್ ಹಾಜಿ ಸ್ವಾಗತಿಸಿ ಕರ‍್ಯಕ್ರಮ ಸಂಯೋಜಕ ನ್ಯಾಯವಾದಿ ನೂರುದೀನ್ ಸಾಲ್ಮರ ಪ್ರಾಸ್ತಾವಿಕ ಮಾತನಾಡಿದರು. ಹಾಜಿ ಅಬೂಬಕ್ಕರ್ ರ‍್ಲಪದವು ಕರ‍್ಯಕ್ರಮ ನಿರೂಪಿಸಿದರು. ಅಬ್ದುಲ್ ರಜಾಕ್ ಆರ್.ಪಿ., ಅಬ್ದುಲ್ ಖಾದರ್, ಮುಹಮ್ಮದ್ ಸಾಬ್, ಹಸನ್ ಹಾಜಿ ಸಿಟಿ ಬಝಾರ್, ಅಶ್ರಫ್, ಜಮಾಲ್, ಖಾದರ್ ಕಬಕ, ಅಬ್ದುಲ್ ಅಜೀಜ್ ರ‍್ಬೆ, ಸಾಲ್ಮರ ಮಹಮ್ಮದ್ ಶರೀಫ್ ಸಹಕರಿಸಿದರು.

LEAVE A REPLY

Please enter your comment!
Please enter your name here