ಆಲಂಕಾರು: ಎಸ್.ಪಿ.ವೈಎಸ್.ಎಸ್ ಯೋಗ ಸಮಿತಿ ಮಂಗಳೂರು ವಲಯದಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನದಾಸ್ ಎಸ್ ಸುಳ್ಳಿ, ಕಾರ್ಯನಿರ್ವಹಣಾ ಅಧಿಕಾರಿ ನಿಂಗಯ್ಯ, ಮಾಸ್ಟರ್ ಪ್ಲಾನ್ ಸದಸ್ಯ ಮನೋಜ್ ಕುಮಾರ್, ಸಮಿತಿಯ ಪ್ರಾಂತ ಸಂಯೋಜಕ ರಾಘವೇಂದ್ರ ಪ್ರಭು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಎಸ್‌ಪಿವೈಎಸ್‌ಎಸ್ ಪ್ರಾಂತ ಸಂಚಾಲಕ ರವೀಶ್ ಕುಮಾರ್, ಹರೀಶ್ ಕೋಟ್ಯಾನ್, ಪ್ರಾಂತ ಪ್ರತಿನಿಧಿ ಶಿವಾನಂದ ರೈ, ಜಿಲ್ಲಾ ಸಂಚಾಲಕ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 3000ಕ್ಕೂ ಹೆಚ್ಚು ಯೋಗಪಟುಗಳು, ಕೇರಳದ 270 ಯೋಗಪಟು ಗಳು ವಿಶಾಲವಾದ ರಥ ಬೀದಿಯಲ್ಲಿ ನಮಸ್ಕಾರ ಪ್ರದರ್ಶನ ಮಾಡಿದರು. ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರದ ಮಹತ್ವದ ಬಗ್ಗೆ ದಯಾನಂದ ದಯಾನಂದ ಕಟೀಲು ಮಾಹಿತಿ ನೀಡಿದರು.
ಪ್ರಮುಖರಾದ ಹರೀಶ್ ಅಂಚನ್ ಸುರತ್ಕಲ್, ಗಣೇಶ ಸುವರ್ಣ, ಅಶೋಕ ಕುಮಾರ್ ಜೈನ್, ಗೋಕುಲ್‌ನಾಥ್ ಶೆಣೈ, ಕನಕ ಅಮೀನ್, ನಾರಾಯಣ ಶಬರಾಯ, ಲಕ್ಷ್ಮೀನಾರಾಯಣ, ಪ್ರತಾಪ್ ರಾವ್, ಶಿವಪ್ರಸಾದ್, ಲೋಕೇಶ ಪೊಳಲಿ, ತಾರಾ ಸುರತ್ಕಲ್, ಗೀತಾ ಶೆಟ್ಟಿ ಶುಭಾ ಕಾವೂರು, ಲಲನ್ ಕುಮಾರ್, ಈಶ್ವರ ಕೊಟ್ಟಾರಿ, ಪ್ರಶಾಂತ್ ಉಳ್ಳಾಲ, ಉದಯ ಅಮ್ಮಣ್ಣಾಯ, ನಾಗರಾಜ್, ಲೀಲಾವತಿ ಸುರತ್ಕಲ್, ವೆಂಕಟೇಶ್, ಸುಲತಾ ಪುತ್ತೂರು, ಯೋಗಿಶ್ ಆಚಾರ್ಯ, ನಯನಾ ರೋಡ್, ಜಯಶ್ರೀ ಸುಬ್ರಹ್ಮಣ್ಯ, ಶ್ರೀಕುಮಾರ್, ಪಿ.ಎಸ್ ಶರ್ಮ ಭಾಗವಹಿಸಿದ್ದರು. ಪ್ರಭಾಕರ ಸುಬ್ರಹ್ಮಣ್ಯ ವಂದಿಸಿದರು. ರೂಪಾ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.