ತುಳು ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ – ಚನಿಲ ತಿಮ್ಮಪ್ಪ ಶೆಟ್ಟಿ
ಪುತ್ತೂರು: ತುಳುಕೂಟೊ ಪುತ್ತೂರು ಇದರ ಸುವರ್ಣ ಮಹೋತ್ಸವದ ಲಾಂಛನವನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಕೊಂಬೊಟ್ಟುವಿನಲ್ಲಿರುವ ಬಂಟರ ಭವನದಲ್ಲಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ಸದ್ಯದಲ್ಲೇ ನಡೆಯಲಿರುವ ಪುತ್ತೂರು ತಾಲೂಕು ತುಳುವೆರೆ ಮೇಳೊ ಮತ್ತು ಸುವರ್ಣ ವರ್ಷದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ತಾಲೂಕು ತುಳುವೆರೆ ಮೇಳೊ ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ತುಳುವರ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿ ಸರ್ವರ ಸಹಕಾರ ಕೋರಿದರು. ಲಾಂಛನವನ್ನು ಸೊಗಸಾಗಿ ಚಿತ್ರಿಸಿದ ಚಿತ್ರಕಲಾ ಅಧ್ಯಾಪಕ ಜಗನ್ನಾಥ ಅರಿಯಡ್ಕರವರನ್ನು ಮುಖ್ಯ ಅತಿಥಿಯವರು ಹೂ ನೀಡಿ ಗೌರವಿಸಿದರು. ಸಮ್ಮೇಳನ ಸಮಿತಿಯ ಸಂಚಾಲಕ ಹಾಗೂ ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಸ್ವಾಗತಿಸಿ ವಂದಿಸಿದರು.
ಪ್ರಮುಖರಾದ ‘ಸಹಕಾರ ರತ್ನ’ ದಂಬೆಕ್ಕಾನ ಸದಾಶಿವ ರೈ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ವೆಂಕಟರಮಣ ಗೌಡ ಕಳುವಾಜೆ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಅಬ್ದುಲ್ ಸಮದ್ ಬಾವಾ, ತುಳು ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೇಮಲತಾ ರಾವ್, ಕೊಂಕಣಿ ಅಕಾಡೆಮಿಯ ಮಾಜಿ ಸದಸ್ಯ ದಾಮೋದರ ಭಂಡಾರ್ಕರ್, ರಂಗಕರ್ಮಿ ಐ.ಕೆ. ಬೊಳುವಾರು, ಅನಿತಾ ಹೇಮನಾಥ ಶೆಟ್ಟಿ, ಮಲ್ಲಿಕಾ ಜೆ. ರೈ, ಗಣೇಶ್ ಶೆಟ್ಟಿ, ಚೇತನ್ ಕುಮಾರ್ ಕೆಮ್ಮಾಯಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ಮಹಮ್ಮದ್ ರಫೀಕ್ ದರ್ಬೆ, ಮೋಹನ್ ಸಿಂಹವನ, ತುಳುಕೂಟದ ಪದಾಧಿಕಾರಿಗಳಾದ ಸಂತೋಷ್ ಶೆಟ್ಟಿ ಎಸ್, ಹೀರಾ ಉದಯ್, ನಯನಾ ರೈ ನೆಲ್ಲಿಕಟ್ಟೆ, ಉಲ್ಲಾಸ್ ಪೈ, ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್, ನರೇಶ್ ಜೈನ್, ನವೀನ್‌ಚಂದ್ರ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.