ಪುತ್ತೂರು: ಬೆಂಗಳೂರಿನಲ್ಲಿ ದ.17 ಮತ್ತು 18 ರಂದು ನಡೆಯಲಿರುವ ಗ್ಲೋಬಲ್ ಬೆಂಗಳೂರು ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ನೂಜಿ ತರವಾಡು ಮನೆಯ ಅಕ್ಷಯ ರೈ ದಂಬೆಕ್ಕಾನ ನಿರ್ಮಾಣ ನಿರ್ದೇಶನದ ಕಿರುಚಿತ್ರಗಳು ಆಯ್ಕೆಗೊಂಡಿವೆ.
ಫೆಸ್ಟಿವಲ್‌ನಲ್ಲಿ ಶಾರ್ಟ್ ಫಿಲ್ಮ್, ಡಾಕ್ಯುಮೆಂಟರಿ ಫಿಲ್ಮ್, ಫೋಟೋಗ್ರಫಿ, ಸ್ಟ್ರೀಪ್ಟ್, ಪೋಸ್ಟರ್, ಫ್ಯುಚರ್ ಫಿಲ್ಮ್, ಎಲ್‌ಬಿಟಿಕ್ಯೂ ಶಾರ್ಟ್ ಇತ್ಯಾದಿ ವಿಭಾಗದಲ್ಲಿ 28 ದೇಶಗಳ 142 ಫಿಲ್ಮ್‌ಗಳ ಪ್ರದರ್ಶನ ನಡೆಯಲಿದೆ. ಉತ್ತಮ ನಿರ್ದೇಶಕ, ನಟ,ನಟಿ, ಪೋಷಕ ನಟ, ಬಾಲ ನಟ,ನಟಿ,ಸಿನಿಮಾಟೋಗ್ರಫಿ, ಸಂಕಲನಕಾರ, ಉತ್ತಮ ಕಿರುಚಿತ್ರ, ಡಾಕ್ಯುಮೆಂಟರಿ ಚಿತ್ರ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಫಿಲ್ಮ್ ಫೆಸ್ಟಿವಲ್‌ಗೆ ಚಿತ್ರರಂಗದ ಅನೇಕ ದಿಗ್ಗಜರು ಆಗಮಿಸಲಿದ್ದಾರೆ. ಇಂತಹ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಕ್ಷಯ ರೈ ದಂಬೆಕ್ಕಾನ ನಿರ್ಮಾಣದ ಕಿರುಚಿತ್ರ ಕೂಡ ಪ್ರದರ್ಶನಗೊಳ್ಳುತ್ತಿದೆ.