ಫಿಲೋಮಿನಾ ಕಾಲೇಜಿನಲ್ಲಿ ಐಒಟಿ ಕಾರ್ಯಗಾರ

0

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ, ಪಿನ್ಯಾಕಲ್ ಐಟಿ ಕ್ಲಬ್ ಹಾಗೂ ಇನ್‌ಸ್ಟಿಟ್ಯೂಶನ್ಸ್ ಇನ್ನೋವೇಶನ್ ಕೌನ್ಸಿಲ್‌ಗಳ ಸಯೋಗದೊಂದಿಗೆ ಕಾಲೇಜಿನ ಗಣಕ ವಿಜ್ಞಾನ ಪ್ರಯೋಗಾಲಯದಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್(ಐಒಟಿ) ಎಂಬ ವಿಷಯದ ಕುರಿತು ದ.11 ರಂದು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಗಾರವನ್ನು ಉದ್ಘಾಟಿಸಿದ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ|ಗಣೇಶ್ ಭಟ್‌ರವರು ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಅವಿಭಾಜ್ಯ ಅಂಗ. ಅವರು ತಮ್ಮ ಜ್ಞಾನವನ್ನು ಪ್ರಸಕ್ತ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಲ್ಲಿ ಶೈಕ್ಷಣಿಕ ಕ್ಷೇತ್ರ ಹಾಗೂ ಔದ್ಯೋಗಿಕ ಕ್ಷೇತ್ರಗಳ ನಡುವಿನ ಅಂತರವನ್ನು ಕಡಿಮೆಗೊಳಿಸಹುದಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸಕ್ತ ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ ಡೇಟಾ ಅನಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗ್ಯಾವಿನ್ ಕ್ರಿಸ್ ಮಸ್ಕರೇನ್ಹಸ್ ರವರು ಮಾತನಾಡಿ, ಡೇಟಾ ಅನಾಲಿಸಿಸ್ ಕ್ಷೇತ್ರದಲ್ಲಿ ನುರಿತ ಐಒಟಿ ವೃತ್ತಿಪರರ ಅವಶ್ಯಕತೆ ಬಹಳವಾಗಿದೆ. ಹೊಸ ವಿಷಯಗಳನ್ನು ಕಲಿಯಲು ಉತ್ಸುಕರಾದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ. ಅನನ್ಯ ಸೃಜನಶೀಲತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಈ ಕ್ಷೇತ್ರದಲ್ಲಿ ಸದಾ ಅವಕಾಶಗಳಿವೆ. ಈ ತಂತ್ರಜ್ಞಾನವು ಸರಳವಾಗಿದ್ದು ಗಣಕ ವಿಜ್ಞಾನದಲ್ಲಿ ಪ್ರಥಮ ಮಾಹಿತಿ ಹೊಂದಿದ ವಿದ್ಯಾರ್ಥಿಗಳು ಸುಲಭವಾಗಿ ಕಲಿಯಬಹುದಾಗಿದೆ ಎಂದರು.

ಕಾರ್ಯಗಾರದಲ್ಲಿ 50 ವಿದ್ಯಾರ್ಥಿಗಳನ್ನು 2-3 ವಿದ್ಯಾರ್ಥಿಗಳ ತಂಡಗಳನ್ನಾಗಿ ವಿಭಜಿಸಿ ಆರ್ಡಿನೋಬೋರ್ಡ್ ಹಾಗೂ ವಿವಿಧ ರೀತಿಯ ಸೆನ್ಸಾರ್‌ಗಳನ್ನು ಬಳಸಿ ಐಒಟಿ ಮಾದರಿಗಳನ್ನುನಿರ್ಮಿಸಲು ತರಬೇತಿ ನೀಡಲಾಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾಗಿದ್ದು ಪ್ರಸ್ತುತ ಐಒಟಿ ಕ್ಷೇತ್ರದಲ್ಲಿ ಪರಿಣಿತರಾದ ಗ್ಯಾವಿನ್ ಮಸ್ಕರೇನ್ಹಸ್, ಜಗನ್ನಿವಾಸ ಬಿ, ರಂಜನ್ ನಾಯಕ್ ಹಾಗೂ ನವೀನ್‌ರವರು ವಿದ್ಯಾರ್ಥಿಗಳಿಗೆ ಐಒಟಿ ಮಾದರಿನಿರ್ಮಿಸಲು ಮಾರ್ಗದರ್ಶನ ನೀಡಿದರು.

ಕಾರ್ತಿಕ್ ಕೆ.ಆರ್ ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ಸ್ವಾಗತಿಸಿ, ಪಿನ್ಯಾಕಲ್ ಐಟಿ ಕ್ಲಬ್‌ನ ಅಧ್ಯಕ್ಷ ಜೋನ್ ವಿಸ್ಟನ್ ಡಾಯಸ್ ವಂದಿಸಿದರು, ಲಿಖಿತಾ ಎ.ಜೆ. ಕಾರ್ಯಕ್ರಮನಿರೂಪಿಸಿದರು.

LEAVE A REPLY

Please enter your comment!
Please enter your name here