ಪುತ್ತೂರಿನಲ್ಲಿ ಪುರುಷರ ರೆಡಿಮೇಡ್ ಡ್ರೆಸ್‌ಮಳಿಗೆ ’ಕಾಟನ್‌ಕಿಂಗ್” ಶುಭಾರಂಭ

0

  • ಪುತ್ತೂರಿನಲ್ಲಿ ಉತ್ತಮ ಸ್ಪಂದನೆ – ಕೌಶಿಕ್ ಮರಾಟ
  • ಪುತ್ತೂರಿನ ಜನತೆ ಹೊಸ ಬ್ರ್ಯಾಂಡ್‌ನ್ನು ಸ್ವಾಗತಿಸುತ್ತಾರೆ – ಜಿ.ಎಲ್.ಬಲರಾಮ ಆಚಾರ್ಯ

ಪುತ್ತೂರು : ಭಾರತದಾದ್ಯಂತ 230 ಶೋರೂಮ್‌ಗಳನ್ನೊಳಗೊಂಡಿರುವ ಶುದ್ಧ ನೂರಕ್ಕೆ ನೂರು ಹತ್ತಿಯಿಂದಲೇ ತಯಾರಿಸಿದ ಪುರುಷರ ರೆಡಿಮೇಡ್ ಉಡುಪುಗಳ ಸುಪ್ರಸಿದ್ಧ ಸಂಸ್ಥೆ ’ಕಾಟನ್ ಕಿಂಗ್’ ಹೊಸ ಶೋ ರೂಂ ಪುತ್ತೂರು ಜಿ.ಎಲ್. ಕಾಂಪ್ಲೆಕ್ಸ್‌ನಲ್ಲಿ ಡಿ.16ರಂದು ಬೆಳಿಗ್ಗೆ ಶುಭಾರಂಭಗೊಂಡಿತು.

ಕಾಟನ್‌ಕಿಂಗ್ ರೆಡಿಮೇಡ್ ಡ್ರೆಸ್ ಮಳಿಗೆಯನ್ನು ಫ್ಯಾಶನ್‌ಕಿಂಗ್ ಬ್ರ್ಯಾಂಡ್ ಪ್ರೈ ಲಿ.ನ ನಿರ್ದೇಶಕ ಕೌಶಿಕ್ ಮರಾಟ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿರು. ಜಿ.ಎಲ್ ಆಚಾರ್ಯ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ಅವರು ದೀಪ ಪ್ರಜ್ವಲನೆ ಮಾಡಿದರು.

ಪುತ್ತೂರಿನಲ್ಲಿ ಉತ್ತಮ ಸ್ಪಂದನೆ:

ಕಾಟನ್‌ಕಿಂಗ್ ರೆಡಿಮೇಡ್ ಡ್ರೆಸ್ ಮಳಿಗೆಯನ್ನು ಫ್ಯಾಶನ್‌ಕಿಂಗ್ ಬ್ರ್ಯಾಂಡ್ ಪ್ರೈ ಲಿ.ನ ನಿರ್ದೇಶಕ ಕೌಶಿಕ್ ಮರಾಟ ಅವರು ಮಾತನಾಡಿ ಈಗಾಗಲೇ ಮಂಗಳೂರು ಮತ್ತು ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಟನ್‌ಕಿಂಗ್ ಸಂಸ್ಥೆ ಪುತ್ತೂರಿನಲ್ಲೂ ತನ್ನ ಕಾರ್ಯವ್ಯಾಪ್ತಿಯನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಆರಂಭಿಸಿದೆ. ಪುತ್ತೂರಿನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಇದೇ ರೀತಿ ಪ್ರೋತ್ಸಾಹ ನಿರಂತರವಿಲಿ ಎಂದು ಹೇಳಿದರು.

ಪುತ್ತೂರಿನ ಜನತೆ ಹೊಸ ಬ್ರ್ಯಾಂಡ್‌ನ್ನು ಸ್ವಾಗತಿಸುತ್ತಾರೆ:

ಜಿ.ಎಲ್ ಆಚಾರ್ಯ ಗ್ರೂಪ್ಸ್‌ನ ಅಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ಅವರು ಮಾತನಾಡಿ ಪುತ್ತೂರಿನಲ್ಲಿ ಹೊಸ ಫ್ಯಾಶನ್ ಬ್ರ್ಯಾಂಡ್ ಆರಂಭಗೊಂಡಿದೆ. ಪುತ್ತೂರಿನ ಜನ ಹೊಸ ಬ್ರ್ಯಾಂಡ್‌ಗಳನ್ನು ಸದಾ ಸ್ವಾಗತಿಸುವವರಾಗಿದ್ದಾರೆ. ಹಾಗಾಗಿ ಪುತ್ತೂರಿನಲ್ಲಿ ಕಾಟನ್ ಕಿಂಗ್ ಮಳಿಗೆಗೆ ಖಂಡಿತಾ ಯಶಸ್ಸು ಸಿಗಲಿದೆ. ಪುತ್ತೂರಿನ ಹೃದಯಭಾಗದಲ್ಲಿ ಈ ಸಂಸ್ಥೆ ಇದೆ. ಅಕ್ಕಪಕ್ಕದಲ್ಲಿ ಮಹಾಲಿಂಗೇಶ್ವರ, ಲಕ್ಷ್ಮೀ ವೆಂಕಟರಮಣ ದೇವರಿದ್ದಾರೆ. ಅವರ ಶ್ರೀರಕ್ಷೆ ಈ ಸಂಸ್ಥೆಗೆ ಸದಾ ಇರಲಿ ಎಂದು ಹಾರೈಸಿದರು. ಗಣೇಶ್ ಟ್ರೇಡರ‍್ಸ್‌ನ ಮಾಲಕ ವಾಮನ್ ಪೈ ಅವರು ಶುಭ ಹಾರೈಸಿದರು. ಕಾಟನ್‌ಕಿಂಗ್‌ನ ಏರಿಯ ಮೆನೇಜರ್ ಅತುಲ್ ಮನ್‌ವಿಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಜಿ.ಎಲ್.ಆಚಾರ್ಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಅಚಾರ್ಯ ಅವರ ಪತ್ನಿ ರಾಜಿ ಬಲರಾಮ ಆಚಾರ್ಯ, ಪುತ್ರರಾದ ಲಕ್ಷ್ಮೀಕಾಂತ್ ಆಚಾರ್ಯ ಮತ್ತು ಸುಧನ್ವ ಆಚಾರ್ಯ, ಮುಳಿಯ ಜ್ಯವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ, ಪ್ರಕಾಶ್ ಉಡುಪ ಮಂಗಳೂರು, ಕಾಟನ್ ಕಿಂಗ್ ಸಂಸ್ಥೆಯ ಉಡುಪಿ ಶೋರೂಮ್‌ನ ಮ್ಯಾಕ್ಸಿಮ್ ಸೆಲ್ಡಾಣ, ಮಾರ್ಕೆಟಿಂಗ್ ಆಫಿಸರ್ ಮನೋಜ್ ಓಝಾ, ಗಣೇಶ್ ಟ್ರೇಡರ‍್ಸ್‌ನ ನರಸಿಂಹ ಪೈ, ಮಾನಸ ಟೈಮ್ಸ್ ಆಂಡ್ ಒಪ್ಟಿಕಲ್ಸ್‌ನ ಮಾಲಕ ಕೇಶವಮೂರ್ತಿ, ವಿಘ್ನೇಶ್ ಮಾರುತಿ ಸ್ಪೇರ‍್ಸ್‌ನ ದಿನೇಶ್, ದ್ವಿಚಕ್ರ ಸ್ಪೇರ್ ಪಾರ್ಟ್ಸ್‌ನ ಗುರುದತ್ತನಾಯಕ್, ಪಿ.ಸಿ ಪೈ ಕೋ ಕಂಪೆನಿಯ ಕೇಶವ ಪೈ, ಪ್ರಭಾಕರ್ ಮೊಗೇರ್ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಿದ್ದರು. ಪುತ್ತೂರು ಶೂರೋಮ್‌ನ ಪಾಲುದಾರರಾದ ಪ್ರವೀಣ್ ಕೆ.ಆರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಇನ್ನೋರ್ವ ಪಾಲುದಾರ ಪ್ರಸನ್ನ ಕೆ.ಆರ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಸಿಬ್ಬಂದಿಗಳಿಂದಲೂ ದೀಪ ಪ್ರಜ್ವಲನೆ
ಮಾಲಕನ ನೌಕರರ ಸಂಬಂಧಕ್ಕೆ ಸಾಕ್ಷಿ !

ಕಾರ್ಯಕ್ರಮದಲ್ಲಿ ಗಣ್ಯರು ದೀಪ ಪ್ರಜ್ವಲನೆಯ ಜೊತೆಯಲ್ಲಿ ಸಂಸ್ಥೆಯ ಮಾಲಕ ಪಾಲುದಾರರು ತನ್ನ ಸಿಬ್ಬಂದಿಗಳನ್ನು ಕರೆಸಿ ಅವರ ಮೂಲಕವು ದೀಪ ಪ್ರಜ್ವಲನೆ ಮಾಡಿಸಿದರು. ಇದು ಮಾಲಕ ಮತ್ತು ನೌಕರರ ಉತ್ತಮ ಸಂಬಂಧಕ್ಕೆ ಸಾಕ್ಷಿಯಾಯಿತು. ಈ ರೀತಿಯ ಉತ್ತಮ ಸಂಬಂಧ ಗ್ರಾಹಕರ ವಿಶ್ವಾಸಕ್ಕೆ ಬುನಾದಿಯಾಗಲಿದೆ ಮತ್ತು ಸಿಬ್ಬಂದಿಗಳಿಂದ ಗ್ರಾಹಕರಿಗೆ ನಗುಮೊಗದ ಸೇವೆ ಸಿಗಲಿದೆ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ ಕೆಲವರು ತಮ್ಮೊಳಗೆ ವಿಚಾರ ವಿನಿಮಯ ಮಾಡಿಕೊಂಡರು.

ಕಲೆ ಉಳಿಯದಂತಹ, ಬ್ರೀದ್ ಫ್ರೀ ವೆರಾಯಿಟಿಯಲ್ಲಿ…

ಅಪ್ಪಟ ನೂರು ಶೇಕಡ ಭಾರತೀಯ ಕಾಟನ್ ಬಟ್ಟೆಯ ಮಳಿಗೆ ಪುತ್ತೂರಿನಲ್ಲಿ ಆರಂಭಿಸಿದ್ದೇವೆ. ಕಾಟನ್ ಕಿಂಗ್ ಸಂಸ್ಥೆ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಪೂರಕವಾದ ಸಂಸ್ಥೆ. ಭಾರತದಾದ್ಯಂತ ಸುಮಾರು 250ಕ್ಕೂ ಹೆಚ್ಚು ಮಳಿಗೆಗಳನ್ನು ಈ ಸಂಸ್ಥೆ ಹೊಂದಿದೆ. ಪುತ್ತೂರಿನಲ್ಲಿ ಮಿತ ಬೆಲೆಗೆ ಉತ್ತಮ ಬಟ್ಟೆಗಳು ಈ ಸಂಸ್ಥೆಯಲ್ಲಿ ಲಭ್ಯವಿದ್ದು, ಪುರುಷರ ಪ್ಯಾಂಟ್, ಶರ್ಟ್, ಜೀನ್ಸ್, ಟೀ ಶರ್ಟ್‌ಗಳು ಲಭ್ಯ. ಕಲೆ ಉಳಿಯದಂತಹ ಬಟ್ಟೆಗಳು. ಬೇಸಿಗೆ ಬೆವರನ್ನು ಹಿಡಿಟ್ಟುಕೊಳ್ಳುವ (ಬ್ರೀದ್ ಫ್ರೀ)ಹಲವು ನಮೂನೆಯ ಬಟ್ಟೆಗಳು ಕಾಟನ್ ಕಿಂಗ್ ವಿಶೇಷತೆಯಾಗಿದೆ.

ಪ್ರಸನ್ನ ಕೆ.ಆರ್, ಪುತ್ತೂರು ಶೋರೂಮ್ ಪಾಲುದಾರರು

LEAVE A REPLY

Please enter your comment!
Please enter your name here