ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಹಾಗೂ ಸಂತ ಫಿಲೋಮಿನಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಒಪ್ಪಂದದ ಮೇರೆಗೆ ಕೆದಂಬಾಡಿ ಗ್ರಾಮವನ್ನು 5 ವರ್ಷಗಳ ಕಾಲ ದತ್ತು ಸ್ವೀಕಾರ ಒಡಂಬಡಿಕೆ ನಡೆದಿದ್ದು ಅದರಂತೆ ಸ್ವಚ್ಛ ಕೆದಂಬಾಡಿ ಪರಿಕಲ್ಪನೆಯಲ್ಲಿ ಎರಡನೇ ಕಾರ್ಯಕ್ರಮ ದ.18ರಂದು ನಡೆಯಿತು. ಇದರಲ್ಲಿ ಸ್ವಚ್ಛ ಕೆದಂಬಾಡಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕುಂಬ್ರ ಪೇಟೆಯಿಂದ ಸಾರೆಪುಣಿ ತನಕ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆ ಮಾಡಿದರು. ರಸ್ತೆ ಬದಿಗಳಲ್ಲಿ ಬಿದ್ದು ಕೊಂಡಿದ್ದ ಪ್ಲಾಸ್ಟಿಕ್, ಕಸ ಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ, ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈಯವರು ಸ್ವಚ್ಛ ಕೆದಂಬಾಡಿ ಇದರ ಜಾಗೃತಿ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಅಸ್ಮಾ ಗಟ್ಟಮನೆ, ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ನಿತೀಶ್ ಕುಮಾರ್ ಶಾಂತಿವನ, ಪುರಂದರ ರೈ ಕೋರಿಕ್ಕಾರು, ಚಂದ್ರ ಇದ್ಪಾಡಿ, ಶಿವರಾಮ ಗೌಡ ಇದ್ಯಾಪೆ, ಮೋಹನ್ ಆಳ್ವ ಮುಂಡಾಲಗುತ್ತು, ರಾಜೀವ ರೈ ಕೋರಂಗ, ವರ್ತಕರ ಸಂಘದ ಸದಸ್ಯ ಹನೀಫ್ ಮತ್ತಿತರರು ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕರಾದ ಪುಷ್ಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಸದಸ್ಯ ಕೃಷ್ಣ ಕುಮಾರ್ ಇದ್ಯಪೆ ವಂದಿಸಿದರು.