ಶೇಕಮಲೆ- ಬೊಳ್ಳಾಡಿ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ

0

ಅನುದಾನವನ್ನು ಪ್ರತೀ ಗ್ರಾಮಗಳಿಗೆ ಸಮಪ್ರಮಾಣದಲ್ಲಿ ಹಂಚಿಕೆ: ಮಂಜುನಾಥ ಭಂಡಾರಿ

ಪುತ್ತೂರು: 387 ಗ್ರಾಮಪಂಚಾಯತ್‌ಗಳಿಗೆ ನಾನು ಅನುದಾನವನ್ನು ಹಂಚಿಕೆ ಮಾಡಬೇಕಾಗಿದ್ದು, ನಾನು ವಿಧಾನಪರಿಷತ್ ಸದಸ್ಯನಾಗಲು ಈ ಎಲ್ಲಾ ಗ್ರಾಪಂ ಸದಸ್ಯರು ಕಾರಣರಾಗಿದ್ದು ಎಲ್ಲರಿಗೂ ಅನುದಾನವನ್ನು ಸಮಪ್ರಮಾಣದಲ್ಲಿ ಹಂಚಿಕೆ ಮಾಡುವುದಾಗಿ ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಹೇಳಿದರು.


ಅವರು ದ. 16 ರಂದು ಒಳಮೊಗ್ರು ಗ್ರಾಮದ ಶೇಕಮಲೆ- ಬೊಳ್ಳಾಡಿ ರಸ್ತೆಗೆ ಕಾಂಕ್ರೀಟ್‌ಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಪುತ್ತೂರಿನಲ್ಲಿ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿಲ್ಲ. ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್ ಸರಕಾರ ಇದ್ದಲ್ಲಿ ಹೆಚ್ಚು ಹೆಚ್ಚು ಅನುದಾನವನ್ನು ಬೇಕಾದಕಡೆಗಳಲ್ಲಿ ಇಡಬಹುದಿತ್ತು. ಜನರ ಬೇಡಿಕೆ ಇದೆ ಆದರೆ ನಮ್ಮಲ್ಲಿ ಅನುದಾನವಿಲ್ಲದೇ ಇರುವುದರಿಂದ ಬೇಡಿಕೆ ಈಡೇರಿಕೆಗೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಅದಿಕಾರಕ್ಕೆ ಬಂದಲ್ಲಿ ಜನರ ಬೇಡಿಕೆ ಈಡೇರಲಿದೆ ಎಂದು ಹೇಳಿದರು.

ಮಾಜಿ ಶಾಸಕಿ ಶಕುಂತಳಾಶೆಟ್ಟಿ ಮತ್ತು ಒಳಮೊಗ್ರು ಗ್ರಾಪಂ ಸದಸ್ಯೆ ಚಿತ್ರಾ ಬಿ ಸಿ ದೀಪ ಬೆಳಗಿಸಿದರು. ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜರಿ ಗುದ್ದಲಿ ಪೂಜೆ ನೆರವೇರಿಸಿದರು.

ಗ್ರಾಪಂ ಸದಸ್ಯರಾದ ಶೀನಪ್ಪ ನಾಯ್ಕ್ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದಾಲಿ, ರಾಜೀವ್‌ಗಾಂಧಿ ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ಸುಭಾಶ್ ಚಂದ್ರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಕೂರ್ ಹಾಜಿ , ರಾಜೀವಗಾಂಧಿ ಪಂಚಾಯತ್ ರಾಜ್ ಘಟಕದ ಪುತ್ತೂರು ಬ್ಲಾಕ್ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷೆ ಸುಂದರಿ. ಪಿ, ಸದಸ್ಯರುಗಳಾದ ವಿನೋದ್‌ಶೆಟ್ಟಿ ಮುಡಾಲ, ಯು ಕೆ ಅಶ್ರಫ್ ಉಜಿರೋಡಿ, ಶಾರದಾ ಪಿ, ಒಳಮೊಗ್ರು ಗ್ರಾಪಂ ಅಭಿವೃದ್ದಿ ಅಧಿಕಾರಿ ಅವಿನಾಶ್, ಒಳಮೊಗ್ರು ವಲಯ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಬೊಳ್ಳಾಡಿ, ಕಾರ್ಯದರ್ಶಿ ಸಲಾಮುದ್ದೀನ್ ಕುಂಬ್ರ, ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಶರೂನ್ ಸಿಕ್ವೇರಾ, ಕೇಶವ ಪಡೀಲ್, ಮಮತಾ ಬೊಳ್ಳಾಡಿ,ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ರಫೀಕ್ ದರ್ಖಾಸು ಶೇಕಮಲೆ,ಚೇತನ್ ಅಜಲಡ್ಕ, ಯೋಗಿ ಕುರಿಕ್ಕಾರ, ಸಿದ್ದಿಕ್ ಶೇಕಮಲೆ, ಅಬ್ಬಾಸ್ ಬೊಳ್ಳಾಡಿ, ಮೊಯಿದು ಬೊಳ್ಳಾಡಿ,ರಹೀಸ್ ಶೇಕಮಲೆ, ಸನತ್ ರೈ ಏಳ್ನಾಡುಗುತ್ತು , ಬಶೀರ್ ಕೌಡಿಚ್ಚಾರ್ ಮತ್ತಿತರರು ಉಪಸ್ತಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಶಶಿಕಿರಣ್ ರೈ ನೂಜಿಬೈಲ್ ಸ್ವಾಗತಿಸಿ, ಅಶೋಕ್ ಬೊಳ್ಳಾಡಿ ವಂದಿಸಿದರು.

ಶೇಕಮಲೆ- ಬೊಳ್ಳಾಡಿ ರಸ್ತೆಯು ಅನೇಕ ಮನೆಗಳಿಗೆ ಸಂಪರ್ಕ ರಸ್ತೆಯಾಗಿದ್ದು ಈ ರಸ್ತೆಗೆ ಇದುವರೆಗೂ ಯಾವುದೇ ಜನಪ್ರತಿನಿಧಿಯಾಗಲಿ, ಇಲಾಖೆಯಿಂದಾಗಲಿ ರಸ್ತೆ ಅಭಿವೃದ್ದಿಯಾಗಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯರ ಅನುದಾನದಿಂದ ಕಾಂಕ್ರೀಟ್ ಆಗುತ್ತಿದ್ದು ಈ ಭಾಗದ ಜನರಿಗೆ ತುಂಬಾ ಸಂತೋಷವನ್ನು ತಂದಿದೆ. ಶಾಸಕರು, ಸಂಸದರು ಇಲ್ಲಿನ ರಸ್ತೆಗೆ ಯಾಕೆ ಅನುದಾನ ಇಡುತ್ತಿಲ್ಲ ಎಂಬುದು ನಮಗೆ ಗೊತ್ತಾಗಲಿಲ್ಲ. ಈ ರಸ್ತೆಯಲ್ಲೂ ಜನ ಸಂಚಾರವಿದ್ದು ಅನುದಾನವನ್ನು ನೀಡುವ ಮೂಲಕ ಜನರ ಬೇಡಿಕೆಯನ್ನು ಈಡೇರಿಸುವಂತೆ ಮನವಿಯನ್ನು ಮಾಡುತ್ತಿದ್ದೇನೆ.
ಅಶೋಕ್‌ಪೂಜಾರಿ ಬೊಳ್ಳಾಡಿ, ವಲಯ ಕಾಂಗ್ರೆಸ್ ಅಧ್ಯಕ್ಷರು

LEAVE A REPLY

Please enter your comment!
Please enter your name here