ರಾಮಕುಂಜ: ಕಡಬ ತಾಲೂಕಿನ ಕೊಲ ಗ್ರಾಮದ ಸಬಳೂರು ಅಯೋಧ್ಯಾನಗರದ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ದೀಪಾವಳಿ ಪ್ರಯುಕ್ತ ಹತ್ತೊಂಬತ್ತನೇ ವರ್ಷದ ಸಾಮೂಹಿಕ ಗೋಪೂಜೆ, ಕ್ರೀಡಾಕೂಟ ಸಬಳೂರು ಶ್ರೀರಾಮ ಭಜನಾ ಮಂದಿರದ ಆವರಣದಲ್ಲಿ ಅ.20ರಂದು ನಡೆಯಿತು.

ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ ಗೋಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಮಂದಿರದ ಭಜನಾ ಅರ್ಚಕ ರಾಜೀವ ಗೌಡ ಪಟ್ಟೆದಮೂಲೆ, ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಗೌಡ, ಮಾಜಿ ಗೌರವಾಧ್ಯಕ್ಷ ಪರಮೇಶ್ವರ ಗೌಡ ಸಬಳೂರು, ಆಲಂಕಾರು ಸಿ.ಎ.ಬ್ಯಾಂಕ್ ನಿರ್ದೇಶಕ ಅಶೋಕ್ ಕೊಲ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಯತಿನ್ ಪಟ್ಟೆದಮೂಲೆ, ಪ್ರಮುಖರಾದ ಕುಶಾಲಪ್ಪ ಗೌಡ ಕಡೆಂಬ್ಯಾಲ್, ರಾಮಯ್ಯ ಗೌಡ ಖಂಡಿಗ, ಪ್ರಶಾಂತ್ ಸಬಳೂರು, ಗುರುಪ್ರಸಾದ್ ಪಟ್ಟೆದಮೂಲೆ, ಉಮೇಶ್ ಬುಡಲೂರು, ಮೋಹನ ಗೌಡ ಓಕೆ, ಭರತ್ ಓಕೆ ಮತ್ತಿತರರು ಉಪಸ್ಥಿತರಿದ್ದರು, ಬಳಿಕ ನಡೆದ ವಿವಿಧ ಕ್ರೀಡಾಕೂಟಗಳನ್ನು ರಾಜೀವ ಗೌಡ ಉದ್ಘಾಟಿಸಿದರು.