ಪುತ್ತೂರು: ಪುತ್ತೂರಿನಲ್ಲಿ ಶಾಂತಿ ಸ್ನೇಹ ಸೌಹಾರ್ದತೆ ನಮ್ಮೊಂದಿಗಿರಲಿ ಎಂಬ ಉದ್ದೇಶದಿಂದ ಕ್ಲಾಸಿಕ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸೌದಿ ಅರೇಬಿಯಾ ಪುತ್ತೂರು, ಟೆನ್‌ಕೆಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಅಬುದಾಬಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ.20-25ರತನಕ ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಸಂಚಾಲಕ ರಝಾಕ್ ಬಪ್ಪಳಿಗೆ ತಿಳಿಸಿದರು.
ಡಿ.15ರಂದು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ರೀಡಾಕೂಟದ ಉದ್ಘಾಟಕರಾಗಿ ಭರತ್ ಪ್ರಿಂಟರ್ಸ್ ಕಲ್ಲಾರೆಯ ಭರತ್ ಕುಮಾರ್, ಕಿಲ್ಲೆ ಪ್ರತಿಷ್ಟಾಪನಾ ಸಮಿತಿ ಅಧ್ಯಕ್ಷ ಕಡಮಜಲು ಸುಭಾಷ್ ರೈ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು. ಕೇಂದ್ರ ಜುಮಾ ಮಸೀದಿ ಪುತ್ತೂರಿನ ಅಧ್ಯಕ್ಷ ಎಲ್ ಟಿ ಅಬ್ದುಲ್ ರಜಾಕ್ ಹಾಜಿ, ಮಾಯಿದೆ ದೇವುಸ್ ಚರ್ಚ್ ಪುತ್ತೂರಿನ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಜಗನ್ನಿವಾಸ್ ರಾವ್ ಸೇರಿದಂತೆ ಸಮಾರೋಪ ಸಮಾರಂಭದಲ್ಲಿ ಹಲವಾರು ರಾಜಕೀಯ ನೇತಾರರು ಸಾಮಾಜಿಕ ಮುಂದಾಳುಗಳು ಭಾಗವಹಿಸಲಿದ್ದಾರೆ ಎಂದರು.
ನಾಡಿನಲ್ಲಿ ಒಗ್ಗಟ್ಟು ಏರ್ಪಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಿರಿಯ ಗಣಪತಿ ನಾಯ್ಕ್ ಸ್ಮಾರಕವಾಗಿ ಪುತ್ತೂರಿನಲ್ಲಿ ಸ್ಟಿಚ್‌ಬಾಲ್ ಓವರ್‌ಆರ್ಮ್ ಕ್ರೀಡಾಕೂಟ 20 ಓವರ್‌ಗಳ 2 ತಂಡಗಳ ರಚನೆ ಮಾಡಿ 14-16 ವರ್ಷದ ಹುಡುಗರನ್ನು ಸೇರಿ ಕ್ರೀಡಾಕೂಟವನ್ನು ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಇದು ಈ ಬಾರಿಯ ವಿಶೇಷತೆ ಎಂದ ಅವರು, ಇದು ಡಿ. 24 ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 12 ರ ತನಕ ನಡೆಯಲಿದ್ದು, ವಿವಿಧ ಇಲಾಖೆಗೆ ಮಧ್ಯಾಹ್ನ 2ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಈ ಕ್ರೀಡಾ ಪಂದ್ಯಾಟವನ್ನು ಆಯೋಸಿದ್ದೇವೆ. ಇದರೊಂದಿಗೆ ರೋಲಿಂಗ್ ಟ್ರೋಫಿ ಕ್ರಿಕೆಟ್ ನಡೆಯಲಿದೆ ಎಂದರು.
ಪ್ರಥಮವಾಗಿ ಕಿಲ್ಲೆ ಕಪ್ ಕಿಲ್ಲೆ ಸ್ಮರಣಾರ್ಥ ಕಿಲ್ಲೆ ಟ್ರೋಫಿ 2022 ಜೊತೆಗೆ “ಹಳ್ಳಿ ಹುಡುಗರು ಪೇಟೆ ಕಪ್” ಪುತ್ತೂರು ತಾಲೂಕಿನ ಗ್ರಾಮದ ಹುಡುಗರನ್ನು ಒಟ್ಟು ಸೇರಿಸಿ ತಂಡವನ್ನು ರಚನೆ ಮಾಡಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಾಸಿಕ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸೌದಿ ಅರೇಬಿಯಾದ ಅಧ್ಯಕ್ಷ ಉರೈಸ್ ಪುತ್ತೂರು, ಮಾಜಿ ಗೌರವ ಅಧ್ಯಕ್ಷ ಹರೀಶ್ ಕಾಮತ್, ಸಹ ಸಂಚಾಲಕ ಅರುಣ್ ಕುಮಾರ್ ಉಪಸ್ಥಿತರಿದ್ದರು.