ಮಂಗಳೂರು:ನಗರದ ಲ್ಯಾಂಡ್ ಟ್ರೇಡ್ಸ್‌ನ 30ನೇ ವರ್ಷಾಚರಣೆ ಪ್ರಯುಕ್ತ ದ.19ರಿಂದ 22ರವರೆಗೆ ಲ್ಯಾಂಡ್ ಟ್ರೇಡ್ ಪ್ರಾಪರ್ಟಿ ಶೋ ನಡೆಯಲಿದೆ.ಒಂದೇ ಸೂರಿನಡಿ ಗ್ರಾಹಕರಿಗೆ ಸಮಗ್ರ ಮಾಹಿತಿ ಮತ್ತು ಮನೆ ಕೊಳ್ಳುವವರಿಗೆ ಸುವರ್ಣವಕಾಶ ಇದಾಗಿದೆ.
ಕಳೆದ 30 ವರ್ಷಗಳಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯು ಗ್ರಾಹಕರ ಅನುಕೂಲತೆಗೆ ತಕ್ಕಂತೆ ನೂತನ ಪರಿಕಲ್ಪನೆಯ ಜೀವನ ಶೈಲಿಯ ಅಪಾರ್ಟ್ ಮೆಂಟ್‌ಗಳ ಸರಣಿಯನ್ನು ಅನುಷ್ಠಾನಗೊಳಿಸಿದೆ. ಈ ಕುರಿತು ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಮಾಹಿತಿ ಒದಗಿಸಲು ನಾಲ್ಕು ದಿನದ ಪ್ರಾಪರ್ಟಿ ಶೋ ಹಮ್ಮಿಕೊಳ್ಳಲಾಗಿದೆ ಎಂದು ಲ್ಯಾಂಡ್ ಟ್ರೇಡ್ಸ್‌ನ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಗರದ ಬಲ್ಮಠದ ಕಲೆಕ್ಟರ್ ಗೇಟ್‌ನ ಬಳಿಯ ಲ್ಯಾಂಡ್ ಟ್ರೇಡ್‌ನ ವಾಣಿಜ್ಯ ಹೆಗ್ಗುರುತು ಮೈಲ್ ಸ್ಟೋನ್ -25 ಸಂಕೀರ್ಣದಲ್ಲಿ ಜರಗುವ ಈ ಮೇಳವು ಲ್ಯಾಂಡ್ ಟ್ರೇಡ್ ಬಿಲ್ಡರ್ಸ್ ಆಂಡ್ ಡೆವೆಲಪರ್ಸ್ ಯಶಸ್ವಿ 30 ವರ್ಷಗಳ ಆಚರಣೆಯಾಗಲಿದೆ ಎಂದರು.
ಚಿನ್ನದ ನಾಣ್ಯದ ಕೊಡುಗೆ: ಗ್ರಾಹಕರ ಅಭಿರುಚಿಗೆ ತಕ್ಕಂತೆ ಫ್ಲಾಟ್ ನಿರ್ಮಿಸಿ ಕೊಡುವ ಮೂಲಕ ಮನೆ ಮಾತಾಗಿರುವ ಲ್ಯಾಂಡ್ ಟ್ರೇಡ್ ಹೊಸ ತಲೆ ಮಾರಿನ ಅಭಿರುಚಿಗೆ ತಕ್ಕಂತೆ ಅಪಾರ್ಟ್ ಮೆಂಟ್‌ಗಳನ್ನು ಒದಗಿಸುತ್ತಾ ಬಂದಿದೆ. ಪ್ರಾಪರ್ಟಿ ಶೋನಲ್ಲಿ ಗ್ರಾಹಕರು ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಯಾವುದೇ ಸಮಯದಲ್ಲಿ ಮಾಹಿತಿ ಪಡೆಯಬಹುದು. ಪ್ರತಿ ಬುಕ್ಕಿಂಗ್‌ನಲ್ಲಿ ಚಿನ್ನದ ನಾಣ್ಯದ ಕೊಡುಗೆ, ಶೂನ್ಯ ಜಿಎಸ್‌ಟಿಗಳನ್ನು ಆಯ್ದ ಯೋಜನೆಗಳಲ್ಲಿ ಮತ್ತು ಗೃಹ ಸಾಲದಲ್ಲಿ ಶೂನ್ಯ ನಿರ್ವಹಣಾ ಶುಲ್ಕದ ಸೌಲಭ್ಯಗಳನ್ನು ಗ್ರಾಹಕರು ಪಡೆಯಬಹುದು ಮತ್ತು ಯೋಜನೆ ಪ್ರಗತಿಯಲ್ಲಿರುವ ಸ್ಥಳಕ್ಕೆ ಅಗತ್ಯವಿದ್ದರೆ ಗ್ರಾಹಕರನ್ನು ಕರೆದೊಯ್ಯಲಾಗುವುದು ಎಂದರು. ಅತೀ ಸವಾಲುಗಳಿಂದ ಕೂಡಿರುವ ಈ ವ್ಯವಹಾರೋದ್ಯಮ ಕ್ಷೇತ್ರದಲ್ಲಿ 30 ಸಾರ್ಥಕ ವರ್ಷಗಳನ್ನು ಹೊಂದಿರುವುದಕ್ಕೆ ಅಪಾರ ಬೆಂಬಲ ನೀಡುತ್ತಿರುವ ಗ್ರಾಹಕರಿಗೆ ಕ್ರತಜ್ಞತೆ ಸಲ್ಲಿಸುವುವುದು ಕೂಡ ಈ ಮೇಳದ ಆಯೋಜನೆಯಾಗಿದೆ ಎಂದರು. ಕರ್ಣಾಟಕ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳು ಈ ಮೇಳದಲ್ಲಿ ಭಾಗವಹಿಸಲಿವೆ ಎಂದು ಅವರು ಮಾಹಿತಿ ನೀಡಿದರು.
ಲ್ಯಾಂಡ್ ಟ್ರೇಡ್ಸ್‌ನ ಪ್ರಸಕ್ತ ಯೋಜನೆಗಳು: ಸಂಸ್ಥೆಯ ಸಿಇಓ ರಮಿತ್ ಕುಮಾರ ಸಿದ್ದಕಟ್ಟೆ 5 ಮಹತ್ವದ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಕದ್ರಿ ಶಿವಭಾಗ್‌ನಲ್ಲಿ ನಿಸರ್ಗ ರಮಣೀಯ ಎತ್ತರ ಪ್ರದೇಶದ 2.32ಎಕ್ರೆ ಜಾಗದಲ್ಲಿ ಲ್ಯಾಂಡ್ ಟ್ರೇಡ್ಸ್ ಶಿವಭಾಗ್ 34 ಅಂತಸ್ತುಗಳ ಅರಮನೆ ಸದೃಶ ರೆಸಿಡೆನ್ಸಿಯಲ್ ಯೋಜನೆ ಶೇಕಡ 60ರಷ್ಟು ಜಮೀನನ್ನು ಮುಕ್ತ ವಲಯ, ಹಸಿರು ವಲಯ, ಜಾಗಿಂಗ್ ಟ್ರಾಕ್, ಕಾರಂಜಿ, ಅಂಫಿ ಥಿಯೆಟರ್‌ಗೆ ಮೀಸಲಾಗಿರಿಸಲಾಗುವುದು. ಶೇಕಡ 40ರಷ್ಟು ಮಾತ್ರ ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಲಾಗುವುದು ಎಂದರು. ಬೆಂದುರುವೆಲ್‌ನಲ್ಲಿ 32 ಅಂತಸ್ತುಗಳ ಗಗನಚುಂಬಿ ಅಲ್ಟೂರ ಮಣ್ಣ ಗುಡ್ಡ ಗಾಂಧಿ ನಗರದ ನಕ್ಷತ್ರ ಉರ್ವ ಮಾರಿ ಗುಡಿಯ ಆದಿರ ಉಳ್ಳಾಲದಲ್ಲಿ 1.5. ಜಾಗದಲ್ಲಿ ಕಾಮತ್ ಗಾರ್ಡನ್ 16 ಸ್ವತಂತ್ರ ಮನೆ ಯೋಜನೆಗಳ ಬಗ್ಗೆ ಮೇಳದಲ್ಲಿ ಮಾಹಿತಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಫೋರ್ ವಿಂಡ್ಸ್ ಕಮ್ಯುನಿಕೇಶನ್‌ನ ಇ.ಫೆರ್ನಾಂಡಿಸ್ ಉಪಸ್ಥಿತರಿದ್ದರು.